ಹನಿಮೂನ್ ನೈಟ್‌ನಲ್ಲಿ ಬೆಡ್ ಮೇಲೆಯೇ ಸುಸೂ ಮಾಡ್ಕೊಂಡೆ ಉದ್ಯಮಿ ಪೋಸ್ಟ್ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರವಾದ ಪೋಸ್ಟ್‌ಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ಹನಿಮೂನ್ಗೆ ಹೋಗಿದ್ದ ಉದ್ಯಮಿ ಬೆಡ್ ಮೇಲೆಯೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದ ಉದ್ಯಮಿಯ ಪೋಸ್ಟ್ ವೈರಲ್ ಆಗಿದೆ. ತಮಾಷೆಯಾಗಿ ಹಾಗೂ ಹಾಸ್ಯದ ಕಾರಣಕ್ಕೆ ವ್ಯಕ್ತಿ ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಹನಿಮೂನ್ಗೆ ಹೋಗಿ ಎಡವಟ್ಟು ಮಾಡಿಕೊಂಡೆ ಎಂದು ವ್ಯಕ್ತಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಇಷ್ಟಕ್ಕೂ ಹನಿಮೂನ್‌ನಲ್ಲಿ ಆ ವ್ಯಕ್ತಿ ಮಾಡಿಕೊಂಡ ಕಿತಾಪತಿ ಏನು ಎನ್ನುವ ಡೀಟೆಲ್ಸ್ ಇಲ್ಲಿದೆ.
ಮಧುಚಂದ್ರ... (ಹನಿಮೂನ್) ಎನ್ನುವುದು ಜೀವನ ಸುಂದರ ಕ್ಷಣಗಳಲ್ಲಿ ಒಂದು. ಪ್ರಕೃತಿಯ ಸಹಜ ಪ್ರಕ್ರಿಯೆ ಆದರೆ ಈ ವಿಚಾರಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳುವಂತಹದ್ದು ಖಂಡಿತವಾಗಿಯೂ ಅಲ್ಲ. ಇದೀಗ ಇದೇ ರೀತಿ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹನಿಮೂನ್ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ನನ್ನ ಹನಿಮೂನ್ ಟೈಮ್‌ನಲ್ಲಿ ಹಾಸಿಗೆಯ ಮೇಲೆ ಮೂತ್ರ ಮಾಡಿಕೊಂಡಿದ್ದೆ. ಇದು ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಇದೂ ಒಂದು ಎಂದು ಬರೆದುಕೊಂಡಿದ್ದಾರೆ. ಆಂಥೋನಿ ಕಾರ್ಲ್ಸ್ ಎನ್ನುವವರು ಲಿಂಕ್ಡ್ಇನ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ.

ನಮ್ಮ ಜೀವನದ ಅತ್ಯಂತ ಸ್ಮರಣೀಯ ಮೈಲಿಗಲ್ಲನ್ನು ಕಳೆಯುವುದಕ್ಕೆ ನಾವು ಸಿಯಾಟಲ್‌ಗೆ ಹಾರಿದ್ದೆವು. ಮೊದಲು ಮೀನು ಮಾರುಕಟ್ಟೆಗೆ ಹೋದೆವು. ಮಸಾಲೆಯುಕ್ತ ಏಡಿ ಸೂಪ್ ಸವಿಯುವುದಕ್ಕೆ ನಿರ್ಧರಿಸಿದೆ. ಕುಡಿದು ಇಬ್ಬರೂ ಮಲಗಿದ ಮೇಲೆ ಬೆಳಗ್ಗೆ ಸುಮಾರು 3 ಗಂಟೆಗೆ ಸಮಯಕ್ಕೆ ಎಚ್ಚರವಾಯ್ತು ನೋಡಿದರೆ ಬೆಡ್ ಒದ್ದೆಯಾಗಿತ್ತು. ನೋಡಿದರೆ ನಾನು ನಿದ್ದೆಯಲ್ಲೇ ಬೆಡ್ ಮೇಲೆ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದೆ. ನನ್ನ ಹೆಂಡತಿಯನ್ನು ಎಬ್ಬಿಸಿ, ನಾನು ಹೊಚ್ಚ ಹೊಸ ಬೆಡ್‌ಶೀಟ್‌ನ ಮೇಲೆಯೇ ಮೂತ್ರ ವಿಸರ್ಜನೆ ಮಾಡಿಕೊಂಡಿರಬೇಕು ಅಂತಾ ಹೇಳಬೇಕಾಯಿತು ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು ಈ ವಿಷಯನ್ನು ಹೇಳಿದಾಗ ನನ್ನ ಪತ್ನಿ ನಕ್ಕಿದ್ದಳು. ವರ್ಷಗಳ ನಂತರವೂ ನಾವು ಈ ವಿಚಾರವನ್ನು ಮಾತನಾಡಿಕೊಂಡು ತಮಾಷೆ ಮಾಡುತ್ತಿರುತ್ತೇವೆ. ಇವರು ವ್ಯಾಪಾರದ ಬಗ್ಗೆ ಉದಾಹರಣೆ ಕೊಡುವುದಕ್ಕೆ ಅವರ ಜೀವನದ ಬಹು ಸುಂದರ ಕ್ಷಣಗಳು ಹಾಗೂ ಹನಿಮೂನ್‌ನ ಬಗ್ಗೆ ಬರೆದುಕೊಂಡಿದ್ದಾರೆ. ಅಲ್ಲದೇ ವ್ಯವಹಾರದಲ್ಲಿ ಮೂರ್ಖರಂತೆ ಕಾಣಲು ತುಂಬಾ ಹೆದರುವ ನಾಯಕರನ್ನು ನಾನು ನೋಡುತ್ತೇನೆ, ಅವರು ಎಂದಿಗೂ ನಿಜವಾದ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಸಹಾಯವನ್ನೂ ಕೇಳುವುದಿಲ್ಲ. ಎಂದಿಗೂ ಜನರೊಂದಿಗೆ ಸಂಪರ್ಕ ಸಾಧಿಸಬಹುದಾದ ವಿಷಯಗಳನ್ನ ಅವರು ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.
ನೀವು ಹಾಸ್ಯಾಸ್ಪದವಾಗಿ ಕಾಣಿಸಿಕೊಳ್ಳುವುದಕ್ಕೆ ಸಿದ್ಧರಾಗಿರಿ, ನಿಮ್ಮ ಟೀಮ್ ಹೊಸ ವಿಚಾರಗಳನ್ನು ಪ್ರಯತ್ನಿಸುವುದಕ್ಕೆ ಸುರಕ್ಷಿತವೆಂದು ನಿಮ್ಮನ್ನು ನಂಬುತ್ತದೆ. ನಿಮಗೆ ಎಲ್ಲವೂ ತಿಳಿದಿಲ್ಲ ಎಂದು ನೀವು ಒಪ್ಪಿಕೊಂಡಾಗ, ಅವರು ತಮ್ಮ ಅತ್ಯುತ್ತಮ ಒಳನೋಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ನೀವು ನಿಮ್ಮ ವೈಫಲ್ಯಗಳನ್ನು ಬಹಿರಂಗವಾಗಿ ಹಂಚಿಕೊಂಡರೆ, ಅವರು ತಮ್ಮ ತಪ್ಪುಗಳನ್ನು ಮರೆಮಾಚುವುದನ್ನೂ ನಿಲ್ಲಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಉದ್ಯಮದ ಅಭಿವೃದ್ಧಿಗೆ ತಮ್ಮದೇ ಹನಿಮೂನ್ ಕಥೆ ಹಂಚಿಕೊಂಡಿರುವುದು ವೈರಲ್ ಆಗುತ್ತಿದೆ.












Click it and Unblock the Notifications