INDIA VS NDA: ಬಿಜೆಪಿ ವಿರುದ್ಧ ಬ್ರಹ್ಮಾಸ್ತ್ರ, ಭಾವನೆಗಳ ಮೂಲಕವೇ ತಿರುಗೇಟು!
ಒಂದು.. ಎರಡು.. ಮೂರು.. ಹೀಗೆ ಇನ್ನು ಬರೀ 9 ತಿಂಗಳು ಮಾತ್ರ ಬಾಕಿ. ಆ ಬಳಿಕ ಇಡೀ ಜಗತ್ತೇ ಕಾಯುತ್ತಿರುವ ಸಮಯ ಬರಲಿದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಹಾಗಾದರೆ ಈಗ ವಿರೋಧ ಪಕ್ಷಗಳು ಕಟ್ಟಿಕೊಂಡ 'ಇಂಡಿಯಾ' (INDIA) ಒಕ್ಕೂಟ ಬಿಜೆಪಿ ಪಾಲಿಗೆ ಹೇಗೆಲ್ಲಾ ಹೊಡೆತ ನೀಡಬಹುದು? ಪರಿಣಾಮ ಏನಾಗಬಹುದು? ಅಷ್ಟಕ್ಕೂ 'ಇಂಡಿಯಾ' ಎಂಬ ಹೆಸರನ್ನೇ ವಿರೋಧ ಪಕ್ಷಗಳು ಆರಿಸಿದ್ದು ಏಕೆ? ಬನ್ನಿ ತಿಳಿಯೋಣ.
'ಭಾರತ' ಎಂಬ ಪದದಲ್ಲೇ ಭಾವನೆ ಇದೆ, ಭಾರತೀಯರಿಗೆ ಸಾವಿರಾರು ವರ್ಷ ನಾಗರಿಕತೆ ಇತಿಹಾಸವಿದೆ. ಇಂತಿಪ್ಪ ಭಾರತ ಇದೀಗ ಜಾಗತಿಕ ಶಕ್ತಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ತಾಕತ್ತು ತೋರಿಸುತ್ತಿದೆ. ಭಾರತ ಎಂದರೆ ಜಗತ್ತಿನ ಪ್ರತಿಯೊಂದು ರಾಷ್ಟ್ರಕ್ಕೂ ಬೇಕೆಬೇಕು ಎನ್ನುವ ಅನಿವಾರ್ಯತೆ ಇದೆ. ಹೀಗಾಗಿಯೇ 2024ರ ಚುನಾವಣೆ ಪ್ರತಿಯೊಬ್ಬ ಭಾರತೀಯ ಹಾಗೂ ಜಗತ್ತಿನ ಪ್ರತಿಯೊಂದು ದೇಶಕ್ಕೂ ಮುಖ್ಯವಾಗಿದೆ. ಈ ಹೊತ್ತಲ್ಲೇ ವಿರೋಧ ಪಕ್ಷ ನಾಯಕರು ಬ್ರಹ್ಮಾಸ್ತ್ರ ಒಂದನ್ನು ಪ್ರಯೋಗಿಸಿದ್ದು, 'ಎನ್‌ಡಿಎ' ವಿರುದ್ಧ 'ಇಂಡಿಯಾ' ಎಂಬ ಒಕ್ಕೂಟ ರಚಿಸಿವೆ. ಹಾಗಾದ್ರೆ 'ಯುಪಿಎ', 'ಇಂಡಿಯಾ' ಎಂದು ಬದಲಾಗಿದ್ದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ.

'ಯುಪಿಎ' ದಿಢೀರ್ 'ಇಂಡಿಯಾ' ಆಗಿದ್ದೇಕೆ?
2024ರ ಲೋಕಸಭೆ ಚುನಾವಣೆ ಬಿಜೆಪಿ ನೇತೃತ್ವದ ಎನ್‌ಡಿಎ ಪಾಲಿಗೆ ಸುಲಭದ ತುತ್ತಾಗಿ ಉಳಿದಿಲ್ಲ. ಅದರಲ್ಲೂ ಸಾಲು ಸಾಲು ವಿಧಾನಸಭೆ ಚುನಾವಣೆಗಳ ಸೋಲು ಬಿಜೆಪಿಯನ್ನೇ ಕಂಗೆಡಿಸಿದೆ. ಹೀಗಾಗಿ 2019ರಲ್ಲಿ ಬಿಟ್ಟು ಹೋಗಿದ್ದ ದೋಸ್ತಿಗಳನ್ನು ಮತ್ತೆ ಕರೆಸಿಕೊಂಡು ಸ್ನೇಹ ಮಾಡಿಕೊಳ್ಳುತ್ತಿದೆ ಎನ್‌ಡಿಎ. ಆದರೆ ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳಿಂದ ಹೊಸ ಅಸ್ತ್ರ ಪ್ರಯೋಗವಾಗಿದ್ದು ಹಿಂದೆ ಇದ್ದ 'ಯುಪಿಎ' ಒಕ್ಕೂಟದ ಪದವೇ ಬದಲಾಗಿ ಹೋಗಿದೆ. 'ಯುಪಿಎ' ಈಗ 'ಇಂಡಿಯಾ' ಆಗಿ ಬದಲಾಗುವ ಮೂಲಕ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಮಹತ್ವದ ಘೋಷಣೆಗೆ ನೆಲೆಯಾಗಿದ್ದು ನಮ್ಮ ಬೆಂಗಳೂರು ಅನ್ನೋದು ಮತ್ತೊಂದು ವಿಶೇಷವಾದರೆ, 'ಇಂಡಿಯಾ' ಎಂಬ ಹೆಸರು ವಿಪಕ್ಷಗಳ ಒಕ್ಕೂಟಕ್ಕೆ ಯಾವ ರೀತಿ ಬಲ ನೀಡಬಹುದು?
ಬಿಜೆಪಿಗೆ ಭಾವನೆಗಳ ಮೂಲಕವೇ ತಿರುಗೇಟು!
ಹೌದು, ಬಿಜೆಪಿ ತನ್ನ ನೆಲೆ ಕಂಡುಕೊಂಡಿದ್ದೇ ರಾಷ್ಟ್ರೀಯತೆ ಆಧಾರದಲ್ಲಿ. ಹಾಗೂ ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನ ರಾಷ್ಟ್ರ ವಿರೋಧಿ ಎಂದು ಬಿಜೆಪಿ ಹಾಗೂ ಎನ್‌ಡಿಎ ಒಕ್ಕೂಟ ಬಣ್ಣಿಸುತ್ತಾ ಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಬಿಜೆಪಿ ತಂತ್ರವನ್ನೇ ವಿರೋಧ ಪಕ್ಷ ನಾಯಕರು ಬಳಸಿ, ತಿರುಗೇಟನ್ನೂ ನೀಡಿದ್ದಾರೆ. ಬಿಜೆಪಿ ಇಷ್ಟುದಿನ ಯಾವ ಆಧಾರದಲ್ಲಿ ಮತದಾರರು ಅದರಲ್ಲೂ ಯುವ ಮತದಾರರನ್ನು ಸೆಳೆಯುತ್ತಿತ್ತೋ, ಆ ತಂತ್ರವನ್ನೇ ಈಗ ಪ್ರಯೋಗಿಸಿದ್ದಾರೆ. ಅಲ್ಲದೆ ವಿರೋಧ ಪಕ್ಷದ ಮೈತ್ರಿಕೂಟದ ವಿರುದ್ಧ ಎನ್‌ಡಿಎ ಅಥವಾ ಬಿಜೆಪಿ ವಾಗ್ದಾಳಿ ನಡೆಸುವುದು ಕೂಡ ಈ ಮೂಲಕ ತಪ್ಪಿ ಹೋಗಲಿದೆ. ಏಕೆಂದರೆ ಬಿಜೆಪಿ ನಾಯಕರು 'ಇಂಡಿಯಾ' ಪದ ಬಳಸಿ ವಾಗ್ದಾಳಿ ನಡೆಸುವುದು ಕಷ್ಟವೇ ಆಗಲಿದೆ!

