Amitabh Bachchan: ಹೈದರಾಬಾದ್ ನಲ್ಲಿ ಚಿತ್ರೀಕರಣದ ವೇಳೆ ಗಾಯಗೊಂಡ ಅಮಿತಾಬ್
ಹೈದರಾಬಾದ್‌ನಲ್ಲಿ 'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದಾರೆ.
ದೆಹಲಿ ಮಾರ್ಚ್ 6: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಹೈದರಾಬಾದ್‌ನಲ್ಲಿ ತಮ್ಮ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ. ನಟ ತಮ್ಮ ಬ್ಲಾಗ್‌ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಚಿತ್ರದ ಆಕ್ಷನ್ ಸೀಕ್ವೆನ್ಸ್ ವೇಳೆ ಬಿಗ್ ಬಿ ಗಾಯಗೊಂಡಿದ್ದರು. ದುರದೃಷ್ಟವಶಾತ್ ಈ ವೇಳೆ ಅವರ ಬಲ ಪಕ್ಕೆಲುಬು ಮುರಿದಿದೆ.
ಗಾಯದಿಂದ ಚೇತರಿಸಿಕೊಳ್ಳಲು ವಾರಗಳು ಬೇಕಾಗುವುದರಿಂದ ಚಿತ್ರದ ಶೂಟಿಂಗ್ ಅನ್ನು ರದ್ದುಗೊಳಿಸಬೇಕಾಗಿದೆ. ಅಮಿತಾಬ್ ಬಚ್ಚನ್ ಮನೆಗೆ ಹಿಂದಿರುಗುವ ಮೊದಲು ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ಗೆ ಒಳಗಾಗಿದ್ದರು. ಸದ್ಯಕ್ಕೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಅಮಿತಾಬ್ ಬಚ್ಚನ್‌ಗೆ ಶೂಟ್ ಸಮಯದಲ್ಲಿ ಗಾಯ
ತಮ್ಮ ಬ್ಲಾಗ್‌ನಲ್ಲಿ ಅಮಿತಾಬ್ ಬಚ್ಚನ್ ಈ ಬಗ್ಗೆ ಬರೆದುಕೊಂಡಿದ್ದಾರೆ, "ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದಲ್ಲಿ ಆಕ್ಷನ್ ಶಾಟ್ ಸಮಯದಲ್ಲಿ ನನಗೆ ಗಾಯವಾಗಿದೆ. ಹೈದರಾಬಾದ್‌ನ AIG ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಲಾಯಿತು. ಸ್ಕ್ಯಾನ್ ಮಾಡಿಸಿಕೊಂಡು ಮನೆಗೆ ಮರಳಿದ್ದೇನೆ. ನೋವಿಗೆ (sic) ಕೆಲವು ಔಷಧಗಳನ್ನು ನೀಡಲಾಗಿದೆ" ಎಂದು ಉಲ್ಲೇಖಿಸಿದ್ದಾರೆ.
"ಆದ್ದರಿಂದ ಮಾಡಬೇಕಾಗಿದ್ದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ. ವಾಸಿಯಾಗುವವರೆಗೆ ಶೂಟಿಂಗ್ ರದ್ದುಗೊಳಿಸಲಾಗಿದೆ. ನಾನು ಜಲ್ಸಾದಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಇದನ್ನು ತಿಳಿದು ಸುಮಾರು ಜನ ನನ್ನನ್ನು ಭೇಟಿ ಮಾಡಲು ಬರುತ್ತಿದ್ದಾರೆ. ಆದರೆ ನನಗೆ ವಿಶ್ರಾಂತಿಯ ಅಗತ್ಯವಿದ್ದು ನಿಮ್ಮನ್ನು ಭೇಟಿ ಮಾಡುವುದು ಕಷ್ಟವಾಗುತ್ತಿದೆ. ನಾನು ಇಂದು ಸಂಜೆ ಜಲ್ಸಾ ಗೇಟ್‌ನಲ್ಲಿ ಹಿತೈಷಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬರಬೇಡಿ. ಬರುವ ಉದ್ದೇಶವಿರುವವರಿಗೆ ನಿಮ್ಮಿಂದ ಸಾಧ್ಯವಾದಷ್ಟು ಮಾಹಿತಿ ನೀಡಿ'' ಎಂದು ಮನವಿ ಮಾಡಿದ್ದಾರೆ.

ಪ್ರಾಜೆಕ್ಟ್ ಕೆ ಬಗ್ಗೆ
ಪ್ರಾಜೆಕ್ಟ್ ಕೆ ಒಂದು ಫ್ಯಾಂಟಸಿ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ ಅಶ್ವಿನಿ ದತ್-ಬೆಂಬಲಿತ ಚಲನಚಿತ್ರದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ನಟಿಯಾಗಿ ನಟಿಸಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪ್ರಾಜೆಕ್ಟ್ ಕೆ 2024 ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಅಶ್ವಿನಿ ದತ್ ಈ ಹಿಂದೆ ಚಿತ್ರವು 'ವಿಷ್ಣುವಿನ ಆಧುನಿಕ ಅವತಾರದ ಬಗ್ಗೆ' ಇದೆ ಎಂದು ಹೇಳಿದ್ದರು. ವರದಿಯ ಪ್ರಕಾರ, ಈ ಚಿತ್ರವನ್ನು ಭವಿಷ್ಯದ ಜಗತ್ತಿನಲ್ಲಿ ಹೊಂದಿಸಲಾಗಿದೆ.












Click it and Unblock the Notifications