ಭರವಸೆ ಕೊಡ್ತೀನಿ ಒಬ್ರನ್ನೂ ಬಿಡಲ್ಲ : ಭ್ರಷ್ಟರಿಗೆ ಮೋದಿ ಎಚ್ಚರಿಕೆ

Posted By:
Subscribe to Oneindia Kannada

ದೀಸಾ (ಗುಜರಾತ್), ಡಿಸೆಂಬರ್ 10 : ಚರ್ಚೆಗೆ ಬರದೆ ಮೋದಿ ಪಲಾಯನ ಮಾಡುತ್ತಿದ್ದಾರೆ, ಲೋಕಸಭೆಯಲ್ಲಿ ನಮ್ಮನ್ನು ಎದುರಿಸಲು ಮೋದಿ ಹೆದರುತ್ತಿದ್ದಾರೆ ಎಂಬ ವಿರೋಧಪಕ್ಷಗಳ ಟೀಕೆಗೆ ತಕ್ಕ ಪ್ರತ್ಯುತ್ತರ ನೀಡಿರುವ ನರೇಂದ್ರ ಮೋದಿ, ಸಂಸತ್ತಿನಲ್ಲಿ ನನಗೆ ಮಾತನಾಡಲು ವಿರೋಧಪಕ್ಷದವರು ಅವಕಾಶವನ್ನೇ ನೀಡುತ್ತಿಲ್ಲ ಎಂದು ಹೇಳಿ ಬಲವಾದ ತಿರುಗೇಟು ನೀಡಿದ್ದಾರೆ.

"ಅಪನಗದೀಕರಣದ ಬಗ್ಗೆ ಚರ್ಚೆ ಮಾಡಲು ಸರಕಾರ ಯಾವತ್ತೂ ತಯಾರಿದೆ. ಆದರೆ, ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ. ಹೀಗಾಗಿ ನಾನು ಇದರ ಬಗ್ಗೆ ಜನಸಭೆಯಲ್ಲಿ ಮಾತನಾಡುತ್ತಿದ್ದೇನೆ" ಎಂದು ಗುಜರಾತ್‌ನ ಬನಸ್ಕಾಂತಾದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಿನ ಚಾಟಿ ಬೀಸಿದ್ದಾರೆ.[ದಾಳಿ ಮುಂದುವರಿಸಿ, ನಾನಿದ್ದೇನೆ: ಐಟಿ ಅಧಿಕಾರಿಗಳಿಗೆ ಮೋದಿ ಅಭಯ]

I will not leave any corrupt : Narendra Modi in Gujarat

ಅಪನಗದೀಕರಣವನ್ನು ಬಲವಾಗಿ ಸಮರ್ಥಿಸಿಕೊಂಡ ಮೋದಿ, ಈ ಯಜ್ಞದಿಂದಾಗಿ ಬಡವರಿಗೆ ಶಕ್ತಿ ಬಂದಂತಾಗಿದೆ. ಬಡವರ ತಾಕತ್ತು ಹೆಚ್ಚಿಸಲೆಂದೇ ಇದನ್ನು ಮಾಡಿದ್ದೇನೆ. ಇದು ಕಪ್ಪುಹಣವನ್ನು ಹೊಡೆದುರುಳಿಸುವುದರಲ್ಲಿ ಮತ್ತು ಭ್ರಷ್ಟಾಚಾರವನ್ನು ಕಿತ್ತು ಹಾಕುವುದರಲ್ಲಿ ಸಂದೇಹವೇ ಇಲ್ಲ ಎಂದು ಮೋದಿ ಪ್ರತಿಪಾದಿಸಿದರು. [ಚಾಂದಿನಿ ಚೌಕ್ ಶಾಖೆ ಬ್ಯಾಂಕ್ ನಕಲಿ ಖಾತೆಗಳಲ್ಲಿ ಸಿಕ್ಕಿದ್ದು 100 ಕೋಟಿ!]

