• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಭಸುದ್ದಿ: ಗೃಹ, ವಾಹನ, ಚಿಲ್ಲರೆ ಸಾಲಗಳು ಅಗ್ಗ

|

ನವದೆಹಲಿ, ಆಗಸ್ಟ್ 23: ಕುಸಿಯುತ್ತಿರುವ ಆರ್ಥಿಕತೆಗೆ ಮರುಜೀವ ನೀಡಲು ಕೇಂದ್ರ ಸರ್ಕಾರ ನಿರ್ಧಿರಿಸಿದ್ದು, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಇದೇ ಸಂಬಂಧ ಇಂದು ಕೆಲವು ಆಕರ್ಷಕ ಘೋಷಣೆಗಳನ್ನು ಮಾಡಿದರು.

ರೆಪೊ ದರವನ್ನು ನೇರವಾಗಿ ಬಡ್ಡಿ ದರದ ಜೊತೆಗೆ ಸೇರಿಸುವ ನಿರ್ಣಯವನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದು, ಇನ್ನು ಮುಂದೆ ವಾಹನ ಸಾಲ, ಮನೆ ಸಾಲ ಮತ್ತು ಚಿಲ್ಲರೆ ಸಾಲಗಳ ಇಎಂಐ ನಲ್ಲಿ ಇಳಿಕೆ ಆಗಲಿದೆ. ಇಷ್ಟು ದಿನ ರೆಪೊ ದರ ಇಳಿಕೆಯಾದರೆ ಅದರ ಲಾಭ ಬ್ಯಾಂಕ್ ಗ್ರಾಹಕನಿಗೆ ದೊರೆಯುತ್ತಿರಲಿಲ್ಲ.

ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು

ಸಾರ್ವಜನಿಕ ಬ್ಯಾಂಕ್ (ಪಬ್ಲಿಕ್ ಸೆಕ್ಟರ್ ಬ್ಯಾಂಕ್) ಗಳಿಗೆ ಮುಂಗಡವಾಗಿ 70,000 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಇದರಿಂದ ಕಾರ್ಪೊರೇಟ್, ಚಿಲ್ಲರೆ ಸಾಲಗಾರರು, ಸಣ್ಣ ಉದ್ದಿಮೆದಾರರು, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರು ಇತರೆ ಸಾಲಗಾರರಿಗೆ ಇದರಿಂದ ಅನುಕೂಲ ಆಗಲಿದೆ.

   ಎರಡು ದಿನದಲ್ಲಿ ಯಡಿಯೂರಪ್ಪ ಆದೇಶ/ B. S. Yeddyurappa | Oneindia Kannada

   ಗೃಹ ಸಾಲ ನೀಡಿಕೆ ಹೆಚ್ಚಿಸಲು 20,000 ಕೋಟಿ ಹೆಚ್ಚುವರಿ ಹಣವನ್ನು ರಾಷ್ಟ್ರೀಯ ಗೃಹ ಸಾಲ ಮಂಡಳಿಯಿಂದ ನೀಡಲಾಗಿದ್ದು, ಒಟ್ಟು 30,000 ಕೋಟಿ ಹಣವನ್ನು ಗೃಹ ಸಾಲಕ್ಕೆಂದೇ ನಿಗದಿಪಡಿಸಲಾಗಿದೆ. ಸಿದ್ಧ ಆಸ್ತಿ ಖರೀದಿ ಮಾಡಲು ಸಹ ಸಾಲಸೌಲಭ್ಯ ಸುಲಭವಾಗಿ ದೊರೆಯುವಂತೆ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

   ಗ್ರಾಹಕರಿಗೆ ಸೇವೆ ಸುಲಭಗೊಳಿಸಲು ಕ್ರಮ

   ಗ್ರಾಹಕರಿಗೆ ಸೇವೆ ಸುಲಭಗೊಳಿಸಲು ಕ್ರಮ

   ಬ್ಯಾಂಕ್ ಗ್ರಾಹಕರಿಗೆ ಸೇವೆಗಳನ್ನು ಇನ್ನಷ್ಟು ಅನುಕೂಲ ಮಾಡಲು ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದು. ಸಾಲ ಮರುಪಾವತಿ ದಾಖಲೆಗಳನ್ನು ಸಾಲಮುಗಿದ 15 ದಿನಗಳ ಒಳಗಾಗಿ ಹಿಂತಿರುಗಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ.

   ಸರಳ ಹಾಗೂ ವೇಗವಾಗಿ ಸಾಲ ನೀಡಲು ಕ್ರಮ

   ಸರಳ ಹಾಗೂ ವೇಗವಾಗಿ ಸಾಲ ನೀಡಲು ಕ್ರಮ

   ಸರಳವಾಗಿ, ವೇಗವಾಗಿ ಸಾಲ ದೊರಕಿಸಲು ಹಾಗೂ ಸಾಲ ಸೌಲಭ್ಯ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚು ಮಾಡಲು ಆನ್‌ಲೈನ್ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತವಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಹಕರು ಇನ್ನು ಮುಂದೆ ಗ್ರಾಹಕರು ತಮ್ಮ ಸಾಲದ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಗಮನಿಸಬಹುದಾಗಿರುತ್ತದೆ.

