ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷಗಳಿಗೆ ದೇಣಿಗೆ ಮೇಲೆ ನಿಬಂಧನೆ: ಕಪ್ಪು ಹಣ ಹೀಗೆ ನಿರ್ಮೂಲನೆ

ರಾಜಕೀಯ ಪಕ್ಷಗಳಿಗೆ ಅಜ್ಞಾತ ಮೂಲಗಳಿಂದ ಬರುವ ಹಣವನ್ನು ಮಟ್ಟಹಾಕಲು ಹೊಸ ನಿಯಮ ರೂಪಿಸಲಾಗಿದ್ದು ಅದು ಪಾರದರ್ಶಕವಾಗಿದ್ದು ಪರಿಣಾಮಕಾರಿಯಾಗಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 1: ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಒಬ್ಬ ವ್ಯಕ್ತಿಯಿಂದ ನಗದು ರೂಪದಲ್ಲಿ ಕೇವಲ 2 ಸಾವಿರ ರು.ಗಳನ್ನಷ್ಟೇ ಪಡೆಯಬೇಕು ಎಂಬ ಹೊಸ ನಿಯಮವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಬುಧವಾರ ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಇದರಿಂದ ನಿಜವಾಗಿಯೂ ಕಾಳ ಧನಕೋರರಿಗೆ ಬಿಸಿ ಮುಟ್ಟಿಸಿದ ಹಾಗಾಗುತ್ತಾ? ಇದರಿಂದ ಕಪ್ಪು ಹಣದ ಕರಾಳ ವ್ಯವಹಾರವೊಂದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗುತ್ತಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

How 'cash donation cap on political parties' will curb black money?

ನಗದು ರೂಪದಲ್ಲಿ ಒಬ್ಬ ವ್ಯಕ್ತಿಯಿಂದ ಕೇವಲ 2 ಸಾವಿರ ರು. ಮಾತ್ರ ಪಡೆಯಲು ಅವಕಾಶ ಕಲ್ಪಿಸಿರುವ ಜೇಟ್ಲಿ, 2 ಸಾವಿರ ರು.ಗಳಿಗಿಂತ ಹೆಚ್ಚಿನ ಮೊತ್ತದ ಹಣವನ್ನು ದೇಣಿಗೆದಾರರು ಎಲೆಕ್ಟೊರಲ್ ಬಾಂಡ್ ಗಳ (ಎಲೆಕ್ಟೊರಲ್ ಬಾಂಡ್) ಮೂಲಕ ರಾಜಕೀಯ ಪಕ್ಷಗಳಿಗೆ ಕಾಣಿಕೆ ಸಂದಾಯ ಮಾಡಬಹುದು.

ಎಲೆಕ್ಟೊರಲ್ ಬಾಂಡ್ ಎಂದರೇನು?

ಎಲೆಕ್ಟೊರಲ್ ಬಾಂಡ್ ಎಂದರೇನು?

ಇವು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಯಸುವವರಿಗಾಗಿ ಕೆಲವಾರು ಮಾನ್ಯತೆ ಪಡೆದ ಬ್ಯಾಂಕುಗಳಿಂದ ನೀಡಲಾಗುವ ಬಾಂಡ್. ದೇಣಿಗೆ ಕೊಡ ಬಯಸುವವರು ಇಂತಿಷ್ಟು ಮೊತ್ತದ ಬಾಂಡ್ ಗಳನ್ನು ಬ್ಯಾಂಕುಗಳಿಂದ ಖರೀದಿಸಿ ಅದನ್ನು ಪಕ್ಷಗಳಿಗೆ ನೀಡಬೇಕು. ಹೀಗೆ, ಬಾಂಡ್ ಖರೀದಿಸುವಾಗ ನಗದು ನೀಡುವಂತಿಲ್ಲ. ಇಲ್ಲಿ ಚೆಕ್ ಅಥವಾ ಡಿಜಿಟಲ್ ಪೇಮೆಂಟ್ ಮೂಲಕ ಪಾವತಿ ಮಾಡಬೇಕು. ಹೀಗೆ, ಬಂದ ಬಾಂಡ್ ಗಳನ್ನು ರಾಜಕೀಯ ಪಕ್ಷಗಳು ಬ್ಯಾಂಕುಗಳಿಗೆ ಹಿಂದಿರುಗಿಸಿ ಹಣವನ್ನಾಗಿ ಪರಿವರ್ತಿಸಿಕೊಳ್ಳಬಹುದು.

