Holiday: ನಾಳೆಯಿಂದ ಮೂರು ದಿನ ರಜೆ
Public Holiday: ಈ ವರ್ಷದ ಆರಂಭದಿಂದಲೂ ಶಾಲಾ-ಕಾಲೇಜುಗಳು, ಬ್ಯಾಂಕ್, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಸಾಲು ರಜೆಗಳೇ ಸಿಕ್ಕಿವೆ. ಇದೀಗ ನಾಳೆಯಿಂದ ಅಂದರೆ ಏಪ್ರಿಲ್ 18 ಸೇರಿ ಸತತ ಮೂರು ದಿನ ಬಹುತೇಕ ಕಚೇರಿಗಳಿಗೆ ರಜೆ ಇರಲಿದೆ. ಹಾಗಾದ್ರೆ ಯಾರಿಗೆಲ್ಲ ರಜೆ, ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳಂತಹ ಸಂದರ್ಭಗಳಲ್ಲಿ ಶಾಲಾ-ಕಾಲೇಜು ಸೇರಿದಂತೆ ಹಲವು ಕಚೇರಿಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಹಾಗೆಯೇ ನಾಳೆಯಿಂದ ಮುಂದಿನ ಮೂರು ದಿನಗಳು ಹಲವೆಡೆ ಕಚೇರಿಗಳಿಗೆ ರಜೆ ಇರಲಿದೆ.

ಹಲವು ರಾಜ್ಯಗಳಲ್ಲಿ ಮೂರು ದಿನಗಳ ದೀರ್ಘ ವಾರಾಂತ್ಯ ರಜೆ ಇರಲಿದೆ. ನಾಳೆ ಅಂದರೆ ಏಪ್ರಿಲ್ 18ರ ಶುಕ್ರವಾರ ಗುಡ್ ಫ್ರೈಡೇ ಹಿನ್ನೆಲೆ ರಜೆ ಇರಲಿದೆ. ಇನ್ನು ಏಪ್ರಿಲ್ 19 ಶನಿವಾರ ಮತ್ತು ಏಪ್ರಿಲ್ 20 ಭಾನುವಾರದಂದು ಉದ್ಯೋಗಿಗಳಿಗೆ ರಜೆ ಸಿಕ್ಕಂತಾಗಲಿದೆ.
ಏಪ್ರಿಲ್ 18, 2025ರಂದು ಗುಡ್ ಫ್ರೈಡೇ ಹಿನ್ನೆಲೆ ದೇಶದ ಹಲವೆಡೆ ಶಾಲಾ-ಕಾಲೇಜುಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಗುಡ್ ಫ್ರೈಡೇಯನ್ನು ಯೇಸುಕ್ರಿಸ್ತ ತ್ಯಾಗದ ನೆನಪಿಗಾಗಿ ಆಚರಣೆ ಮಾಡಲಾಗುತ್ತದೆ. ಇನ್ನು ಏಪ್ರಿಲ್ 19 ಶನಿವಾರ ಮತ್ತು ಏಪ್ರಿಲ್ 20ರ ಭಾನುವಾರ ಆಗಿದ್ದು, ಮೂರು ದಿನ ರಜೆ ಸಿಕ್ಕಂತಾಗಲಿದೆ.
ಏಪ್ರಿಲ್ 18ರಂದು ದೇಶದ ಹಲವು ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ವಿಶೇಷವಾಗಿ ಕೇರಳ, ಗೋವಾ, ತಮಿಳುನಾಡು ಮತ್ತು ಈಶಾನ್ಯ ರಾಜ್ಯಗಳಿಗೆ ಇದು ಅನ್ವಯವಾಗಲಿದೆ. ಆದರೂ, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಶಾಲೆ ಅಥವಾ ಕಾಲೇಜಿನಿಂದ ರಜೆ ಬಗ್ಗೆ ಮಾಹಿತಿಯನ್ನು ಪಡೆಯುವುದು ಒಳಿತು. ಏಕೆಂದರೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ನಿಯಮಗಳಿರುತ್ತವೆ.
ಆರ್‌ಬಿಯ ರಜಾ ಪಟ್ಟಿಯ ಪ್ರಕಾರ, ಏಪ್ರಿಲ್ 18 ಗುಡ್ ಫ್ರೈಡೇ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಕರ್ನಾಟಕ, ರಾಜಸ್ಥಾನ, ಅಸ್ಸಾಂ, ತ್ರಿಪುರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ಪಟ್ಟಿಯಲ್ಲಿ ಇಲ್ಲದ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಏಪ್ರಿಲ್‌ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ: ಆರ್‌ಬಿಐ ಬ್ಯಾಂಕ್ ರಜಾದಿನಗಳ ಪಟ್ಟಿ ಪ್ರಕಾರ, 2025ರ ಏಪ್ರಿಲ್‌ನಲ್ಲಿ ಒಟ್ಟು 15 ಬ್ಯಾಂಕ್ ರಜಾ ದಿನಗಳಿವೆ. ಈ ಪೈಕಿ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರದ ರಜಾದಿ ನಗಳು ಸಹ ಸೇರಿವೆ. ಇದೀಗ ಏಪ್ರಿಲ್ 18, 2025 ರಂದು ಬರಲಿದೆ.
* 20 ಏಪ್ರಿಲ್ 2025, ಭಾನುವಾರ ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ.
* 21 ಏಪ್ರಿಲ್ 2025, ಸೋಮವಾರ ಗರಿಯಾ ಪೂಜೆಯ ಹಿನ್ನೆಲೆ ಮಿಜೋರಾಂನಲ್ಲಿ ಮತ್ತು ವಿಶೇಷವಾಗಿ ಅಗರ್ತಲಾದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
* 26 ಏಪ್ರಿಲ್ 2025 ನಾಲ್ಕನೇ ಶನಿವಾರ ಆದ್ದರಿಂದ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲಿವೆ.
* 27 ಏಪ್ರಿಲ್ ಭಾನುವಾರ ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* 29 ಏಪ್ರಿಲ್ 2025 ಮಂಗಳವಾರ ಭಗವಾನ್ ಪರಶುರಾಮ ಜಯಂತಿಯ ಹಿನ್ನೆಲೆ ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* 30 ಏಪ್ರಿಲ್ 2025 ಬುಧವಾರ ಬಸವ ಜಯಂತಿ ಹಿನ್ನೆಲೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬ್ಯಾಂಕ್‌ಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮುಚ್ಚಲ್ಪಡುತ್ತವೆ.












Click it and Unblock the Notifications