ಯಾವೆಲ್ಲಾ ಪಕ್ಷಗಳು 'ಇಂಡಿಯಾ' ಒಕ್ಕೂಟಕ್ಕೆ?
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿ(ಯು), ಆರ್‌ಜೆಡಿ, ಎನ್‌ಸಿಪಿ, ರಾಷ್ಟ್ರೀಯ ಲೋಕದಳ, ಜಮ್ಮು ಕಾಶ್ಮೀರ್ ನ್ಯಾಷನಲ್ ಕಾನ್ಫರೆನ್ಸ್, ಅಪ್ನಾ ದಳ್ (ಕಮೆರಾವಾಡಿ), ಎಸ್‌ಪಿ, ಶಿವಸೇನಾ (ಉದ್ಧವ್ ಠಾಕ್ರೆ), ಜೆಎಂಎಂ, ಪಿಡಿಪಿ, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ರೆವೆಲ್ಯುಷನರಿ ಸೋಷಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಎಂಡಿಎಂಕೆ, ವಿಸಿಕೆ (ವಿಡುದಲೈ ಚಿರುತೈಗಳ್ ಕಚ್ಚಿ), ಕೆಎಂಡಿಕೆ (ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ), ಎಂಎಂಕೆ (ಮಣಿತನೆಯ ಮಕ್ಕಳ್ ಕಚ್ಚಿ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸೇರಿದಂತೆ ಕೇರಳ ಕಾಂಗ್ರೆಸ್ (ಮಣಿ) ಹಾಗೂ ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷಗಳು 'ಇಂಡಿಯಾ' ಒಕ್ಕೂಟದ ಭಾಗವಾಗಲಿವೆ.
ಎನ್‌ಡಿಎ ದಾರಿ ಈಗ ಸುಲಭವಲ್ಲ!
ಅತ್ತ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಒಂದಾಗುತ್ತಿವೆ. ಆದ್ರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ಚುನಾವಣೆ ಭೀಕರ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದಂತೆ ಕಾಣುತ್ತಿದೆ. ತನ್ನ ಒಕ್ಕೂಟ ಬಿಟ್ಟಿದ್ದ ಈ ಹಿಂದಿನ ಗೆಳೆಯರನ್ನು ಬಿಜೆಪಿ ಮತ್ತೆ ಸಂಪರ್ಕ ಮಾಡಿದೆ. ಅಲ್ಲದೆ ಮಹತ್ವದ ಸಭೆಗೂ ಚಾಲನೆ ಸಿಕ್ಕಿದೆ. ಈ ಮೂಲಕ 2024ರ ಚುನಾವಣೆ ಹೈವೋಲ್ಟೇಜ್ ಆಗೋದು ಪಕ್ಕಾ. ಇಂದು ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆ ಮುಗಿದ ಬೆನ್ನಲ್ಲೇ ದೆಹಲಿ ಖಾಸಗಿ ಹೋಟೆಲ್‌ನಲ್ಲಿ ಎನ್‌ಡಿಎ ಮೀಟಿಂಗ್ ಶುರುವಾಗಿದೆ.

ಸ್ಥಾನ ಹಂಚಿಕೆ ಗೊಂದಲ ಗ್ಯಾರಂಟಿ!
ಕಳೆದ 2 ಲೋಕಸಭೆ ಚುನಾವಣೆಗಳು ಅಂದರೆ 2014ರ ಲೋಕಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಗಳು ಹೆಚ್ಚು ಚರ್ಚೆಯೇ ಆಗದೆ ಮುಗಿದು ಹೋದವು. ಆಗ ಎನ್‌ಡಿಎ ಹಾಗೂ ಪ್ರಧಾನಿ ಮೋದಿ ಹವಾ ಇತ್ತು. ಆದರೆ ಈ ಬಾರಿ ಗಾಳಿ ಯಾವ ಕಡೆಗೆ ಬೀಸುತ್ತೋ ಗೊತ್ತಿಲ್ಲ ಎಂಬಂಥ ಸ್ಥಿತಿ ಇದೆ. ಹೀಗಾಗಿಯೇ ವಿರೋಧ ಪಕ್ಷಗಳ ನಾಯಕರೆಲ್ಲ ಸೇರಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ತಮ್ಮ ಒಕ್ಕೂಟದ ಹೆಸರನ್ನೇ ಬದಲಾಯಿಸುವ ಮೂಲಕ, 'ಇಂಡಿಯಾ' ಎಂದು ನಾಮಕರಣ ಮಾಡಿದ್ದಾರೆ. ಹೀಗೆ ಎರಡೂ ಬಣದಲ್ಲೂ ಘಟಾನುಘಟಿ ಪಕ್ಷಗಳು ಸೇರಿರುವ ಕಾರಣ ಲೋಕಸಭೆ ಸ್ಥಾನಗಳ ಹಂಚಿಕೆ ಕೂಡ ದೊಡ್ಡ ಗೊಂದಲ ನಿರ್ಮಿಸಲಿದೆ.
ಮುಂದಿನ ಸಭೆ ಮುಂಭೈನಲ್ಲಿ ಫಿಕ್ಸ್
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು ನಡೆದ ಮಹತ್ವದ ಸಭೆಯ ನಂತರ ವಿಪಕ್ಷಗಳಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಪ್ರಮುಖವಾಗಿ 11 ಜನರ ಸಮನ್ವಯ ಸಮಿತಿಯನ್ನೂ ರಚಿಸಲು ತೀರ್ಮಾನ ಮಾಡಲಾಗಿದೆ. ಹಾಗೇ ಮುಂದಿನ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ. ಮುಂಬೈ ಸಭೆಯಲ್ಲಿ ಸಮಿತಿ ಬಗ್ಗೆ ಅಂತಿಮ ಚರ್ಚೆ ನಡೆಸಿ, ಸಮಿತಿಯಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದನ್ನು ಹೇಳಲಾಗುವುದು ಅಂತಾ ಎಐಸಿಸಿ ಅಧ್ಯಕ್ಷರಾದ ಖರ್ಗೆ ತಿಳಿಸಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆ ಮೇಲಿನ ನಿರೀಕ್ಷೆಯನ್ನ ಡಬಲ್ ಮಾಡುತ್ತಿದೆ. ವಿಜಯಲಕ್ಷ್ಮಿ ಯಾರಿಗೆ ಒಲಿಯುವುದು? ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಒಟ್ನಲ್ಲಿ ವಿಪಕ್ಷಗಳು ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡುತ್ತಿದ್ದಂತೆ ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅದ್ರಲ್ಲೂ ಎನ್‌ಡಿಎ ಫುಲ್ ಅಲರ್ಟ್ ಆಗಿ ಅಖಾಡಕ್ಕೆ ಇಳಿದಿದೆ. ಈ ಮೂಲಕ 'ಇಂಡಿಯಾ' (INDIA) VS 'ಎನ್‌ಡಿಎ' (NDA) ಶಿರ್ಷಿಕೆ ಅಡಿಯಲ್ಲೇ 2024ರ ಚುನಾವಣೆ ನಡೆಯಲಿದೆ. ಆದರೆ 'ಇಂಡಿಯಾ' ತನ್ನ ಎಲ್ಲಾ ತಂತ್ರಗಳನ್ನು ಜಾರಿಗೆ ತರಲು ಮತ್ಯಾವ ಅಸ್ತ್ರ ಪ್ರಯೋಗಿಸಲಿದೆ? ಬಿಜೆಪಿ ಈ ಅಸ್ತ್ರಗಳಿಗೆ ಯಾವ ರೀತಿ ಪ್ರತ್ಯಸ್ತ್ರ ಪ್ರಯೋಗಿಸಲಿದೆ? ಅನ್ನೋದನ್ನ ಕಾದು ನೋಡಬೇಕು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications