ಹನಿ ಟ್ರ್ಯಾಪ್ : ಭಾರತ ಸೇನೆಯ ಯೋಧನ ಬಂಧನ
ನವದೆಹಲಿ, ಜನವರಿ 13: ಜೈಸಲ್ಮೇರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನಾ ಯೋಧರೊಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನ ಮೂಲದ ಐಎಸ್ಐನವರ ಹನಿ ಟ್ರ್ಯಾಪ್ ಜಾಲಕ್ಕೆ ಈ ಯೋಧ ಸಿಲುಕಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಈ ಸುದ್ದಿಯನ್ನು ಖಚಿತಪಡಿಸಿರುವ ರಕ್ಷಣಾ ಇಲಾಖೆ ವಕ್ತಾರರಾದ ಕರ್ನಲ್ ಸಂಬೀತ್ ಘೋಶ್ ಅವರು, ತನಿಖಾ ಸಂಸ್ಥೆಗೆ ಆರ್ಮಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳೀದ್ದಾರೆ.
ಬಂಧಿತ ಯೋಧನನ್ನು ಸೊಂಬೀರ್ ಎಂದು ಗುರುತಿಸಲಾಗಿದೆ. ಹರ್ಯಾಣದ ಮೂಲದವರು ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಐಎಸ್ಐಗಳು ಫೇಸ್ ಬುಕ್ ನಲ್ಲಿ ಅನಿಕಾ ಛೋಪ್ರಾ ಹೆಸರಿನ ನಕಲಿ ಐಡಿ ಮೂಲಕ ಸೊಂಬೀರ್ ಜತೆ ಚಾಟ್ ಮಾಡುತ್ತಿದ್ದರು. ಯೋಧ ತನ್ನ ವೃತ್ತಿ ಕುರಿತ ಹಲವು ಮಾಹಿತಿಯನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.
ಪಾಕಿಸ್ತಾನದ ಗೂಢಚಾರಿಗಳು ಇನ್ನು ಯಾವ ಯಾವ ಯೋಧರನ್ನು ಈ ರೀತಿ ಜಾಲಕ್ಕೆ ಬೀಳಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬ್ರಹ್ಮೋಸ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರನ್ನು ಬಲೆಗೆ ಬೀಳಿಸಿಕೊಳ್ಳಲು ಪಾಕಿಸ್ತಾನದ ಐಎಸ್ಐ ಇದೇ ರೀತಿ ಮಾರ್ಗ ಅನುಸರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications