Accident: ಭರತ್‌ಪುರದಲ್ಲಿ ಕೆಟ್ಟು ನಿಂತ ಬಸ್‌ಗೆ ಗುದ್ದಿದ ಟ್ರಕ್: 11 ಪ್ರಯಾಣಿಕರು ಸಾವು- 15 ಮಂದಿಗೆ ಗಾಯ!
ಭರತಪುರ ಸೆಪ್ಟೆಂಬರ್ 13: ಜೈಪುರ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಣಿಕರು ತುಂಬಿದ್ದ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಬಸ್ಸಿನಲ್ಲಿದ್ದ 11 ಪ್ರಯಾಣಿಕರು ಸಾವನ್ನಪ್ಪಿದ್ದು, 15 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಭರತ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಕ್ಕೆ ಮುಖ್ಯಮಂತ್ರಿ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಗೆಹ್ಲೋಟ್ ಸಾಮಾಜಿಕ ತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಮೃತರಿಗೆ ಸಂತಾಪ ಸೂಚಿಸಿದ್ದಾರೆ. 'ಧಾರ್ಮಿಕ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿ ಭರತ್‌ಪುರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಕ್ಕೆ ತೀವ್ರ ದುಃಖವಾಗಿದೆ. ಮೃತರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಧೈರ್ಯ ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಅವರು ಬರೆದಿದ್ದಾರೆ.

ಬಸ್‌ಗೆ ವೇಗವಾಗಿ ಸಾಗುತ್ತಿದ್ದ ಟ್ರೇಲರ್‌ಗೆ ಡಿಕ್ಕಿ
ಲಖನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 21ರ ಬಳಿ ಮುಂಜಾನೆ 4:30ಕ್ಕೆ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ ಪ್ರಯಾಣಿಕರು ಗುಜರಾತ್‌ನ ಭಾವನಗರದಿಂದ ಖಾಸಗಿ ಬಸ್‌ನಲ್ಲಿ ಮಥುರಾ ವೃಂದಾವನಕ್ಕೆ ತೆರಳುತ್ತಿದ್ದರು. ಹಂತರ ಸೇತುವೆ ಬಳಿ ಮಾರ್ಗ ಮಧ್ಯೆ ಬಸ್ ಕೆಟ್ಟು ನಿಂತಿತ್ತು. ಬಸ್ ಕೆಟ್ಟು ನಿಂತ ನಂತರ ಕೆಲವು ಪ್ರಯಾಣಿಕರು ಕೆಳಗಿಳಿದು ಬಸ್‌ನ ಕೆಳಗೆ ನಿಂತಿದ್ದರು ಮತ್ತು ಕೆಲವು ಪ್ರಯಾಣಿಕರು ಬಸ್‌ನಲ್ಲಿಯೇ ಕುಳಿತಿದ್ದರು. ಅಷ್ಟರಲ್ಲಿ ಅತಿವೇಗದಲ್ಲಿ ಬಂದ ಟ್ರಕ್ ಬಸ್‌ಗೆ ಡಿಕ್ಕಿ ಹೊಡೆದಿದೆ.
ಪೊಲೀಸರಿಗೆ ಮಾಹಿತಿ
ಅಪಘಾತದ ಶಬ್ದ ಕೇಳಿ ಅಕ್ಕಪಕ್ಕದ ಜನರು ಓಡಿ ಬಂದು ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. ಮಾಹಿತಿ ಪಡೆದ ನಾಡಬೈಲ್ ಠಾಣೆ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಗಾಯಾಳು ಮತ್ತು ಮೃತರನ್ನು ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟ್ರಕ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ
ಟ್ರಕ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕನ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ. ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಪೊಲೀಸರು ಗುರುತು ಪತ್ತೆ
ಪೊಲೀಸ್ ನಿಯಂತ್ರಣ ಕೊಠಡಿ ಪ್ರಕಾರ, ಮೃತರನ್ನು ಅಂತು, ನಂದ್ರಾಮ್, ಲಲ್ಲು, ಭರತ್, ಲಾಲ್ಜಿ, ಅವರ ಪತ್ನಿ ಮಧುಬೆನ್, ಅಂಬಾಬೆನ್, ಕಂಬುಬೆನ್, ರಾಮುಬೆನ್, ಅಂಜುಬೆನ್ ಮತ್ತು ಅರವಿಂದ್ ಎಂಬ ಪ್ರಯಾಣಿಕನ ಪತ್ನಿ ಮಧುಬೆನ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಗುಜರಾತ್‌ನ ಭಾವನಗರ ಜಿಲ್ಲೆಯ ದಿಹೋರ್ ನಿವಾಸಿಗಳು ಎಂದು ಪೊಲೀಸರು ತಿಳಿದು ಬಂದಿದೆ.
ಶವಾಗಾರದಲ್ಲಿ ಮೃತದೇಹಗಳು
ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications