Hyderabad: ಪ್ರೇಮಿಯನ್ನು ಕೊಂದು ವಿವಾಹಿತ ಅರ್ಚಕ, ದೇವಸ್ಥಾನದ ಬಳಿ ಶವ ಪತ್ತೆ
ಅರ್ಚಕನೊಬ್ಬ 30 ವರ್ಷದ ಪ್ರೇಮಿಯನ್ನು ಕೊಂದು ಎಸೆದ ಭಯಾನಕ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಅಯ್ಯಗಾರಿ ಸಾಯಿಕೃಷ್ಣ ಎಂದು ಗುರುತಿಸಲಾದ ವಿವಾಹಿತ ಅರ್ಚಕ ಈ ಕೃತ್ಯವನ್ನು ಎಸಗಿದ್ದಾನೆ. ಈತನ ಮೇಲೆ ಮಹಿಳೆಯನ್ನು ಕೊಂದು ಶವವನ್ನು ತೆಲಂಗಾಣದ ಸರೂರ್‌ನಗರದ ರಿಜಿಸ್ಟ್ರಾರ್ ಕಚೇರಿಯ ಹಿಂಭಾಗದ ಒಳಚರಂಡಿಗೆ ಎಸೆದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಯ್ಯಗಾರಿ ಸಾಯಿಕೃಷ್ಣ ಸಂತ್ರಸ್ತೆ ಅಪ್ಸರಾಳ ಕಾಣೆಯಾಗಿದ್ದಾಳೆ ಎನ್ನುವ ದೂರನ್ನು ನೀಡಿದ್ದಾನೆ. ನಾಪತ್ತೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಅಪ್ಸರಾಳನ್ನು ಭದ್ರಾಚಲಂಗೆ ತೆರಳಲು ಮುಂದಾಗಿದ್ದ ವೇಳೆ ಶಂಶಾಬಾದ್ ಬಸ್ ನಿಲ್ದಾಣದಲ್ಲಿ ಡ್ರಾಪ್ ಮಾಡಿರುವುದಾಗಿ ಸಾಯಿಕೃಷ್ಣ ದೂರು ದಾಖಲು ಮಾಡಿದ್ದಾನೆ. ಅಂದಿನಿಂದ ಅವಳು ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದಿದ್ದಾನೆ. ಮೇ 3 ರಿಂದ ಆಕೆ ನಾಪತ್ತೆಯಾಗಿದ್ದಾಳೆ ಎಂದು ಅಯ್ಯಗಾರಿ ಸಾಯಿಕೃಷ್ಣ ಅವರು ಹೇಳಿದರು.

ತನ್ನ ದೂರಿನಲ್ಲಿ ಸಾಯಿಕೃಷ್ಣ ಮಹಿಳೆಯನ್ನು ತನ್ನ ಸೊಸೆ ಎಂದು ಹೇಳಿಕೊಂಡಿದ್ದಾನೆ. ಆದಾಗ್ಯೂ ತನಿಖೆ ಮುಂದುವರೆದಂತೆ ಸಿಸಿಟಿವಿಗಳು ಮತ್ತು ಇತರ ತಾಂತ್ರಿಕ ಡೇಟಾವನ್ನು ಶೋಧಿಸಿದ ನಂತರ ಸಾಯಿಕೃಷ್ಣ ಅವರ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ.
ನಂತರ ವಿಚಾರಣೆ ವೇಳೆ ಸಾಯಿಕೃಷ್ಣ ತಪ್ಪೊಪ್ಪಿಕೊಂಡಿದ್ದು, ತಾನು ಅಪ್ಸರಾಳನ್ನು ಕೊಂದಿರುವುದಾಗಿ ಬಹಿರಂಗಪಡಿಸಿದ್ದಾನೆ. ಪೊಲೀಸರ ಪ್ರಕಾರ, ಸಾಯಿಕೃಷ್ಣನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ, ಅಪ್ಸರಾ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ.
ಸಾಯಿಕೃಷ್ಣ ಅವರ ತಪ್ಪೊಪ್ಪಿಗೆ ಪ್ರಕಾರ, ಅಪ್ಸರಾ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಹೀಗಾಗಿ ಸಾಯಿಕೃಷ್ಣ ಆಕೆಯ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಆರೋಪಿ ಶಂಶಾಬಾದ್‌ನಲ್ಲಿ ಅಪ್ಸರಾವನ್ನು ಕೊಂದು ನಂತರ ಸರೂರ್‌ನಗರಕ್ಕೆ ಸಾಗಿಸುವ ಮೊದಲು ಶವವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ್ದನು. ಅವರು ಅರ್ಚಕರಾಗಿ ಸೇವೆ ಸಲ್ಲಿಸಿದ ದೇವಸ್ಥಾನದ ಸಮೀಪವಿರುವ ಎಂಆರ್‌ಒ ಕಚೇರಿಯ ಹಿಂಭಾಗದ ಮ್ಯಾನ್‌ಹೋಲ್‌ಗೆ ಶವವನ್ನು ಎಸೆದ್ದನು. ಸಾಯಿಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.












Click it and Unblock the Notifications