Get Updates
Get notified of breaking news, exclusive insights, and must-see stories!

ನವವಿವಾಹಿತ ಪತಿ ಹತ್ಯೆ: ಪತ್ನಿ, ಬೆಂಗಳೂರು ಟೆಕ್ಕಿ ಸೆರೆ

ಹೈದರಾಬಾದ್, ಸೆ.25: ಇತ್ತ ಬೆಂಗಳೂರಿನಲ್ಲಿ ಇಂಟೆಲ್ ಟೆಕ್ಕಿ, ಅಮಾಯಕ ಗಿರೀಶನನ್ನು ಕೊಲೆ ಮಾಡಿಸಿದ್ದ ಕ್ರಿಮಿನಲ್ ಬುದ್ಧಿಯ ಲಾಯರ್, ಸುಂದರ ಹಂತಕಿ ಶುಭಾ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೆ ಅತ್ತ ಆಂಧ್ರ ರಾಜಧಾನಿಯಲ್ಲೂ ಅಂತಹುದೇ ಪ್ರಕರಣ ನಡೆದಿದೆ.

ಆದರೆ ಹೈದರಾಬಾದ್ ಪ್ರಕರಣದಲ್ಲಿ ಬೆಂಗಳೂರಿನ ಟೆಕ್ಕಿಯೇ ಹಂತಕ ಎಂಬುದು ದುರ್ದೈವ. ಈ ಟೆಕ್ಕಿ ಪ್ರಿಯಕರನ ಜತೆ ಕೈಜೋಡಿಸಿದ, ಪತಿಯ ಹತ್ಯೆಗೆ ಪ್ರೇರೇಪಿಸಿದ ಟೆಕ್ಕಿ ಪತ್ನಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

ಈ ಕಥಾನಕದ ಪಾತ್ರಗಳು ಹೀಗಿವೆ. ಹತ್ಯೆಗೀಡಾದ ಪತಿಯ ಹೆಸರು ವೆಂಕಟೇಶ್ವರ ರಾವ್. ಈತ ಆಂಧ್ರ ಸಾರಿಗೆ ಸಂಸ್ಥೆಯಲ್ಲಿ ಡೀಸೆಲ್ ಮೆಕಾನಿಕ್. ಆದರೆ ಈತ ಮದುವೆಯಾಗಿದ್ದು ನೆಮಿಲಿನೇಟಿ ಸೌಜನ್ಯ (24) ಎಂಬ ಬೆಂಗಳೂರಿನಲ್ಲಿ Accenture ಕಂಪನಿಯ ಟೆಕ್ಕಿ. ಮುಂದೆ ಮದುವೆಯಾಗುತ್ತಿದ್ದಂತೆ ಸುಪಾರಿ ನೀಡಿ ಗಂಡ ವೆಂಕಟೇಶ್ವರನನ್ನು ಕೊಲ್ಲಿಸಿದ್ದು ಇದೇ ಸೌಜನ್ಯ.

ಇವಳ ಆಜ್ಞಾನುವರ್ತಿಯಾಗಿ ವೆಂಕಟೇಶ್ವರನನ್ನು ಸಾಯಿಸಿದ್ದು ಸೌಜನ್ಯಳ ಕಲೀಗ್, Accenture ಕಂಪನಿಯ ಟೆಕ್ಕಿ ಜೈದೀಪ್ ದೇಶಿ (26). ಇವನು ಬೇರಾರು ಅಲ್ಲ ಮದುವೆಗೂ ಮುನ್ನ ಸೌಜನ್ಯಳಿಗೆ ಪ್ರಿಯಕರನಾಗಿದ್ದವನು. ಈ ಪರ'ದೇಶಿ' ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯವನು.

