ಯೋಗಿ ಊರಲ್ಲಿ ರಾಹುಲ್ ಗಾಂಧಿ ಹೊಲಿದ ಮೆಟ್ಟಿಗೆ ಎಲ್ಲಿಲ್ಲದ ಬೇಡಿಕೆ.! ಎಷ್ಟು ಕೋಟಿ ಕೊಟ್ಟರೂ ಮಾರಲ್ಲ ಎಂದ ಚಮ್ಮಾರ
ಉತ್ತರ ಪ್ರದೇಶ, ಆಗಸ್ಟ್, 02: ಸಾಮಾನ್ಯವಾಗಿ ಹಲವರು ಮಂದಿ ತಮಗೆ ಬಂದ ವಿಶೇಷ ಉಡುಗೊರೆಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರಲ್ಲೂ ಅವುಗಳನ್ನು ಹೆಚ್ಚು ಹಣಕ್ಕೆ ಮಾರಾಟ ಮಾಡುವ ಬೇಡಿಕೆ ಬಂದಂತಹ ಸಂದರ್ಭದಲ್ಲೂ ಕೂಡ ಅವುಗಳನ್ನು ಯಾವುದೇ ಕಾರಣಕ್ಕೂ ತಮ್ಮ ಜೀವವನ್ನು ಹೊತ್ತೆ ಇಡುತ್ತಾರೆಯೇ ಹೊರತು, ಅವುಗಳನ್ನು ಮಾರುವುದಿಲ್ಲ. ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ.
ಯೋಗಿ ಆದಿತ್ಯನಾಥ ಅವರ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ರಾಹುಲ್ ಗಾಂಧಿಯವರು ಚಪ್ಪಲಿ ಹೊಲಿಯುವ ಮೂಲಕ ಮೋಡಿಯನ್ನೇ ಮಾಡಿದ್ದಾರೆ. ಇನ್ನು ಮೊದಲು ಸುಲ್ತಾನಪುರದಲ್ಲಿರುವ ಈ ಚಮ್ಮಾರನ ಅಂಗಡಿಗೆ ಯಾರು ಕೂಡ ಬರುತ್ತಿರಲಿಲ್ಲ. ವ್ಯಾಪಾರವೂ ಅಷ್ಟಕಷ್ಟೇ ಎಂಬಾಂತಾಗಿತ್ತು. ಆದರೆ, ರಾಹುಲ್ ಗಾಂಧಿ ಇಲ್ಲಿಗೆ ಭೇಟಿ ನೀಡಿ ತಮ್ಮ ಕೈಯಾರೆ ಚಪ್ಪಲಿ ಹೊಲಿದು ಹೋದ ಬಳಿಕ ರಾಮ್ ಚೇತ್ ಅಂಗಡಿಗೆ ಒಂದು ಕಳೆ ಬಂದಂತಾಗಿದೆ. ಈ ಬಗ್ಗೆ ಸ್ವತಃ ಈ ಅಂಗಡಿ ಮಾಲೀಕ ರಾಮ್ ಚೇತ್ ಅವರೇ ಹೇಳಿಕೊಂಡಿದ್ದಾರೆ.

ಸುಲ್ತಾನಪುರ ಹೊರ ವಲಯದಲ್ಲಿರುವ ನನ್ನ ಅಂಗಡಿಗೆ ರಾಹುಲ್ ಗಾಂಧಿ ಅವರು ಭೇಟಿ ಕೊಟ್ಟ ಮೇಲೆ ನನಗೆ ಲಕ್ ಖುಲಾಯಿಸಿತು. ಅಂದಿನಿಂದ ಬರೀ ಗ್ರಾಹಕರ ಸಂಖ್ಯೆ ಹೆಚ್ಚಾಗುವುದಷ್ಟೇ ಅಲ್ಲದೆ, ನನ್ನ ಬಳಿ ಸೆಲ್ಪೀ ಕೂಡ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಕೈಯಾರೆ ಹೊಲಿದ ಚಪ್ಪಲಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಆದರೆ, ಇವುಗಳನ್ನು ಎಷ್ಟೇ ಹಣ ಕೊಟ್ಟರೂ ಯಾರಿಗೂ ಕೊಡುವುದಿಲ್ಲ. ಬದಲಿಗೆ ಗ್ಲಾಸ್‌ನಲ್ಲಿ ಜೋಪಾನವಾಗಿರಿಸುತ್ತೇನೆ ಅನ್ನುತ್ತಿದ್ದಾರೆ.
ಚಮ್ಮಾರ ರಾಮ್ ಚೇತ್ ಮುಂದುವರೆದು ಮಾತನಾಡಿ, "ಇದುವರೆಗೂ ನಿರ್ಲಕ್ಷಿತನಾಗಿದ್ದ ನನ್ನ ಬಳಿ ಜನ ಬಂದು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಅಂದಿನಿಂದ ನನಗೆ ಅನೇಕರಿಂದ ಕರೆಗಳು ಕೂಡ ಬರುತ್ತಿದ್ದು, ಪ್ರತಾಪಗಢದ ಒಬ್ಬರು ಆ ಚಪ್ಪಲಿಗಾಗಿ 5 ಲಕ್ಷ ರೂಪಾಯಿ ಕೊಡಲು ಸಿದ್ಧರಿದ್ದರು. ಆಗ ನಾನು ನಿರಾಕರಿಸಿದಾಗ 10 ಲಕ್ಷ ರೂಪಾಯಿ ಕೊಡಲು ನಿರ್ಧರಿಸಿದರು. ಆದರೆ ನನ್ನ ಪಾಲಿಗೆ ಆ ಚಪ್ಪಲಿ ಅದೃಷ್ಟದ ಸಂಕೇತವಾಗಿದ್ದು, ಅದನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡುತ್ತೇನೆ. ಯಾರಿಗೂ ಮಾರುವುದಿಲ್ಲ," ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಮೊದಲು ಬರೀ ಚಮ್ಮಾರನಾಗಿದ್ದ, ಆದರೆ ಇದೀಗ ಇದರ ಜೊತೆಗೆ ಸೆಲೆಬ್ರೆಟಿ ಕೂಡ ಆಗಿದ್ದಾರೆ. ಅಷ್ಟರ ಮಟ್ಟಿಗೆ ರಾಮ್ ಚೇತ್ ತನ್ನ ಊರಿನಲ್ಲಿ ಪ್ರಸಿದ್ಧಿ ಹೊಂದಿದ್ದಾರೆ.












Click it and Unblock the Notifications