Bank Holiday: ಮಾರ್ಚ್‌ 13, 14, 15 ಮತ್ತು 16ರಂದು ಬ್ಯಾಂಕ್‌ಗಳಿಗೆ ರಜೆ: ಎಲ್ಲೆಲ್ಲಿ ತಿಳಿಯಿರಿ

Bank Holiday: ಈ ವರ್ಷದ ಆರಂಭದಿಂದಲೂ ಇಲ್ಲಿವರೆಗೂ ಬ್ಯಾಂಕ್‌ ಉದ್ಯೋಗಿಗಳಿಗೆ ರಜೆಗಳ ಸರಮಾಲೆಯೇ ಸಿಕ್ಕಿವೆ. ಹಾಗೆಯೇ ಇದೀಗ ನಾಳೆಯಿಂದ ಅಂದರೆ 13, 14, 15, 16ರಂದು ಈ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಯಾಕೆ ಎನ್ನುವ ಸಂಪೂರ್ಭ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇದೇ ತಿಂಗಳು ಬರುವ ಹೋಳಿ ಹಬ್ಬಕ್ಕೆ ದೇಶದ ಹಲವು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ಸೇರಿದಂತೆ ಬ್ಯಾಂಕ್‌ಗಳಿಗೂ ರಜೆ ಘೋಷಣ ಮಾಡಲಾಗಿದೆ. ಆದರೆ, ಆಯಾ ರಾಜ್ಯದ ಸಂಪ್ರದಾಯಗಳು ಮತ್ತು ನಿಯಮಗಳ ಪ್ರಕಾರ ಬ್ಯಾಂಕ್ ರಜೆಯ ದಿನಾಂಕಗಳು ಬದಲಾವಣೆ ಆಗಬಹುದು.

Holiday Declared to Banks on March 13 14 15 and 16 In These states

ಆರ್‌ಬಿಐ ಪ್ರಕಾರ, ಬ್ಯಾಂಕ್ ರಜಾದಿನಗಳನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ನಿರ್ಧಾರ ಮಾಡಲಾಗುತ್ತದೆ. ಹೋಳಿ ಹಬ್ಬ ಮಾರ್ಚ್ 13 ಮತ್ತು 14ರಂದು ಬರುತ್ತದೆ. ಈ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಈ ಎರಡು ದಿನಗಳು ಬ್ಯಾಂಕ್‌ಗಳುಗೆ ರಜೆ ನೀಡಲಾಗುತ್ತದೆ.

ಮಾರ್ಚ್ 13ರಂದು ಹೋಳಿಕಾ ದಹನ ವೇಳೆ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೋಳಿಕಾ ದಹನವನ್ನು ಛೋಟಿ ಹೋಳಿ ಅಥವಾ ಹೋಳಿಕಾ ದೀಪಕ್ ಅಂತಲೂ ಕರೆಯುತ್ತಾರೆ. ಹೋಳಿಕಾ ದಹನ್ ಹಬ್ಬವನ್ನು ಹೋಳಿಗೂ ಒಂದು ದಿನ ಮುಂಚೆಯೇ ಆಚರಣೆ ಮಾಡಲಾಗುತ್ತದೆ.

ಮಾರ್ಚ್ 14ರಂದು ಹೋಳಿ ಹಬ್ಬವನ್ನು ಆಚರಣ ಮಾಡಲಾಗುತ್ತದೆ. ಈ ದಿನದಂದು ಬಣ್ಣದ ಹೋಕುಳಿಯಿಂದ ಆಡಲಾಗುತ್ತದೆ. ಈ ವೇಲೆ ಅನೇಕ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಗುಜರಾತ್, ಒಡಿಶಾ, ಚಂಡೀಗಢ, ಸಿಕ್ಕಿಂ, ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ರಾಜಸ್ಥಾನ, ಜಮ್ಮು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ನವದೆಹಲಿ, ಗೋವಾ, ಬಿಹಾರ, ಛತ್ತೀಸ್‌ಗಢ, ಮೇಘಾಲಯ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂದು ತಿಳಿದುಬಂದಿದೆ.

ಮಾರ್ಚ್ 15ರಂದು ಶನಿವಾರ ಆಗಿದ್ದು, ಇದು ತಿಂಗಳ 3ನೇ ಶನಿವಾರ ಆಗಿದೆ. ಈ ದಿನ ಕೆಲಸದ ದಿನ ಆಗಿರುವುದರಿಂದ, ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ. ಕೆಲವು ರಾಜ್ಯಗಳಲ್ಲಿ ಮಾತ್ರ ಹೋಳಿಕಾ ದಹನ್ ಮತ್ತು ಹೋಳಿ ನಂತರವೂ ಮಾರ್ಚ್ 15ರಂದು ರಜೆ ಇರಲಿದೆ. ಮಾರ್ಚ್ 15ರಂದು ತ್ರಿಪುರ, ಒಡಿಶಾ ಮತ್ತು ಮಣಿಪುರದಲ್ಲಿ ರಜೆ ಇರಲಿದೆ.

ಯಾವೋಸಾಂಗ್ ಹಬ್ಬದ ಹುನ್ನೆಲೆ ಮಾರ್ಚ್ 15, 2025ರಂದು ಮಣಿಪುರದಲ್ಲಿ ರಜಾದಿನ ಆಗಿದೆ. ಯಾವೋಸಾಂಗ್ ಮಣಿಪುರದ ಸಾಂಪ್ರದಾಯಿಕ ಹಬ್ಬ ಆಗಿದ್ದು, ಇದನ್ನು ವಸಂತ ಋತುವಿನ ಆರಂಭವನ್ನು ಗುರುತಿಸಲು ಆಚರಣೆ ಮಾಡಲಾಗುತ್ತದೆ.

ಇನ್ನು ಮಾರ್ಚ್ 13 ಮತ್ತು 14 ರಂದು ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ರಾಜ್ಯಗಳಲ್ಲಿ ಎರಡು ದಿನಗಳ ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ, ಹೋಳಿಕಾ ದಹನ್ ಅಥವಾ ಹೋಳಿಯಂದು ಬ್ಯಾಂಕ್‌ಗಳಿಗೆ ರಜೆ ಇರಲಿದೆ ಮುಚ್ಚಿರುತ್ತವೆ. ರಜಾದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟಿದ್ದರೂ, ಕೆಲವು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಬ್ಯಾಂಕ್‌ಗಳು ರಜೆಯಿದ್ದರೆ, ನೀವು ಆನ್‌ಲೈನ್ ಬ್ಯಾಂಕಿಂಗ್, ಯುಪಿಐ ಪಾವತಿಗಳು, ಎಟಿಎಂಗಳಿಂದ ಹಣವನ್ನು ಹಿಂಪಡೆಯುವುದು ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳ ಮೂಲಕ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳನ್ನು ಮಾಡಿಕೊಳ್ಳಬಹುದಾಗಿದೆ. ಇನ್ನು ಮಾರ್ಚ್‌ 16 ಭಾನುವಾರ ಆದ್ದರಿಂದ ಎಲ್ಲಾ ರಾಜ್ಯಗಳಲ್ಲೂ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+