ವೆಂಕಟೇಶ್ವರನ ಹತ್ಯೆ ಕೃತ್ಯದಲ್ಲಿ ಸೌಜನ್ಯ ಮತ್ತು ಜೈದೀಪ್ ದೇಶಿಗೆ ಸಾಥ್ ನೀಡಿದ ಮತ್ತೊಬ್ಬ ಯಡಬೇಶಿ ಸ್ವಾಮಿ ರಾಜ್ ಕುಮಾರ್ (23). ಇವನೋ ನಮ್ಮ ಬೀದರಿನವನೇ. ದಿಲವಾರಾಗುಂಜ್ ನಲ್ಲಿ ಮಿಲನ್ ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಸಣ್ಣ ಕೆಲಸದಲ್ಲಿದ್ದಾನೆ. ಇಷ್ಟಕ್ಕೂ ಸೌಜನ್ಯಳೇ ವೆಂಕಟೇಶ್ವರನನ್ನು ಮದುವೆಯಾಗಿದ್ದು ಏಕೆ? ಎಂಬುದೇ ಇಂಟರೆಸ್ಟಿಂಗ್ ಆಗಿದೆ. ತೆಲುಗು ಸಿನಿಮಾಗೆ ಹೇಳಿ ಮಾಡಿಸಿದಂತಿದೆ ಈ ಕಥಾನಕ. ಮುಂದೆ ಓದಿ...

ಬೆಂಗಳೂರು ಟೆಕ್ಕಿ ಗಿರೀಶನ ಹತ್ಯೆ ಪ್ರಕರಣದ ಧಾಟಿಯಲ್ಲೇ

ಬೆಂಗಳೂರು ಟೆಕ್ಕಿ ಗಿರೀಶನ ಹತ್ಯೆ ಪ್ರಕರಣದ ಧಾಟಿಯಲ್ಲೇ

ಅಕ್ಷರಶಃ ಹೈದರಾಬಾದ್ ಪ್ರಕರಣವೂ ಬೆಂಗಳೂರು ಟೆಕ್ಕಿ ಗಿರೀಶನ ಹತ್ಯೆ ಪ್ರಕರಣದ ಧಾಟಿಯಲ್ಲೇ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ನಡೆದಿದೆ. ಮದುವೆಗೂ ಮುನ್ನ, ಸೌಜನ್ಯ ಮತ್ತು ಜೈದೀಪ್ ದೇಶಿ ನಾರಾಯಣಗುಡದಲ್ಲಿ 2008 ರಿಂದ 2010ರವರೆಗೆ ಒಟ್ಟಿಗೇ ಇಂಜಿನಿಯರಿಂಗ್ ಮಾಡಿದವರು. ಆಗಲೇ ಇಬ್ಬರ ಮಧ್ಯೆ ಪ್ರೇಮ ಮೊಳೆತಿದೆ. ಮುಂದೆ ಕೆಲವು ಕಂಪನಿಗಳಲ್ಲಿ ಟೆಕ್ಕಿಗಳಾಗಿ ಉದ್ಯೋಗ ಮಾಡುತ್ತಾ ಬೆಂಗಳೂರಿನಲ್ಲಿ Accenture ಕಂಪನಿ ಸೇರುವ ವೇಳೆಗೆ ಅಮರ ಪ್ರೇಮಿಗಳಾಗಿದ್ದಾರೆ.

ಪ್ರಿಯಕರ ಜೈದೀಪ್ ಜತೆಗೂಡಿ ಹತ್ಯೆಗೆ ಪಿತೂರಿ

ಪ್ರಿಯಕರ ಜೈದೀಪ್ ಜತೆಗೂಡಿ ಹತ್ಯೆಗೆ ಪಿತೂರಿ

ಆದರೆ ಈ ಮಧ್ಯೆ, 2013ರ ಮೇ ತಿಂಗಳಲ್ಲಿ ಸೌಜನ್ಯಳ ಮದುವೆ ವೆಂಕಟೇಶ್ವರ ರಾವ್ ಜತೆ ನೆರವೇರುತ್ತದೆ. ಅಲ್ಲೇ ಯಡವಟ್ಟಾಗಿದ್ದು. ಹೊಸ ಗಂಡ ವೆಂಕಟೇಶ್ವರ ಅಲ್ಲಿ ಹೈದರಾಬಾದಿನಲ್ಲಿ ಡೀಸೆಲ್ ಮೆಕಾನಿಕ್. ಆದರೆ ಕೆಲಸದ ಮೇಲೆ ಇತ್ತ ಬೆಂಗಳೂರಿಗೆ ಬಂದುಹೋಗಿ ಮಾಡುತ್ತಿದ್ದ ಸೌಜನ್ಯ, ಪ್ರಿಯಕರ ಜೈದೀಪ್ ದೇಶಿ ಜತೆಗೂಡಿ, ಗಂಡ ವೆಂಕಟೇಶ್ವರನ ಹತ್ಯೆಗೆ ಪಿತೂರಿ ಮಾಡುತ್ತಾರೆ.

