Kamal Haasan: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಮಲ್ ಹಾಸನ್ ಮಾಸಿಕ ಸಂಬಳ ಕೇಳಿದ್ರೆ ಶಾಕ್ ಗ್ಯಾರಂಟಿ
Kamal Haasan: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕನ್ನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಕಮಲ್ ಹಾಸನ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗಾದ್ರೆ ಅವರ ಮಾಸಿಕ ವೇತನ ಎಷ್ಟಿದೆ ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿ ಕೊರೆಯುತ್ತಿರುತ್ತದೆ. ಹಾಗಾದ್ರೆ ಇವೆಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಕೆಲವು ದಿನಗಳ ಹಿಂದೆ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ಕಮಲ್ ಹಾಸನ್ ಇದೀಗ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಅವರ ಮಾಸಿಕ ವೇತನದ ಬಗ್ಗೆ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಕಮಲ್ ಹಾಸನ್ ಅವರು ಡಿಎಂಕೆ ಪಕ್ಷದ ಬೆಂಬಲದಿಂದ ರಾಜ್ಯಸಭಾ ಸದಸ್ಯರಾಗಿರುವುದು ರಾಜಕೀಯವಾಗಿ ಪ್ರಮುಖ ಬೆಳವಣಿಗೆ ಆಗಿದೆ. ಡಿಎಂಕೆ ತನ್ನ ಸಂಸ್ಥೆಗೆ ಬಲ ನೀಡಲು ಹಾಗೂ ತಮಿಳುನಾಡಿನ ಪ್ರತಿನಿಧಿ ವ್ಯಕ್ತಿತ್ವವನ್ನು ಹೆಚ್ಚಿಸಲು ಈ ಸ್ಥಾನ ನೀಡಿದೆ. ಈ ಆಯ್ಕೆ ರಾಜ್ಯಸಭೆಯಲ್ಲಿ ಅಷ್ಟೇ ಅಲ್ಲದೆ, ದಕ್ಷಿಣ ಭಾರತದ ಸಹರಾಜಕೀಯ ಸಮೀಕರಣಗಳನ್ನೂ ಪ್ರತಿಬಿಂಬಿಸುತ್ತದೆ.
ಮಾಹಿತಿ ಪ್ರಕಾರ, ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿರುವ ಕಮಲ್ ಹಾಸನ್ ಅವರ ಮಾಸಿಕ ವೇತನ 1,24,000 ರೂಪಾಯಿ ಆಗಿದೆ. ದೈನಂದಿನ ಭತ್ಯೆ ಸಂಸತ್ತಿನ ಅಧಿವೇಶನಗಳಲ್ಲಿ ದಿನಕ್ಕೆ 2,500 ರೂಪಾಯಿ ಸಿಗಲಿದೆ. ಕಚೇರಿ ವೆಚ್ಚವಾಗಿ ತಿಂಗಳಿಗೆ 75,000 ರೂಪಾಯಿ ಸಿಗಲಿದೆ. ಸಹಾಯಕ ಸಿಬ್ಬಂದಿಗೆ ಮಾಸಿಕ 50,000 ರೂಪಾಯಿ ಸಿಗಲಿದ. ಕಚೇರಿ ಅಗತ್ಯಗಳಿಗಾಗಿ 25,000 ದೊರೆಯಲಿದೆ.