ಇನ್ನು ಮುಂದೆ ಜನರು ಬ್ಯಾಂಕ್ ಎಟಿಎಂ ಮುಂದೆ ಕ್ಯೂ ನಿಂತು ಸಮಯ ಹಾಳು ಮಾಡುವ ಅಗತ್ಯವಿಲ್ಲ. ಈ-ವಾಲೆಟ್ ಬ್ಯಾಂಕನ್ನು ನಿಮ್ಮ ಮೊಬೈಲಿನಲ್ಲಿಯೇ ತಂದಿದೆ. ಜನರು ಈ ಸೌಲಭ್ಯವನ್ನು ಬಳಸಲು ಪ್ರಾರಂಭಿಸಬೇಕು ಎಂದು ಅವರು ಕೋರಿದರು. [ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!]

ಭ್ರಷ್ಟಾಚಾರ ನಡೆಸುತ್ತಿರುವವರನ್ನು, ಕಾಳದಂಧೆಕೋರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರು ಹಿಂದಿನ ಗೇಟಿನಿಂದ ಪರಾರಿಯಾಗುತ್ತೇನೆ ಅಂತ ಅಂದುಕೊಂಡಿದ್ದರೆ ಅವರಿಗೆ ತಿಳಿದಿರಲಿ, ನರೇಂದ್ರ ಮೋದಿ ಹಿಂದಿನ ಗೇಟಿನಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.[ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾದ ರಾಹುಲ್ 'ಭೂಕಂಪ'ದ ಮಾತು]

ನಿಮ್ಮ ಗಮನಕ್ಕೆ ಈಗಾಗಲೆ ಬಂದಿರಬಹುದು. ಬ್ಯಾಂಕಿನಲ್ಲಿ ಹೇಗೆ ಭಾರೀ ಪ್ರಮಾಣದಲ್ಲಿ ಕಳ್ಳಹಣವನ್ನು ಅಡಗಿಸಿಟ್ಟುಕೊಂಡವರು ಒಬ್ಬೊಬ್ಬರಾಗಿ ಸಿಕ್ಕಿಬೀಳುತ್ತಿದ್ದಾರೆ. ಬಡವರ ಬಗ್ಗೆ ಮಾತನಾಡುವುದಕ್ಕೂ, ಬಡವರ ಬಗ್ಗೆ ಕಾಳಜಿಯಿಂದ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ ಎಂಬುದನ್ನು ಎನ್‌ಡಿಎ ಸರಕಾರ ತೋರಿಸಿಕೊಟ್ಟಿದೆ ಎಂದು ಅವರು ನುಡಿದರು.

ಲೋಕಸಭೆಗೆ ನಾನು ಬರುತ್ತಿಲ್ಲ ಎಂದು ಮಾತನಾಡುತ್ತಿದ್ದಾರೆ. ಆದರೆ ಲೋಕಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಅಪಾರ ರಾಜಕೀಯ ಅನುಭವವುಳ್ಳ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನೇ ಕಳವಳಕ್ಕೀಡು ಮಾಡಿದೆ ಎಂದು ಅವರು ಪ್ರಸ್ತುತ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

70 ವರ್ಷಗಳ ಕಾಲ ಪ್ರಾಮಾಣಿಕ ಜನರನ್ನು ನೀವು ಲೂಟಿ ಮಾಡಿದಿರಿ. ಅವರಿಗೆ ಸಾಕಷ್ಟು ಸಂಕಷ್ಟ ತಂದಿಟ್ಟಿದ್ದೀರಿ ಮತ್ತು ಬದುಕನ್ನೇ ದುರ್ಭರ ಮಾಡಿಟ್ಟಿದ್ದೀರಿ ಎಂದು ಅವರು ಪರೋಕ್ಷವಾಗಿ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is no need to waste your time standing outside banks or ATMs, e-wallets have brought banks to your mobiles. And I will promise you, I will not leave anyone (corrupt) : Narendra Modi at a rally in Banaskatha in Gujarat on Saturday.
Please Wait while comments are loading...