ಭಾರತದಲ್ಲಿ ಶುರುವಾಯಿತಾ ರಾಷ್ಟ್ರೀಯ ನಾಗರಿಕರ ನೋಂದಣಿ; ಹೀಗೆ ನಡೆಯುತ್ತೆ ಪ್ರಕ್ರಿಯೆ

ನವದೆಹಲಿ, ಅಕ್ಟೋಬರ್ 14: ರಾಷ್ಟ್ರೀಯ ನಾಗರಿಕರ ನೋಂದಣಿಗೆ ಸಂಬಂಧಿಸಿದಂತೆ ಮೊದಲ ಹೆಜ್ಜೆ ಇರಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಎಲ್ಲಾ ಭಾರತೀಯ ನಾಗರಿಕರ ರಾಷ್ಟ್ರೀಯ ಅಂಕಿ-ಅಂಶಗಳನ್ನು ನೋಂದಣಿ ಮಾಡಿಕೊಳ್ಳುವ ಯೋಜನೆಯನ್ನು ಈಗಾಗಲೇ ಶುರುವಿಟ್ಟುಕೊಂಡಿದೆ.

ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ನಾಗರಿಕರ ಜನನ ಮತ್ತು ಮರಣಗಳನ್ನು ನೋಂದಾಯಿಸಲಾಗುತ್ತಿದೆ ಎಂಬ ಅಂಶವು ಕೇಂದ್ರ ಸಚಿವ ಸಂಪುಟದ ಟಿಪ್ಪಣಿ ಮತ್ತು ಸಚಿವಾಲಯ ಮಂಡಿಸಿದ ಮಸೂದೆಯಿಂದ ಬಹಿರಂಗವಾಗಿದೆ. ಪ್ರಸ್ತುತ ಈ ಡೇಟಾಬೇಸ್ ಅನ್ನು ಸ್ಥಳೀಯ ರಿಜಿಸ್ಟ್ರಾರ್‌ಗಳ ಮೂಲಕ ರಾಜ್ಯಗಳು ನಿರ್ವಹಿಸುತ್ತವೆ.

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಕೊನೆಯ ಪ್ರಸ್ತಾಪವು ಸ್ವಯಂಪ್ರೇರಿತವಾಗಿದ್ದರೂ, ಚುನಾವಣಾ ಆಯೋಗವು ಜನಪ್ರತಿನಿಧಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಶಿಫಾರಸು ಮಾಡಿದಾಗ ಸಂಸತ್ತಿನಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಈಗ ಸರ್ಕಾರವು ಈ ಡೇಟಾಬೇಸ್ ಅನ್ನು ಜನಸಂಖ್ಯೆಯ ನೋಂದಣಿ ಮತ್ತು ಮತದಾರರ ಪಟ್ಟಿಗಳು, ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳೊಂದಿಗೆ ಸಂಯೋಜಿಸಲು ಬಯಸಿದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಟಿಪ್ಪಣಿಯನ್ನು ಮುಂದಿಟ್ಟಿದೆ.

How A National Register Of Citizens prequel in All-India Database Plan

ಭಾರತದ ಡೇಟಾಬೇಸ್ ನಿರ್ಹವಣೆ ಹೇಗೆ?

ಭಾರತದ ರಿಜಿಸ್ಟ್ರಾರ್ ಜನರಲ್ ಈ ಡೇಟಾಬೇಸ್ ಅನ್ನು ನಿರ್ವಹಿಸುತ್ತಾರೆ. ಇದನ್ನು ನಿರ್ವಹಿಸಲು ರಾಜ್ಯಗಳಲ್ಲಿನ ಮುಖ್ಯ ರಿಜಿಸ್ಟ್ರಾರ್‌ಗಳೊಂದಿಗೆ ಅವರು ಕೆಲಸ ಮಾಡುತ್ತಾರೆ. ಆಧಾರ್, ಪಡಿತರ ಚೀಟಿಗಳು, ಮತದಾರರ ಪಟ್ಟಿಗಳು, ಪಾಸ್‌ಪೋರ್ಟ್‌ಗಳು ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳ ಉಸ್ತುವಾರಿ ಹೊಂದಿರುವ ವಿವಿಧ ಏಜೆನ್ಸಿಗಳೊಂದಿಗೆ ಇದು ನಿಯತಕಾಲಿಕವಾಗಿ ಅಪ್ ಡೇಟ್ ಆಗುತ್ತಿರುತ್ತದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಸಂಯೋಜಿಸುವ ಮತ್ತು ನವೀಕರಿಸುವ ಮೂಲಕ ಅಕ್ರಮ ವಲಸಿಗರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ವಲಸಿಗರನ್ನು ಹೊರಹಾಕಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರವ್ಯಾಪಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯೊಂದಿಗೆ ಮುಂದುವರಿಯಲು ಉದ್ದೇಶಿಸಿದೆ ಎಂದು ಟಿಪ್ಪಣಿ ಸೂಚಿಸುತ್ತದೆ.

ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದ ಸಿಎಎ-ಎನ್‌ಆರ್‌ಸಿ:

ಕಳೆದ ಮೂರು ವರ್ಷಗಳ ಹಿಂದೆ ಇದೇ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜೊತೆಗೆ ಎನ್‌ಆರ್‌ಸಿ ಅನ್ನು ಘೋಷಿಸಲಾಗಿತ್ತು. ಅಸ್ಸಾಂಗೆ ಮೊದಲು ಘೋಷಿಸಲಾದ ಎನ್‌ಆರ್‌ಸಿ ರಚಿಸುವ ಯೋಜನೆಗೆ ದೇಶಾದ್ಯಂತ ಬೃಹತ್ ಪ್ರತಿಭಟನೆಗಳ ಮೂಲಕ ವಿರೋಧ ವ್ಯಕ್ತವಾಗಿತ್ತು. 2015ಕ್ಕಿಂತ ಮೊದಲು ಭಾರತಕ್ಕೆ ಆಗಮಿಸಿರುವ ನೆರೆಯ ದೇಶಗಳ ಹಾಗೂ ಮುಸ್ಲಿಮರಲ್ಲ ಯಾವುದೇ ನಿರಾಶ್ರಿತರಿಗೆ ಪೌರತ್ವವನ್ನು ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಈ ಎನ್‌ಆರ್‌ಸಿ ಪ್ರಕ್ರಿಯೆಯು ಅಲ್ಪಸಂಖ್ಯಾತ ಸಮುದಾಯದ ಕಿರುಕುಳಕ್ಕೆ ಕಾರಣವಾಗಬಹುದು ಎಂದು ವಿಮರ್ಶಕರು ಟೀಕಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+