IRCTC: ದೃಢೀಕೃತ ರೈಲು ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾಯಿಸಲು ಬಯಸುವಿರಾ?, ವಿಧಾನಗಳು ಇಲ್ಲಿವೆ

ದೃಢೀಕೃತ ರೈಲು ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾಯಿಸಲು ಬಯಸುವಿರಾ, ಹಾಗಾದರೆ ಟಿಕೆಟ್‌ ವರ್ಗಾವಣೆ ಪ್ರಕ್ರಿಯೆಯ ವಿವರ ಇಲ್ಲಿದೆ ನೋಡಿ.

ನವದೆಹಲಿ, ಫೆಬ್ರವರಿ, 10: ಸಾಮಾನ್ಯವಾಗಿ ರೈಲಿನಲ್ಲಿ ದೂರದ ಊರುಗಳಿಗೆ ಪ್ರಯಾಣ ಮಾಡಲು ಒಂದು ವಾರದ ಮುಂಚಿತವಾಗಿಯೇ ಟಿಕೆಟ್‌ ಬುಕ್‌ ಮಾಡಿ ಆಸನಗಳನ್ನು ಕಾಯ್ದಿರಿಸುತ್ತಾರೆ. ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಯಾವುದೇ ದಾರಿಯಿಲ್ಲದೆ ರೈಲ್ವೇ ಪ್ರಯಾಣವನ್ನು ರದ್ದುಗೊಳಿಸಲೇಬೇಕಿತ್ತು. ಆಗ ಹಣ ವ್ಯರ್ಥವಾಗುವುದಲ್ಲದೇ, ಖರೀದಿಸಿದ ಟಿಕೆಟ್‌ ಕೂಡ ಸುಮ್ಮನೆ ವ್ಯರ್ಥವಾಗುತ್ತಿತ್ತು. ಅದಕ್ಕಾಗಿಯೇ IRTC ಪ್ರಯಾಣಿಕರ ಹಣ ವ್ಯರ್ಥವಾಗದಂತೆ ಉತ್ತಮ ಯೋಜನೆಯನ್ನು ಇದೀಗ ಜಾರಿಗೊಳಿಸಿದೆ. ಹಾಗಾದರೆ ಆ ಯೋಜನೆಯಲ್ಲಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ದೃಢೀಕರಿಸಿದ ರೈಲು ಕಾಯ್ದಿರಿಸುವಿಕೆಯನ್ನು ಹೊಂದಿದ್ದರೂ, ತುರ್ತುಸ್ಥಿತಿಯ ಕಾರಣದಿಂದಾಗಿ ಪ್ರಯಾಣಿಸಲು ಸಾಧ್ಯವಾಗದಂತಹ ಅನುಭವ ಪ್ರಯಾಣಿಕರಿಗೆ ಹಲವು ಬಾರಿ ಆಗಿರುತ್ತದೆ. ಆದ್ದರಿಂದ ನಿಮ್ಮ ಟಿಕೆಟ್ ವ್ಯರ್ಥವಾಗುವ ಬದಲು, ಅದನ್ನು ಬೇರೆಯವರಿಗೆ ವರ್ಗಾಯಿಸುವ ಆಯ್ಕೆಯನ್ನು ಭಾರತೀಯ ರೈಲ್ವೇ ನೀಡಿದೆ.

ಟಿಕೆಟ್‌ ವರ್ಗಾಯಿಸುವ ವಿಧಾನಗಳು

ಪ್ರಯಾಣಿಕರು ರೈಲು ಟಿಕೆಟ್ ಪಡೆದ ನಂತರವೂ ತಮ್ಮ ಸ್ಥಳಕ್ಕೆ ಪ್ರಯಾಣಿಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಹೆಚ್ಚಾಗಿ ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ, ನಿಮಗೆ ಪ್ರಯಾಣಿಸಲು ಸಾಧ್ಯವಾಗದಿದ್ದರೆ ಮುಂಗಡವಾಗಿ ಬುಕ್‌ ಮಾಡಿದ ಟಿಕೆಟ್ ಅನ್ನು ಅಗತ್ಯವಿರುವವರಿಗೆ ವರ್ಗಾಯಿಸಲು ರೈಲ್ವೆ ಇಲಾಖೆ ಈ ಉತ್ತಮ ಸೌಲಭ್ಯವನ್ನು ಪ್ರಾರಂಭಿಸಿದೆ. ಓರ್ವ ಪ್ರಯಾಣಿಕನು ತನ್ನ ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು, ಪತಿ ಮತ್ತು ಹೆಂಡತಿಯಂತಹ ತನ್ನ ಕುಟುಂಬದ ಯಾವುದೇ ಇತರ ಸದಸ್ಯರ ಹೆಸರಿನಲ್ಲಿ ಬುಕ್‌ ಮಾಡಿದ ಟಿಕೆಟ್‌ ಅನ್ನು ಬೇರೆಯವರಿಗೆ ವರ್ಗಾಯಿಸಬಹುದಾಗಿದೆ.

 How to transfer your confirmed train ticket for someone else? Know details in kannada

ಒಂದು ಬಾರಿ ಮಾತ್ರ ಟಿಕೆಟ್‌ ವರ್ಗಾವಣೆಗೆ ಅವಕಾಶ

ಬುಕ್‌ ಮಾಡಿದ ಟಿಕೆಟ್‌ ಅನ್ನು ಬೇರೆಯವರಿಗೆ ವರ್ಗಾವಣೆ ಮಾಡಲು ರೈಲು ಹೊರಡುವ 24 ಗಂಟೆಗಳ ಮೊದಲು ರೈಲ್ವೆ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ನಂತರ, ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರ ಹೆಸರನ್ನು ಕಡಿತಗೊಳಿಸಲಾಗುತ್ತದೆ. ಬಳಿಕ ಟಿಕೆಟ್ ಯಾರ ಹೆಸರಿಗೆ ವರ್ಗಾಯಿಸಲ್ಪಟ್ಟಿದೆಯೋ ಅವರ ಹೆಸರನ್ನು ಸೇರಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ರೈಲ್ವೆ ಇಲಾಖೆ ಮಾಡಿದೆ. ಆದರೆ ಒಂದು ಬಾರಿ ಮಾತ್ರ ಟಿಕೆಟ್‌ ವರ್ಗಾವಣೆ ಮಾಡಲು ಅವಕಾಶವಿರುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+