   ಭಾರತಕ್ಕೆ ಹೊಸ ವಿತ್ತ ಸಚಿವರ ಅಗತ್ಯವಿದೆ, ಕಾಂಗ್ರೆಸ್ ಕುಟುಕು

   ಒನ್‌ಟೈಮ್ ಸೆಟ್ಲ್‌ಮೆಂಟ್‌ನಲ್ಲಿ ಪಾರದರ್ಶಕತೆ

   ಒನ್‌ಟೈಮ್ ಸೆಟ್ಲ್‌ಮೆಂಟ್‌ನಲ್ಲಿ ಪಾರದರ್ಶಕತೆ

   ಚಿಲ್ಲರೆ ಸಾಲಗಾರರು ಮತ್ತು ಸಣ್ಣ ಮಧ್ಯಮ ಸಾಲಗಾರರ ವಸೂಲಾಗದ ಸಾಲವನ್ನು ಒನ್‌ಟೈಮ್ ಸೆಟಲ್‌ಮೆಂಟ್ (ಒಂದೇ ಬಾರಿ ಕ್ಲಿಯರ್) ನ ಪಾರದರ್ಶಕತೆ ಹೆಚ್ಚು ಮಾಡಲು ನಿರ್ಧರಿಸಲಾಗಿದೆ. ವಿಮೆ ವಿಭಾಗದಲ್ಲಿಯೂ ಪಾರದರ್ಶಕತೆ ಹೆಚ್ಚಿಸಲು ನಿರ್ಣಯಿಸಲಾಗಿದೆ.

   ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಆಧಾರ್ ಬಳಕೆ

   ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಆಧಾರ್ ಬಳಕೆ

   ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಹ ಆಧಾರ್ ಬಳಸಲು ಅನುಮತಿ ನೀಡಲಾಗಿದ್ದು, ಸೇವೆಯನ್ನು ಸರಳಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಧಾರ್ ಮತ್ತು ವಿದೇಶಕ್ಕೆ ಹಣ ವರ್ಗಾವಣೆ ಕಾಯ್ದೆಯಲ್ಲಿ ಅಗತ್ಯ ಮಾರ್ಪಾಡು ಮಾಡಲು ಸಹ ಹಣಕಾಸು ಸಚಿವೆ ಸೂಚನೆ ನೀಡಿದ್ದಾರೆ.

   ಆರ್ಥಿಕತೆಗೆ ಜೀವ ತುಂಬಲು ಹಲವು ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

   ಉದ್ದಿಮೆದಾರರಿಗೆ ಬಾಕಿ ಇರುವ ಜಿಎಸ್‌ಟಿ ಮರುಪಾವತಿ ಶೀಘ್ರ

   ಉದ್ದಿಮೆದಾರರಿಗೆ ಬಾಕಿ ಇರುವ ಜಿಎಸ್‌ಟಿ ಮರುಪಾವತಿ ಶೀಘ್ರ

   ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಬಾಕಿ ಇರುವ ಜಿಎಸ್‌ಟಿ ವಾಪಸಾತಿಯನ್ನು ಮುಂದಿನ 30 ದಿನಗಳ ಒಳಗಾಗಿ ಮಾಡುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಇನ್ನು ಮುಂದೆ ಯಾವುದೇ ಜಿಎಸ್‌ಟಿ ವಾಪಸ್ಸಾತಿಯನ್ನು 60 ದಿನಗಳ ಒಳಗಾಗಿ ಮಾಡಬೇಕೆಂಬ ನಿಯಮ ಜಾರಿಗೊಳಿಸಲಾಗಿದೆ.

   ಯುಕೆ ಸಿನ್ಹಾ ವರದಿ ಜಾರಿಗೆ ಕ್ರಮ

   ಯುಕೆ ಸಿನ್ಹಾ ವರದಿ ಜಾರಿಗೆ ಕ್ರಮ

   ಮಾರಾಟಗಾರರು ಜಿಎಸ್‌ಟಿಎನ್ ವ್ಯವಸ್ಥೆಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಲ್ಲಿ ಬಿಲ್‌ ರಿಯಾಯಿತಿಗೆ ಬಳಸಬಹುದಾಗಿದೆ. ಜೊತೆಗೆ ಯುಕೆ ಸಿನ್ಹಾ ಅವರ ವರದಿ ಜಾರಿ ಮಾಡಲು ಯೋಜನೆ ರೂಪಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು.

   English summary
   Nirmala Sitharaman announce today that repo rate will be linked to intrest rate so house, vehicle, retail loan EMIs will be cheaper.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X