ಮೋದಿ ವಿರುದ್ಧ ಬೆಟ್ಟುಮಾಡಿದರೆ, ಬೆರಳು ಕತ್ತರಿಸುತ್ತೇನೆ: ಬಿಜೆಪಿ ನಾಯಕ

Posted By:
Subscribe to Oneindia Kannada

ಪಾಟ್ನಾ, ನವೆಂಬರ್ 21: "ನೀವು ಬಿಹಾರದಲ್ಲಿ ವಾಸಿಸುತ್ತಿದ್ದರೆ, ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡುವ ಧೈರ್ಯ ತೋರಬೇಡಿ. ಅಕಸ್ಮಾತ್ ಯಾರಾದರೂ ಮೋದಿಯವರ ವಿರುದ್ಧ ಬೊಟ್ಟುಮಾಡಿದರೆ ಅಂಥವರ ಬೆರಳು ಕತ್ತರಿಸುತ್ತೇನೆ" ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಿಹಾರ ಬಿಜೆಪಿ ಮುಖಂಡ ನಿತ್ಯಾನಂದ ರೈ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

'ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುತ್ತೇವೆ'

ವೈಶ್ಯ ಮತ್ತು ಕನು ಎಂಬ ಹಿಂದುಳಿದ ಸಮುದಾಯದವರು ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಉಜಿಯರ್ಪುರ ಸಂಸದ ನಿತ್ಯಾನಂದ ರೈ, ಇಂಥ ವಿವಾದದ ಹೇಳಿಕೆ ನೀಡಿದರು.

ಮೋದಿ ಸರ್ಕಾರಕ್ಕೆ ಹೊಸ ಗರಿ: ನಂಬಿಕಸ್ಥ ಸರ್ಕಾರವೆಂಬ ಬಿರುದು

'I Will chop off fingers that point at PM Narendra Modi: Bihar BJP chief

ಮೋದಿಯವರು ಕಠಿಣ ಪರಿಶ್ರಮದಿಂದ ಮೇಲೆ ಬಂದವರು. ಅಕಸ್ಮಾತ್ ನಿಮ್ಮ ಸ್ವಂತ ಮಗನೇ ಅಂಥ ಬಡತನದಲ್ಲಿ ಬೆಳೆದು ಪ್ರಧಾನಿಯಾಗಿದ್ದರೆ ನೀವು ಖುಷಿ ಪಡುತ್ತಿರಲಿಲ್ಲವೇ? ಅವರ ಪರಿಶ್ರಮಕ್ಕೆ ಗೌರವ ನೀಡಿ. ಅಕಸ್ಮಾತ್ ಯಾರಾದರೂ ಅವರ ವಿರುದ್ದ ಮಾತನಾಡಿದರೆ, ಅವರ ವಿರುದ್ಧ ಬೊಟ್ಟು ಮಾಡಿ ತೋರಿಸಿದರೆ ಅಂಥವರ ಬೆರಳನ್ನು ಕತ್ತರಿಸಿಬಿಡುತ್ತೇನೆ" ಎಂದು ಉದ್ವೇಗಕ್ಕೊಳಗಾಗಿ ಅವರಾಡಿದ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ.

ಈ ಕಾರ್ಯಕ್ರಮದಲ್ಲಿ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Bihar BJP president and Lok Sabha MP from Ujiyarpur, Nityanand Rai, has threatened to chop off fingers and break hands of any person who “points” at the Prime Minister.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