'ನವೀದ್ ನನ್ನ ಮಗ, ನಾನೊಬ್ಬ ನತದೃಷ್ಟ ತಂದೆ'
ಬೆಂಗಳೂರು, ಆಗಸ್ಟ್ 7 : ಜಮ್ಮು ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ನವೀದ್ ಪಾಕಿಸ್ತಾನದವನು ಎಂಬುದಕ್ಕೆ ಪ್ರಬಲ ಸಾಕ್ಷಿ ಸಿಕ್ಕಿದೆ. 'ಮೊಹಮ್ಮದ್ ನವೀದ್ ನನ್ನ ಮಗ, ನಾನೊಬ್ಬ ನತದೃಷ್ಟ ತಂದೆ' ಎಂದು ಆತನ ತಂದೆ ಮಾಧ್ಯಮಗಳಿಗೆ ದೂರವಾಣಿ ಮೂಲಕ ಹೇಳಿಕೆ ನೀಡಿದ್ದಾರೆ.
ಬುಧವಾರ ಬಿಎಸ್‌ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ಮೊಹಮ್ಮದ್ ನವೀದ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಈತ ಪಾಕಿಸ್ತಾನದಿಂದ ಬಂದಿದ್ದ ಎಂದು ಹೇಳಲಾಗಿತ್ತು. ಆದರೆ, ಪಾಕ್ ಇದನ್ನು ನಿರಾಕರಿಸಿತ್ತು. [ನವೀದ್ ಬಾಲಾಪರಾಧಿ ಎಂದು ಸಾಬೀತಾದರೆ?]

ನವೀದ್ ಪ್ರಾಥಮಿಕ ವಿಚಾರಣೆ ಸಯಮದಲ್ಲಿಯೇ ಆತ ಪಾಕಿಸ್ತಾನದ ಫೈಸ್ಲಾಬಾದ್ ಮೂಲದವರಾದ ಯೂಸೂಫ್ ಮೊಹಮದ್ ಅವರ ಮಗ ಎಂಬುದು ತಿಳಿದುಬಂದಿತ್ತು. Hindustan Times ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಯೂಸೂಫ್ 'ಮೊಹಮ್ಮದ್ ನವೀದ್ ನನ್ನ ಮಗ, ನಾನೊಬ್ಬ ನತದೃಷ್ಟ ತಂದೆ' ಎಂದು ಹೇಳಿಕೆ ನೀಡಿದ್ದಾರೆ. ['ನಾನು ಕೊಲ್ಲಲು ಬಂದಿದ್ದೆ, ಸಾಯಲು ಅಲ್ಲ']
ನವೀದ್ ತಂದೆ ಹೇಳಿದ್ದೇನು? : ಪತ್ರಿಕೆ ಜೊತೆ ಸುಮಾರು 20 ಸೆಕೆಂಡ್‌ಗಳ ಕಾಲ ಮಾತನಾಡಿರುವ ಯೂಸೂಫ್ 'ನವೀದ್ ನನ್ನ ಮಗ ನಿಜ. ಅದರಲ್ಲಿ ಅನುಮಾನವೇ ಬೇಡ. ಯಾವುದೋ ಪರಿಸ್ಥಿತಿಗೆ ಒಳಪಟ್ಟು ಅವನು ಮಹಾಪರಾಧ ಮಾಡಿದ್ದಾನೆ. ಲಷ್ಕರ್ ಉಗ್ರರು ಆತ ದಾಳಿ ವೇಳೆ ಮೃತಪಡುತ್ತಾನೆ ಎಂದು ನಿರೀಕ್ಷಿಸಿದ್ದರು. ಬಹುಶಃ ಅವರಿಗೂ ಇದೇ ಬೇಕಾಗಿತ್ತು' ಎಂದು ಹೇಳಿದ್ದಾರೆ.
'ನವೀದ್ ಸೆರೆ ಸಿಕ್ಕಿದ್ದಾನೆ, ಲಷ್ಕರ್ ಉಗ್ರರು ನಮ್ಮನ್ನು ಕೊಲ್ಲುತ್ತಾರೆ' ಎಂದು ಯೂಸೂಫ್ ಅಸಹಾಯಕತೆ ಹೊರಹಾಕಿದ್ದಾರೆ. ನಂತರ ಈ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.












Click it and Unblock the Notifications