ಚೆಕ್, ಡಿಜಿಟಲ್ ಪೇಮಂಟೇ ಆಧಾರ

ಚೆಕ್, ಡಿಜಿಟಲ್ ಪೇಮಂಟೇ ಆಧಾರ

ಎಲೆಕ್ಟೊರಲ್ ಬಾಂಡ್ ಮೂಲಕ ಮಾತ್ರವಲ್ಲದೆ, ಚೆಕ್, ಡಿಜಿಟಲ್ ಪೇಮೆಂಟ್ ಗಳ ಮೂಲಕವೂ ಪಕ್ಷಗಳಿಗೆ ದೇಣಿಗೆಯನ್ನು ನೀಡಬಹುದಾಗಿದೆ. ನಗದು ರೂಪದ ದೇಣಿಗೆ ಹೊರತುಪಡಿಸಿ ಮೇಲೆ ತಿಳಿಸಲಾದ ಯಾವುದೇ ರೂಪದಲ್ಲಿ ದೇಣಿಗೆ ನೀಡಬಹುದು.

ನಿರ್ದಿಷ್ಟ ಅವಧಿಯ ಮಿತಿ

ನಿರ್ದಿಷ್ಟ ಅವಧಿಯ ಮಿತಿ

ಬಾಂಡ್ ಗಳನ್ನು ಯಾವಾಗ ಬೇಕೋ ಆವಾಗ ನಗದಾಗಿ ಪರಿವರ್ತಿಸುವಂತಿಲ್ಲ. ಪ್ರತಿಯೊಂದು ಬಾಂಡ್ ಗೂ ಅದನ್ನು ಖರೀದಿಸಿದ ದಿನಾಂಕದಿಂದ ಇಂತಿಷ್ಟು ಅವಧಿಯವರೆಗೆ ಅದರ ಮಾನ್ಯತೆಯನ್ನು ನಿಗದಿಗೊಳಿಸಲಾಗಿರುತ್ತದೆ. ಹಾಗಾಗಿ, ಆ ನಿಗದಿತ ಅವಧಿಯೊಳಗೇ ಆ ಬಾಂಡ್ ಗಳನ್ನು ಹಣವನ್ನಾಗಿ ರಾಜಕೀಯ ಪಕ್ಷಗಳು ಪರಿವರ್ತಿಸಿಕೊಳ್ಳಬೇಕು. ಇಲ್ಲಿಯೂ ರಾಜಕೀಯ ಪಕ್ಷಗಳ ಬ್ಯಾಂಕ್ ಅಕೌಂಟ್ ಗೆ ಆ ಹಣ ರವಾನೆಯಾಗುತ್ತದೆ.

ಪಕ್ಷಗಳಿಗೂ ರಿಟರ್ನ್ ಫೈಲ್ ಕಡ್ಡಾಯ

ಪಕ್ಷಗಳಿಗೂ ರಿಟರ್ನ್ ಫೈಲ್ ಕಡ್ಡಾಯ

ವೇತನದಾರರಂತೆ, ರಾಜಕೀಯ ಪಕ್ಷಗಳೂ ರಿಟರ್ನ್ಸ್ ಫೈಲ್ ಮಾಡುವುದು ಇನ್ನು ಕಡ್ಡಾಯವಾಗಲಿದೆ. ವರ್ಷಕ್ಕೊಮ್ಮೆ ಆಯಾ ವರ್ಷದಲ್ಲಿ ತಮಗೆ ಬಂದ ಬಾಂಡ್ ಗಳ ಲೆಕ್ಕ, ತಾನು ಪಡೆದ ಹಣದ ಲೆಕ್ಕದ ಬಗ್ಗೆ ಪ್ರತಿಯೊಂದು ರಾಜಕೀಯ ಪಕ್ಷವೂ ಕಡ್ಡಾಯವಾಗಿ ಸರ್ಕಾರಕ್ಕೆ ರಿಟರ್ನ್ಸ್ ಮೂಲಕ ಮಾಹಿತಿ ನೀಡಲೇಬೇಕಿದೆ.

ಖಾತೆಗೆ ಹಣ ವರ್ಗಾವಣೆ

ಖಾತೆಗೆ ಹಣ ವರ್ಗಾವಣೆ

ಬಾಂಡ್ ಗಳ ಮೂಲಕ ಆಗುವ ದೇಣಿಗೆ ವ್ಯವಹಾರವು ಅಪ್ಪಟ ಪಾರದರ್ಶಕವಾಗಿರುತ್ತದೆ. ಚೆಕ್ ಗಳ ಮೂಲಕವೇ ಬಾಂಡ್ ಖರೀದಿ, ಆನಂತರ, ಬಾಂಡ್ ಗಳಿಂದ ಪರಿವರ್ತನೆಗೊಂಡ ನೇರವಾಗಿ ಪಕ್ಷಗಳ ಬ್ಯಾಂಕ್ ಖಾತೆಗೇ ಸಾಗುವುದರಿಂದ ಇಡೀ ವ್ಯವಹಾರ ಪಾರದರ್ಶಕವಾಗಿರುತ್ತದೆ. ಇಲ್ಲಿ ಕಪ್ಪು ಹಣದ ಮಾತೇ ಇರುವುದಿಲ್ಲ.

English summary
With an aim to cleanse the political funding system and check black money, Finance Minister Arun Jaitley on Wednesday proposed to restrict cash donations to political parties from individuals to Rs 2,000. To achieve this aim, Arun Jaitley has proposed to introduce an 'electoral bonds' scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X