Sanghi Templeನಿಂದ ಮರಳುವಾಗ

Sanghi Templeನಿಂದ ಮರಳುವಾಗ

ಅದರಂತೆ ಸೆಪ್ಟೆಂಬರ್ 14ರಂದು ಸೌಜನ್ಯ ಹೈದರಾಬಾದಿಗೆ ಗಂಡನ ಮನೆಗೆ ಹೋದವಳೆ ವೆಂಕಟೇಶ್ವರನನ್ನು ದೇವಸ್ಥಾನಕ್ಕೆ ಹೋಗೋಣ ಬಾ ಎಂದು ಕರೆದೊಯ್ಯುತ್ತಾಳೆ. ಹೆಂಡತಿ ಕರೆಯುತ್ತಿದ್ದಾಳಲ್ಲ ಎಂದು ವೆಂಕಟೇಶ್ವರ ರಾವು ಅಮಾಯಕವಾಗಿ ಪತ್ನಿಯನ್ನು ಬೈಕಿನಲ್ಲಿ ಕೂಡಿಸಿಕೊಂಡು ಹೋಗುತ್ತಾನೆ. ಆದರೆ Sanghi Templeನಿಂದ ಮರಳುವಾಗ ಮಾರ್ಗ ಮಧ್ಯೆ ಈ ಪುಣ್ಯಾತಗಿತ್ತಿ 'ನನಗೆ ಅರ್ಜೆಂಟಾಗ್ತಿದೆ. ಸ್ವಲ್ಪ ಗಾಡಿ ನಿಲ್ಲಿಸು' ಎಂದು ಗೋಗರೆಯುತ್ತಾಳೆ.

ಪ್ರಿಯಕರ ಜೈದೀಪ್ ದೇಶಿಗೆ SMS ಸಂದೇಶ

ಪ್ರಿಯಕರ ಜೈದೀಪ್ ದೇಶಿಗೆ SMS ಸಂದೇಶ

ಮುಗ್ಧ ವೆಂಕಟೇಶ್ವರ ಗಾಡಿ ನಿಲ್ಲಿಸುತ್ತಿದ್ದಂತೆ ದಾರಿ ಮಧ್ಯೆ ನಿರ್ಜನ ಪ್ರದೇಶದಲ್ಲಿ ಸುಮಾರು ದೂರ ಸಾಗಿದ ಪೊದೆಯ ಮರೆಯಲ್ಲಿ ಅಡಗಿಕೊಳ್ಳುತ್ತಾಳೆ. ಆದರೆ ಆ ವೇಳೆಗಾಗಲೇ ಪೂರ್ವಯೋಜನೆಯಂತೆ ಪ್ರಿಯಕರ ಜೈದೀಪ್ ದೇಶಿಗೆ SMS ಸಂದೇಶಗಳನ್ನು ಕಳುಹಿಸುತ್ತಾ, ನಿರ್ದೇಶನ ನೀಡುತ್ತಿರುತ್ತಾಳೆ. ಸರಿಯಾಗಿ ಅತ್ತ ಸೌಜನ್ಯ ಬಹಿರ್ದೆಸೆಗೆಂದು ದೂರವಾಗುತ್ತಿದ್ದಂತೆ ಮತ್ತೊಂದು ಬೈಕಿನಲ್ಲಿ ಬಂದ ಪ್ರಿಯಕರ ಜೈದೀಪ್ ದೇಶಿ ಮತ್ತು ಸ್ವಾಮಿ ರಾಜಕುಮಾರ್ ತಮ್ಮ ಕೆಲಸ ಶುರು ಹಚ್ಚಿಕೊಳ್ಳುತ್ತಾರೆ.

