ಉಪರಾಷ್ಟ್ರಪತಿಯವರನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 18: ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಹಾಗೂ ಯುಪಿಎ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಆಗಸ್ಟ್ 5ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಹಾಗಿದ್ದರೆ ಉಪರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ?

ರಾಷ್ಟ್ರಪತಿ ಚುನಾವಣೆಯ ರೀತಿಯಲ್ಲೇ ಉಪರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಆದರೆ ಇಲ್ಲಿ ರಾಜ್ಯ ವಿಧಾನಸಭೆಯ ಶಾಸಕರಿಗೆ ಮತದಾನದ ಹಕ್ಕು ಇರುವುದಿಲ್ಲ. ಕೇವಲ ರಾಜ್ಯ ಸಭೆ ಮತ್ತು ಲೋಕಸಭೆಯ ಸದಸ್ಯರು ಮಾತ್ರ ಮತ ಚಲಾಯಿಸುತ್ತಾರೆ.

ರಾಷ್ಟ್ರಪತಿ ಚುನಾವಣೆ ಕ್ರಾಸ್ ವೋಟಿಂಗ್: ಕಾಂಗ್ರೆಸ್ಸಿಗೆ ಭಾರೀ ಮುಖಭಂಗ?

How is the Vice President of India elected

ರಾಜ್ಯಸಭೆಯ 233 ಚುನಾಯಿತಿ ಪ್ರತಿನಿಧಿಗಳು ಮತ್ತು 12 ನಾಮನಿರ್ದೇಶಿತ ಸದಸ್ಯರು, ಲೋಕಸಭೆಯ 543 ಪ್ರತಿನಿಧಿಗಳು ಮತ್ತು ಇಬ್ಬರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇರಲಿದೆ.

ಒಟ್ಟು 790 ಮತಗಳು ಇಲ್ಲಿ ಚಲಾವಣೆಯಾಗಲಿವೆ. ಇಲ್ಲಿ ಪ್ರತಿ ಮತಗಳ ಮೌಲ್ಯ 1 ಆಗಿರಲಿದೆ. ಬ್ಯಾಲೆಟ್ ಪೇಪರ್ ನಲ್ಲಿ ಎರಡು ಕಾಲಂಗಳಿರಲಿದ್ದುಅಭ್ಯರ್ಥಿಗಳ ಹೆಸರು ಮತ್ತು ಅದರ ಮುಂದೆ ಪ್ರಾಶಸ್ತ್ಯದ ಮತಗಳನ್ನು ಚಲಾಯಿಸಲು ಜಾಗವಿರಲಿದೆ.

ಚಲಾವಣೆಯಾದ ಮತಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ಪಡೆದವರು ಜಯಶಾಲಿಯಾಗಲಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ: ಗೋಪಾಲ ಕೃಷ್ಣ ಗಾಂಧಿ ವಿಪಕ್ಷಗಳ ಅಭ್ಯರ್ಥಿ

ಯಾರೆಲ್ಲಾ ಉಪರಾಷ್ಟ್ರಪತಿಯಾಗಲು ಅರ್ಹರು?

ಉಪರಾಷ್ಟ್ರಪತಿ ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತದ ಪ್ರಜೆಗಳಾಗಿರಬೇಕು.

ಆತ ಅಥವಾ ಆಕೆಗೆ ಕಡ್ಡಾಯವಾಗಿ 35 ವರ್ಷ ವಯಸ್ಸು ಮೀರಿರಬೇಕು.

ಭಾರತ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.

ರಾಜ್ಯ ಸಭಾ ಸದಸ್ಯರಂತೆ ಅವರೂ ಅರ್ಹತೆ ಹೊಂದಿರಬೇಕು.

ಚುನಾವಣಾ ವೇಳಾಪಟ್ಟಿ

ನಾಮಪತ್ರ ಸಲ್ಲಿಸಲು ಕೊನೆಯ ದಿನ-ಜುಲೈ 18

ನಾಮಪತ್ರ ಪರಿಶೀಲನೆ-ಜುಲೈ 19

ನಾಮಪತ್ರ ಹಿಂತೆಗೆತ-ಜುಲೈ 21

ಮತದಾನ - ಆಗಸ್ಟ್ 5

Pappu Is OverSmart Meets Chinese Envoy Secretly | Oneindia Kannada

ಮತ ಎಣಿಕೆ -ಆಗಸ್ಟ್ 5

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The battle for the next President of India will be fought between Venkaiah Naidu and Gopalkrishna Gandhi. The BJP on Monday chose Naidu to take on Gandhi in the election to be held in the month of August.
Please Wait while comments are loading...