ನಾನು ರಾಷ್ಟ್ರಪತಿ ಅಭ್ಯರ್ಥಿಯಲ್ಲ: ದೆಹಲಿ ಮೆಟ್ರೋ ಮಾಜಿ ಮುಖ್ಯಸ್ಥ ಇ. ಶ್ರೀಧರನ್
ಕೊಚ್ಚಿ(ಕೇರಳ), ಜೂನ್ 16: ಭಾರತದ ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ದಿನ ದಿನವೂ ಒಂದಿಲ್ಲೊಂದು ಹೆಸರು ಕೇಳಿಬರುತ್ತಿದೆ. ಆ ಹೆಸರುಗಳಲ್ಲಿ ದೆಹಲಿ ಮೆಟ್ರೋ ಮಾಜಿ ಮುಖ್ಯಸ್ಥ ಇ. ಶ್ರೀಧರನ್ ಹೆಸರೂ ಸೇರಿತ್ತು.
ಆದರೆ 'ನಾನು ರಾಷ್ಟ್ರಪತಿ ಅಭ್ಯರ್ಥಿಯಲ್ಲ' ಎನ್ನುವ ಮೂಲಕ ಇ.ಶ್ರೀಧರನ್ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಕೇರಳದ ಕೊಚ್ಚಿಯಲ್ಲಿಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಇ.ಶ್ರೀಧರನ್, ಈ ಬಗ್ಗೆ ಕೇಂದ್ರದ ಯಾವುದೇ ನಾಯಕರು ತಮ್ಮೊಂದಿಗೆ ಚರ್ಚಿಸಿಲ್ಲ ಎಂದು ಅವರು ಹೇಳಿದರು. ನಾನು ರಾಷ್ಟ್ರಪತಿ ಅಭ್ಯರ್ಥಿಯಲ್ಲ ಎಂದವರು ತಿಳಿಸಿದರು.

ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಜು.20 ರಂದು ಹೊರಬೀಳಲಿದೆ.












Click it and Unblock the Notifications