ಚಾಕುವಿನಲ್ಲಿ ತಿವಿದು ತಿವಿದು ವೆಂಕಟೇಶ್ವರನ ಹತ್ಯೆ

ಚಾಕುವಿನಲ್ಲಿ ತಿವಿದು ತಿವಿದು ವೆಂಕಟೇಶ್ವರನ ಹತ್ಯೆ

ಮೊದಲು ಕತ್ತಿನಲ್ಲಿರುವ ಚೈನ್ ಕೊಡು ಎಂದು ವೆಂಕಟೇಶ್ವರನ ಮೇಲೆ ಮುಗಿಬೀಳುತ್ತಾರೆ. ಅದಾಗುತ್ತಿದ್ದಂತೆ ಮನಬಂದಂತೆ ಚಾಕುವಿನಲ್ಲಿ ತಿವಿದು ತಿವಿದು ವೆಂಕಟೇಶ್ವರನನ್ನು ಸಾಯಿಸಿಬಿಡುತ್ತಾರೆ. ಇದನ್ನೆಲ್ಲಾ ಪೊದೆಯ ಮರೆಯಲ್ಲೇ ನಿಂತು ನೋಡುತ್ತಾಳೆ ವೆಂಕಟೇಶ್ವರನ ಹೆಂಡತಿ ಯಾನಿ ಜೈದೀಪನ ಪ್ರಿಯತಮೆ ಸೌಜನ್ಯ.

murder for gain

murder for gain

ಆದರೆ ಮತ್ತೊಂದು ಮೂಲದ ಪ್ರಕಾರ ಸೌಜನ್ಯ, ವೆಂಕಟೇಶ್ವರನ ಬಳಿ ಓಡಿಬಂದವಳೇ ಅವನ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂದು ಹತ್ಯೆಗೆ ಸಹಕರಿಸುತ್ತಾಳೆ. ಆ ಮೇಲೆ ತನ್ನನ್ನೂ ಗಾಯಗೊಳಿಸಿಕೊಂಡು ನಗದು-ಚಿನ್ನಾಭರಣಕ್ಕಾಗಿ ನಿರ್ಜನ ಪ್ರದೇಶದಲ್ಲಿ ತಮ್ಮ ಮೇಲೆ ಅಪರಿಚಿತರು ಹಲ್ಲೆ ಮಾಡಿ, ಪತಿಯನ್ನು ಸಾಯಿಸಿಹೋಗಿದ್ದಾರೆ ಎಂದು ಪೊಲೀಸರು ಮುಂದೆ ಕಥೆ ಕಟ್ಟುತ್ತಾಳೆ. ಅಷ್ಟೇ ಅಲ್ಲ. ಯಾರಿಗೂ ಗೊತ್ತಾಗೋಲ್ಲ ಎಂದು ಬೆಂಗಳೂರಿಗೆ ಬಂದು ಬಾಯ್ ಫ್ರೆಂಡ್ ಜತೆ ತನ್ನ ಲವ್ವಡವ್ವಿಯನ್ನು ಬ್ರೇಕ್ ಕೆ ಬಾದ್ ಅಬಾಧಿತವಾಗಿ ಮುಂದುವರಿಸುತ್ತಾಳೆ.

