School-Colleges Holiday: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಜಿಲ್ಲಾಧಿಕಾರಿ ಆದೇಶ
School Holiday: ಜನವರಿ ವರ್ಷ ಶುರುವಾಗುತ್ತಿದ್ದಂತೆ ಎದುರಾದ ಒಂದಷ್ಟು ಹಬ್ಬಗಳು, ಸಂಕ್ರಾಂತಿ ರಜೆಯಲ್ಲೇ ತಿಂಗಳು ಕಳಯಿತು. ಇನ್ನೇನು ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ಎದುರಾಗುತ್ತವೆ. ವಿದ್ಯಾರ್ಥಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದೀಗ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಸೋಮವಾರ ಶಾಲೆಗಳಿಗೆ ರಜೆ ಘೊಷಿಸಲಾಗಿದೆ.
ಮುಂದಿನ ತಿಂಗಳು ಆರಂಭದಿಂದ 10ನೇ ತರಗತಿ ಮತ್ತು ಮಧ್ಯಂತರ ಪರೀಕ್ಷೆಗಳು ಶುರುವಾಗಲಿವೆ. ಈ ಹಿನ್ನೆಲೆಯಲ್ಲಿ ರಜಾದಿನದಂದು ಅವರಿಗೆ ವಿಶೇಷ ತರಗತಿಗಳು ನಡೆಸಲಾಗುತ್ತದೆ. ಬಾಕಿ ಇರುವ ಪಠ್ಯದ ವಿಷಯಗಳು ತಿಳಿಸಲಾಗುತ್ತಿದೆ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿಯೂ ಸಹ, ಭಾನುವಾರ ಮತ್ತು ಶನಿವಾರ ಬಿಟ್ಟು ಉಳಿದ ದಿನಗಳಲ್ಲಿ ಯಾವುದೇ ಪ್ರಮುಖ ಹಬ್ಬಗಳಿಲ್ಲ.

ಈ ಮಧ್ಯೆ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಇಂದು ಸೋಮವಾರ (ಫೆಬ್ರವರಿ 17) ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಈ ಕುರಿತು ಖುದ್ದು ಜಿಲ್ಲೆಯ ಜಿಲ್ಲಾಧಿಕಾರಿ ತೇಜಸ್ ನಂದ ಲಾಲ್ ಪವಾರ್ ಅವರು ರಜೆ ಘೋಷಿಸಿ ಆದೇಶ ಹೊರಿಡಸಿದ್ದಾರೆ. ಸೂರ್ಯಪೇಟೆಯಲ್ಲಿ ದುರಾಜಪಳ್ಳಿ ಪೆದ್ದಗಟ್ಟುವಿನಲ್ಲಿರುವ ಶ್ರೀ ಲಿಂಗಮಂತುಲ ಸ್ವಾಮಿ ಜಾತ್ರೆಯ ನಡೆಯಲಿದೆ.
ಇದು ತೆಲಂಗಾಣದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ. ಈ ಜಾತ್ರೆಯ ಕಾರಣಕ್ಕಾಗಿ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಮಂಗಳವಾರದಿಂದ ಶಾಲಾ ಕಾಲೇಜುಗಳು ಎಂದಿನಂತೆ ಮುಂದುವರಿಯಲಿವೆ ಎಂದು ಅವರು ತಿಳಿಸಿದ್ದಾರೆ.
ತೆಲಂಗಾಣದ ಪೆದ್ದಗಟ್ಟು ಜಾತ್ರೆ ಭಾನುವಾರ ರಾತ್ರಿ ಪ್ರಾರಂಭವಾಗಿದೆ. ರಾಜ್ಯದ ಎರಡನೇ ಅತಿ ದೊಡ್ಡ ಜಾತ್ರೆ ಇದಾಗಿದೆ. ಈ ಪೆದ್ದಗಟ್ಟು ಜಾತ್ರೆ ಒಟ್ಟು 5 ದಿನಗಳ ಕಾಲ ನಡೆಯಲಿದೆ. ಸಮ್ಮಕ್ಕ ಮತ್ತು ಸಾರಲಮ್ಮ ಜಾತ್ರೆಗಳ ನಂತರ ಇದು ಅತಿ ದೊಡ್ಡ ಜಾತ್ರೆಗಳ ಸಾಲಿಗೆ ಸೇರಿದೆ.
ಲಿಂಗಮಂತುಲಸ್ವಾಮಿ ದೇವಸ್ಥಾನವು ಪೆದ್ದಗಟ್ಟು ಗುಡ್ಡದ ಮೇಲೆ, ಸೂರ್ಯಪೇಟೆ ಪಟ್ಟಣದಿಂದ 5 ಕಿಲೋಮೀಟರ್ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65 ಸಮೀಪ ಇದೆ. ಪ್ರತಿ ವರ್ಷದಂತೆ ಈ ವರ್ಷವು ಅದ್ಧೂರಿಯಾಗಿ ಜಾತ್ರ ನೆರವೇರಲಿದೆ. ಈ ಜಾತ್ರೆಯಲ್ಲಿ ರಜೆ ಪಡೆದಿರುವ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
250 ವರ್ಷಗಳಿಂದ ಜಾತ್ರೆ
ಎರಡೂವರೆ ಶತಮಾನದಿಂದಲೂ ಈ ಜಾತ್ರೆ ನಡೆದುಕೊಂಡು ಬರುತ್ತಿದೆ. 250 ವರ್ಷಗಳಿಂದ ಐತಿಹ್ಯ ಈ ಜಾತ್ರೆಗೆ ಇದೆ. ಕೇವಲ ತೆಲಂಗಾಣ ಮಾತ್ರವಲ್ಲದ ಪೆದ್ದಗಟ್ಟು ಜಾತ್ರಾ ಮಹೋತ್ಸವಕ್ಕೆ ನೆರೆಯ ರಾಜ್ಯಗಳಿಂದಲೂ ಭಕ್ತರು ಬರಲಿದ್ದಾರೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು, ವಿಶೇಷವಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಒಡಿಶಾ, ಕರ್ನಾಟಕ, ಛತ್ತೀಸ್‌ಗಢ ಮತ್ತು ತಮಿಳುನಾಡು ರಾಜ್ಯಗಳಿಂದ ಬರಲಿದ್ದಾರೆ.
ಅಧಿಕಾರಿಗಳ ಅಂದಾಜಿನ ಪ್ರಕಾರ, ಈ ವರ್ಷ 20 ಲಕ್ಷ ಭಕ್ತರು ಜಾತ್ರೆಗೆ ಬರುವ ನಿರೀಕ್ಷೆ ಇದೆ. ಜಾತ್ರೆ ಸಲುವಾಗಿ ರೇವಣ್ಣ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರದ ಸಾರಿಗೆ ಇಲಾಕೆ ವತಿಯಿಂದ 200 ವಿಶೇಷ ಬಸ್ಸುಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ.












Click it and Unblock the Notifications