Get Updates
Get notified of breaking news, exclusive insights, and must-see stories!

ಇತಿಹಾಸ ತಪ್ಪಾಗಿ ಉಲ್ಲೇಖಿಸಿ ಪೇಚಿಗೆ ಸಿಕ್ಕ ರಾಜಸ್ಥಾನ ಬಿಜೆಪಿ ಅಧ್ಯಕ್ಷ

ಜೈಪುರ, ಜುಲೈ 26: ಗೋವುಗಳ ರಕ್ಷಣೆ ವಿಚಾರದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಇತಿಹಾಸವನ್ನು ತಪ್ಪಾಗಿ ಉಲ್ಲೇಖಿಸಿದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಪೇಚಿಗೆ ಸಿಲುಕಿದ್ದಾರೆ.

ಮರಣಶಯ್ಯೆಯಲ್ಲಿದ್ದ ಮೊಘಲ್ ಸಾಮ್ರಾಟ ಹುಮಾಯೂನ್, ಭಾರತದಲ್ಲಿ ಆಡಳಿತ ಮುಂದುವರಿಸಬೇಕಾದರೆ ಗೋವುಗಳು, ಬ್ರಾಹ್ಮಣರು ಮತ್ತು ಮಹಿಳೆಯರನ್ನು ಗೌರವಿಸುವಂತೆ ತನ್ನ ತಂದೆಗೆ ಸಲಹೆ ನೀಡಿದ್ದ ಎಂಬ ಸೈನಿ ಹೇಳಿಕೆ ವ್ಯಾಪಕ ಲೇವಡಿಗೆ ಗುರಿಯಾಗಿದೆ.

'ಹುಮಾಯೂನ್ ಸಾಯುವಾಗ ಆತ ಬಾಬರ್‌ನನ್ನು ಕರೆದು, ನೀವು ಹಿಂದೂಸ್ತಾನದಲ್ಲಿ ಆಡಳಿತ ಮುಂದುವರಿಸಬೇಕು ಎಂಬ ಬಯಸಿದ್ದರೆ ಮೂರು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಗೋವುಗಳು, ಬ್ರಾಹ್ಮಣರು ಮತ್ತು ಮಹಿಳೆಯರನ್ನು ಗೌರವಿಸಬೇಕು' ಎಂದು ಸಲಹೆ ನೀಡಿದ್ದಾಗಿ ಸೈನಿ ಹೇಳಿದ್ದಾರೆ.

humayun advised babur to respect cows: bjp madan lal saini

ತಂದೆ ನಿಧನದ 25 ವರ್ಷದ ಬಳಿಕ ಮರಣಹೊಂದಿದ ಹುಮಾಯೂನ್, ಯಾವಾಗ ಮರಣಶಯ್ಯೆಯಲ್ಲಿದ್ದ ಎಂಬ ಪ್ರಶ್ನೆ ಉದ್ಭವಿಸಿದೆ.

ಬಾಬರ್ 1531ರಲ್ಲಿ ಮೃತಪಟ್ಟಿದ್ದರೆ, ಹುಮಾಯೂನ್ 1556ರಲ್ಲಿ ಕೊನೆಯುಸಿರೆಳೆದಿದ್ದ. ಇತಿಹಾಸದ ಮಾಹಿತಿ ಅರಿಯದೆ ಸೈನಿ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ಗೋಸಾಗಾಣಿಕೆ ಮಾಡುತ್ತಿದ್ದವರನ್ನು ಕಳ್ಳರೆಂದು ಭಾವಿಸಿ ಜನರ ಗುಂಪೊಂದು ಒಬ್ಬಾತನನ್ನು ಹೊಡೆದು ಕೊಂದ ಘಟನೆ ನಡೆದು ಕೆಲವು ದಿನಗಳ ಬಳಿಕ ಸೈನಿ ಈ ಹೇಳಿಕೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+