ಸಾಂಘಿ ದೇವಸ್ಥಾನದ ಬಗ್ಗೆ ನಿಮಗೆ ಹೇಳಲೇಬೇಕು

ಸಾಂಘಿ ದೇವಸ್ಥಾನದ ಬಗ್ಗೆ ನಿಮಗೆ ಹೇಳಲೇಬೇಕು

ಇಲ್ಲಿ ಹತ್ಯೆ ನಡೆದ ಸ್ಥಳ ಮತ್ತು ಅವರು ಭೇಟಿ ನೀಡಿದ್ದ ಸಾಂಘಿ ದೇವಸ್ಥಾನದ ಬಗ್ಗೆ ನಿಮಗೆ ಹೇಳಲೇಬೇಕು. ಇದು ಹೈದರಾಬಾದಿನ ಪಕ್ಕದಲ್ಲೆ ಇರುವ ರಂಗಾರೆಡ್ಡಿ ಜಿಲ್ಲೆಯಲ್ಲಿದೆ. ಸುಪ್ರಸಿದ್ಧ ರಾಮೋಜಿ ಫಿಲಂ ಸಿಟಿ ಪಕ್ಕದಲ್ಲೇ Sanghi Temple ಇದೆ. ಇದನ್ನು ನೀವೂ ನೋಡಿರುತ್ತೀರಿ. ಖುದ್ದಾಗಿ ಅಲ್ಲದಿದ್ದರೂ ಸಿನಿಮಾಗಳಲ್ಲಿ. ಏಕೆಂದರೆ Ramoji Film City ಮತ್ತು Sanghi Temple ಸುಪ್ರಸಿದ್ದ ಶೂಟಿಂಗ್ ಸ್ಪಾಟ್ ಗಳು. ಇದನ್ನು ತಿರುಪತಿ ವೇಂಕಟೇಶ್ವರನ ದೇವಸ್ಥಾನದ ಮಾದರಿಯಲ್ಲೇ ನಿರ್ಮಾಣಮಾಡಲಾಗಿದೆ.

Sanghi Temple ಸಿಸಿಟಿವಿ ಸುಳಿವು ನೀಡಿತ್ತು

Sanghi Temple ಸಿಸಿಟಿವಿ ಸುಳಿವು ನೀಡಿತ್ತು

ಗಮನಾರ್ಹವೆಂದರೆ ಇಷ್ಟೆಲ್ಲಾ ಪ್ರಸಿದ್ಧಿ ಪಡೆದಿರುವ Sanghi Templeಗೆ ಆಡಳಿತ ಮಂಡಳಿ ಸಹಜವಾಗಿಯೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಮತ್ತು ಕೊಲೆಯಾದ ಸಮಯ ಸಂದರ್ಭವನ್ನು 'ಅಳೆಯಲು' Hayathnagar ಪೊಲೀಸರು ಈ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ವೆಂಕಟೇಶ್ವರನ ಹಂತಕಿ ಸೌಜನ್ಯಳೇ ಆಗಿರಬಹುದು ಎಂಬ ಸುಳಿವು ಪೊಲೀಸರಿಗೆ ಸಿಗುತ್ತದೆ!

ಪ್ರಿಯಕರನಿಗೆ ಅನುಕ್ಷಣದ mobile direction

ಪ್ರಿಯಕರನಿಗೆ ಅನುಕ್ಷಣದ mobile direction

ಹಾಗೆ ಸೌಜನ್ಯಳ ಬಗ್ಗೆ ಅನುಮಾನ ಬಡಿಯುತ್ತಿದ್ದಂತೆ ಅವಳ ಮೊಬೈಲ್ ಕಾಲ್ ಡೀಟೇಲ್ಸ್ ಪಡೆಯುತ್ತಾರೆ. ಆಗ ಬಿಚ್ಚಿಕೊಳ್ಳುತ್ತದೆ ವೆಂಕಟೇಶ್ವರನ ಹತ್ಯೆ ಯೋಜನೆಯ ವೃತ್ತಾಂತ. ಗಿರೀಶನ ಹಂತಕಿ ಶುಭಾ ಮಾದರಿ ಸೌಜನ್ಯಳೂ ತನ್ನ ಪ್ರಿಯಕರನಿಗೆ ಅನುಕ್ಷಣದ mobile direction ನೀಡುವ ಮೂಲಕ ಅಮಾಯಕ ವೆಂಕಟೇಶ್ವರನನ್ನು ಪರಲೋಕಕ್ಕೆ ಕಳುಹಿಸಿದ್ದಾಳೆ. ಹಂತಕಿ ಶುಭಾ ಟೆಕ್ಕಿ ಗಿರೀಶನನ್ನು ಸಾಯಿಸಿದ್ದು ಸಂಜೆ ಗೋಧೂಳಿ ಕಾಲದಲ್ಲಿ. ಈ ಪುಣ್ಯಾತಿಗಿತ್ತಿ ಸೌಜನ್ಯಳೂ ಅದೇ ಸಮಯದಲ್ಲಿ ವೆಂಕಟೇಶ್ವರನನ್ನು ಹತ್ಯೆ ಮಾಡಿಸಿದ್ದು!

ಸೌಜನ್ಯಳೇ ವೆಂಕಟೇಶ್ವರನ ಮದುವೆಯಾಗಿದ್ದು ಏಕೆ?