ಕಮಲ್ ಹಾಸನ್ ಮಾಸಿಕ ವೇತನದ ವಿವರ
* ಮಾಸಿಕ ವೇತನ: ₹1,24,000
* ದಿನದ ಭತ್ಯೆ: ಸಂಸತ್ತಿನ ಅಧಿವೇಶನ ದಿನಗಳಿಗೆ ಪ್ರತಿ ದಿನ ₹2,500
* ಕಚೇರಿ ವೆಚ್ಚ: ಮಾಸಿಕ ₹75,000
* ಸಹಾಯಕ ಸಿಬ್ಬಂದಿ ವೇತನ: ಮಾಸಿಕ ₹50,000
* ಕಚೇರಿ ಇತರ ಅವಶ್ಯಕತೆಳಿ: ಮಾಸಿಕ ₹25,000
* ಒಟ್ಟಾರೆ ಮಾಸಿಕ ಪಾವತಿ ಸುಮಾರು ₹2,81,000 ರೂಪಾಯಿ
ಸಂಸದರಿಗೆ ಸಿಗುವ ಹೆಚ್ಚುವರಿ ಸೌಲಭ್ಯಗಳು
* ಸಂಸದರಿಗೂ ಕುಟುಂಬಕ್ಕೂ ವರ್ಷಕ್ಕೆ 34 ಉಚಿತ ದೇಶೀಯ ವಿಮಾನ ಪ್ರಯಾಣ
* ಅಧಿಕೃತ-ಖಾಯಂ ಮತ್ತು ವೈಯಕ್ತಿಕ ಬಳಕೆಗಾಗಿ ಅನಿಯಮಿತ ಪ್ರಥಮ ದರ್ಜೆ ರೈಲು ಪ್ರಯಾಣದ ಸೌಲಭ್ಯ
* ನವದೆಹಲಿಯಲ್ಲಿ ಉಚಿತ ವಸತಿ
* ವರ್ಷಕ್ಕೆ 50,000 ಯುನಿಟ್ ಉಚಿತ ವಿದ್ಯುತ್ ಹಾಗೂ 4,000 ಕಿಲೋ ಲಿಟರ್ ಉಚಿತ ನೀರು.
* ಉಚಿತ ಫೋನ್ ಮತ್ತು ಇಂಟರ್‌ನೆಟ್ ಸೇವೆಗಳು
* ಹಿರಿಯ ಅಧಿಕಾರಿಗಳಿಗೆ ಸಿಗುವ ಮಟ್ಟದ ವೈದ್ಯಕೀಯ ಮತ್ತು ಆಸ್ಪತ್ರೆ ಸೌಲಭ್ಯಗಳು
* ಕಚೇರಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅವಕಾಶ ಮತ್ತು ವಾರ್ಷಿಕವಾಗಿ ಗ್ಯಾಜೆಟ್‌ಗಳಿಗಾಗಿ ಅನುದಾನ
* ನಿವೃತ್ತಿ ನಂತರ ತಿಂಗಳಿಗೆ 31,000 ರೂಪಾಯಿ ಪಿಂಚಣಿ ಸಿಗಲಿದ್ದು, ಐದು ವರ್ಷಕ್ಕಿಂತ ಮೀರಿದ ಸೇವೆಗೆ ವರ್ಷಕ್ಕೆ ಹೆಚ್ಚುವರಿಯಾಗಿ 2,500 ರೂಪಾಯಿ ದೊರೆಯಲಿದೆ.
ರಾಜ್ಯಸಭಾ ಅವಧಿ ಆರು ವರ್ಷಗಳಾಗಿದ್ದು, ಪ್ರತಿಯೊಂದು ಎರಡು ವರ್ಷಗಳಿಗೆ ಮೂರನೇ ಭಾಗದ ಸದಸ್ಯರು ನಿವೃತ್ತಿ ಆಗುತ್ತಾರೆ. ಇದಗ ಕಮಲ್ ಹಾಸನ್ ಅವರು ರಾಜ್ಯಸಭೆ ಸದಸ್ಯ ಹುದ್ದೆಗೇರಿದ್ದಾರೆ. ಇತ್ತೀಚೆಗಷ್ಟೇ ಇಲೆವೆನಗ್ ಸಿನಿಮಾದಿಂದ 100 ಕೋಟಿ ರೂಪಾಯಿ ಪಾವತಿ ಸಹ ಪಡೆದಿದ್ದಾರೆ. ಇದೀಗ ಅವರು ತಮಿಳುನಾಡನ್ನು ಪ್ರತಿನಿಧಿಸಿ ರಾಜ್ಯಸಭಾ ಸದಸ್ಯರು ಆಗಿದ್ದು, ಭಾರತ ಸರ್ಕಾರದಿಂದ ಮೊದಲ ಬಾರಿ ಸಂಬಳ ಪಡೆದುಕೊಳ್ಳಲಿದ್ದಾರೆ.












Click it and Unblock the Notifications