ಗುರ್ಗಾಂವ್ ನಲ್ಲಿ 100 ಕೋಟಿ ರೂ. ಬೆಟ್ಟಿಂಗ್ ಜಾಲ ಪತ್ತೆ

Subscribe to Oneindia Kannada

ಗುರ್ಗಾಂವ್, ಅಕ್ಟೋಬರ್ 30: ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಟ್ಟಿಂಗ್ ಜಾಲವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಹೊರವಲಯದಲ್ಲಿ ಗುರ್ಗಾಂವ್ ಸಮೀಪ ಬಂಗಲೆಯೊಂದರಲ್ಲಿ ಈ ಬೆಟ್ಟಿಂಗ್ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ.

ಈ ಬೆಟ್ಟಿಂಗ್ ಜಾಲ 100 ಕೋಟಿಗೂ ಅಧಿಕ ಹಣವನ್ನು ಗಳಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Huge Betting Racket Worth Rs. 100 Crore Busted In Gurgaon

ಗುರ್ಗಾಂವ್ ನಿಂದ ಬಲು ದೂರದಲ್ಲಿರುವ ಗೋವಾದ ಕ್ಯಾಸಿನೋ ಒಂದು ನಡೆಸಿದ ಭಾರೀ ಮೊತ್ತದ ಹಣ ವರ್ಗಾವಣೆಯನ್ನು ಬೆನ್ನತ್ತಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ಈ ಬೃಹತ್ ಬೆಟ್ಟಿಂಗ್ ಜಾಲ ಬಾಯ್ದೆರೆದಿದೆ.

ಇನ್ನು ಗೋವಾ, ಗುರ್ಗಾಂವ್ ಮಾತ್ರವಲ್ಲದೆ ದೆಹಲಿ, ನೋಯ್ಡಾ, ಕೊಲ್ಕೊತ್ತಾದಲ್ಲಿಯೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ 2 ಕೋಟಿ ನಗದು, ಚಿನ್ನಾಭರಣ ಹಾಗೂ ಲೆಕ್ಕವಿಲ್ಲದಷ್ಟು ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ದಾಳಿಯ ನಂತರ ಬೆಟ್ಟಿಂಗ್ ರಾಕೆಟ್ ಉದ್ಯಮಿ ಹೇಳಿಕೆ ನೀಡಿದ್ದು 90 ಕೋಟಿ ರೂ. ಆದಾಯ ಗಳಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಬೆಟ್ಟಿಂಗ್ ಚತುರರು ಮಿನಿ ಟೆಲಿಫೋನ್ ಎಕ್ಸ್ ಚೇಂಜ್ ಹೊಂದಿದ್ದರು. ಇವುಗಳನ್ನು 27 ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳಿಗೆ ಸಂಪರ್ಕ ಮಾಡುತ್ತಿದ್ದರು. ಸಂಪರ್ಕ ಸಾಧನಗಳಿಗೆ ಬೆಟ್ಟಿಂಗ್ ದಂಧೆಕೋರರು ಭಾರೀ ಹಣ ಹೂಡಿದ್ದರು ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A betting racket running from a bungalow on the outskirts of New Delhi has been busted by income tax authorities that is suspected to have generated over 100 crores in unaccounted income.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