ಸೌಜನ್ಯಳೇ ವೆಂಕಟೇಶ್ವರನ ಮದುವೆಯಾಗಿದ್ದು ಏಕೆ?

ಇದು ನಿಜಕ್ಕೂ ಇಂಟರೆಸ್ಟಿಂಗ್ ಮತ್ತು ದೌರ್ಭಾಗ್ಯಪೂರ್ಣ ಕಥೆ. ಅಸಲಿಗೆ ಸೌಜನ್ಯ ಮತ್ತು ವೆಂಕಟೇಶ್ವರ ಹತ್ತಿರದ ಸಂಬಂಧಿಗಳೇ ಕಣ್ರೀ. ಇನ್ನೊಂದು ವಿಷಯ ಗೊತ್ತಾ ಈ ಸೌಜನ್ಯಳೇ ವೆಂಕಟೇಶ್ವರ ಮದುವೆಯಾಗಬೇಕಿದ್ದು ಸೌಜನ್ಯಳ ಅಕ್ಕನನ್ನು. ಆದರೆ ಏನ್ಮಾಡೋದು ಅವರಿಬ್ಬರ ಮದುವೆಗೆ ಮೂರು ದಿನಗಳ ಮುನ್ನ ಸೌಜನ್ಯಳ ಅಕ್ಕ ತನ್ನ ಬಾಯ್ ಫ್ರೆಂಡ್ ಜತೆ ಓಡಿಹೋಗಿ ಮದುವೆಯೂ ಆಗಿಬಿಟ್ಟಳು.

ಸೌಜನ್ಯ ಮತ್ತು ವೆಂಕಟೇಶ್ವರನ ಮದುವೆ ಫಿಕ್ಸ್

ಸೌಜನ್ಯ ಮತ್ತು ವೆಂಕಟೇಶ್ವರನ ಮದುವೆ ಫಿಕ್ಸ್

ಆದರೆ ಏನ್ಮಾಡೋದು ಮನೆ ಮರ್ಯಾದೆ ಪ್ರಶ್ನೆ. ಹಾಗಂತ ವಿಚಾರ ಮಾಡಿದ ಮನೆಯ ಹಿರಿಯರು ಸರಿ ಸೌಜನ್ಯಳ ಜತೆಗಾದರೂ ಅದೇ ಮಹೂರ್ತದಲ್ಲಿ (ಮೇ 29) ವೆಂಕಟೇಶ್ವರನ ಮದುವೆಯಾಗಲಿ ಎಂದು ಸೌಜನ್ಯ ಮತ್ತು ವೆಂಕಟೇಶ್ವರನ ಮದುವೆ ಫಿಕ್ಸ್ ಮಾಡಿ ನೆರವೇರಿಸಿಯೇ ಬಿಟ್ಟರು.

ಒಟ್ನಲ್ಲಿ ಅಮಾಯಕ ವೆಂಕಟೇಶ್ವರ ಪರಲೋಕಕ್ಕೆ

ಒಟ್ನಲ್ಲಿ ಅಮಾಯಕ ವೆಂಕಟೇಶ್ವರ ಪರಲೋಕಕ್ಕೆ

ಆದರೆ ಸೌಜನ್ಯಳಿಗೂ ಅದಾಗಲೇ ಬಾಯ್ ಫ್ರೆಂಡ್ ಇದ್ದಾನೆ ಎಂಬುದು ಮನೆಯವರಿಗೆ ತಿಳಿಯಲಿಲ್ಲ. ಈ ಸೌಜನ್ಯಲಾದರೂ ಹಿರಿಯಕ್ಕನ ಚಾಳಿಯಂತೆ ಅವನ ಜತೆ ಓಡಿಹೋಗಿ ಮದುವೆಯಾದಳಾ ಅಂದರೆ ಉಹುಃ. ತನ್ನ ಬಾಯ್ ಫ್ರೆಂಡ್ ಜತೆ ಸೇರಿ ಅಮಾಯಕ ವೆಂಕಟೇಶ್ವರನನ್ನು ಪರಲೋಕಕ್ಕೆ ಕಳಿಸಿದಳು!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+