ರೈಲು ಮಾಹಿತಿ ನೀಡುವ ವಾಟ್ಸಾಪ್ ಸೇವೆ ಬಳಸುವುದು ಹೇಗೆ?

ಬೆಂಗಳೂರು, ಜುಲೈ 25: ಪ್ರಯಾಣಿಕರಿಗೆ ತಂತ್ರಜ್ಞಾನದ ಮೂಲಕ ರೈಲುಗಳ ಕ್ಷಣಕ್ಷಣದ ಮಾಹಿತಿ ಒದಗಿಸುವ ವಾಟ್ಸಾಪ್ ಸೇವೆಯನ್ನು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಆರಂಭಿಸಿದೆ. ಈ ಸೇವೆ ಬಳಕೆ ಹೇಗೆ? ಇಲ್ಲಿದೆ ವಿವರ...

ರೈಲಿನ ಸಂಖ್ಯೆ ನಮೂದಿಸಿದ ಕೆಲವು ಕ್ಷಣಗಳಲ್ಲೆ ರೈಲಿನ ಸ್ಥಿತಿಗತಿಯ ಸಂದೇಶ ಬರುತ್ತದೆ. ರೈಲಿನ ರಿಯಲ್ ಟೈಮ್ ತಿಳಿಸುವ ಈ ವ್ಯವಸ್ಥೆಯನ್ನು ಹರಿಯಾಣದ ಗುರುಗ್ರಾಮ ಮೂಲದ 'ಮೇಕ್​ವೆುೖಟ್ರಿಪ್ ' ಸಂಸ್ಥೆ ಸಹಯೋಗದಲ್ಲಿ ಐಆರ್​ಸಿಟಿಸಿ ಆರಂಭಿಸಿದೆ.

How to check train running status on WhatsApp

ಪ್ರಯಾಣಿಕರು 'ಮೇಕ್​ವೆುೖಟ್ರಿಪ್'ನ 7349389104 ಸಂಖ್ಯೆಯನ್ನು ಅಂತರ್ಜಾಲ ಸಂಪರ್ಕ ಇರುವ ಸ್ಮಾರ್ಟ್​ಫೋನ್, ಟ್ಯಾಬ್ಲೆಟ್​ನಲ್ಲಿ ಸೇವ್ ಮಾಡಿಕೊಂಡು ರೈಲಿನ ಸಂಖ್ಯೆಯನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ 10 ಸೆಕೆಂಡ್​ಗಳಲ್ಲಿ ಸಂಬಂಧಿಸಿದ ರೈಲಿನ ಮಾಹಿತಿ ದೊರೆಯುತ್ತದೆ.

ಈ ಮಾಹಿತಿಯಲ್ಲಿ ರೈಲಿನ ಸಂಖ್ಯೆ- ಹೆಸರು, ತಡವಾಗಿ ಚಲಿಸುತ್ತಿದ್ದರೆ ಎಷ್ಟು ನಿಮಿಷ ತಡ, ಹಿಂದಿನ ನಿಲ್ದಾಣದಿಂದ ಹೊರಟ ಸಮಯ, ಮುಂದಿನ ನಿಲ್ದಾಣ ತಲುಪುವ ಸಮಯ ಇರುತ್ತದೆ. ಜತೆಗೆ ರೈಲಿನ ಮಾಹಿತಿ ಕಡೆಯ ಬಾರಿಗೆ ಅಪ್​ಡೇಟ್ ಆಗಿರುವ ಸಮಯವೂ ಮೂಡುತ್ತದೆ. ರೈಲಿನ ಸ್ಥಿತಿಗತಿಯನ್ನು ತಿಳಿಯಲು ಪ್ರಯಾಣಿಕರು 139 ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕಿತ್ತು ಇಲ್ಲವೆ ಬೇರೆ ಸಂಸ್ಥೆಗಳು ನಿರ್ವಹಿಸುವ ಆಪ್​ಗಳನ್ನು ಆಶ್ರಯಿಸಬೇಕಿತ್ತು. ಈಗ ರೈಲ್ವೆ ಇಲಾಖೆಯ ಅಂಗಸಂಸ್ಥೆಯೆ ಈ ಸೌಲಭ್ಯ ನೀಡಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+