Holiday: ಮೇ 30ರಂದು ಶಾಲಾ-ಕಾಲೇಜು, ಬ್ಯಾಂಕ್‌ಗಳಿಗೆ ರಜೆ ಘೋಷಣೆ
Holiday: 2025ರ ಆರಂಭದಿಂದಲೂ ಇಲ್ಲಿಯವರೆಗೂ ಹಲವೆಡೆ ಶಾಲಾ-ಕಾಲೇಜುಗಳಷ್ಟೇ ಅಲ್ಲದೆ, ಬ್ಯಾಂಕ್‌ಗಳಿಗೂ ಸಹ ಸಾಲು ರಜೆಗಳನ್ನೇ ಘೋಷಿಸಲಾಗಿದೆ. ಹಾಗೆಯೇ ಇದೀಗ ಇದೇ ಮೇ 30, 2025ರಂದು ಕೂಡ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನ ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಕರ್ನಾಟಕದಲ್ಲಿ ಈಗಾಗಲೇ ಶಾಲಾ ಪರೀಕ್ಷೆಗಳಲ್ಲ ಮುಗಿದಿದ್ದು, ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನೂ ಸಹ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಇದಕ್ಕೂ ಮುಂಚೆ ರಣಬಿಸಿಲು ಮುಂದುವರೆದ ಕಾರಣ ಮಕ್ಕಳ ಪೋಷಕರು ಯಾವಾಗ ರಜೆ ಬೇಸಿಹಗೆ ಕೊಡುತ್ತಾರೆಯೋ? ಎಂದು ಕಾದು ಕುಳಿತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಬೇಗ ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆ ಘೋಷಿಸಲಾಯಿತು.

ಬೇಸಿಗೆ ರಜೆಗೂ ಮುಂಚೆಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ದೇಶದ ಹಲವೆಡೆ ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಚಳಿಗಾಲದ ಸಂದರ್ಭದಲ್ಲಿ ತಿಂಗಳುಗಟ್ಟಲೇ ರಜೆ ನೀಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಈ ಬಾರಿ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.
ಅಲ್ಲದೆ, ಆಯಾ ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳ ವೇಳೆ ಶಾಲಾ-ಕಾಲೇಜು ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗೆಯೇ ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಹುತಾತ್ಮ ದಿನದ ಅಂಗವಾಗಿ, ಪಂಜಾಬ್‌ನಲ್ಲಿ ಮೇ 30, 2025ರಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಪಂಜಾಬ್ ಸರ್ಕಾರವು ಈ ದಿನವನ್ನು ವಾರ್ಷಿಕ ರಜಾದಿನಗಳ ಪಟ್ಟಿಯಲ್ಲಿ ಸೇರಿಸಿದೆ.
ಮೇ 30ರಂದು ರಜೆ ಯಾಕೆ?: ಪಂಜಾಬ್ ಸರ್ಕಾರವು ಈ ದಿನದಂದು ಶಾಲೆ-ಕಾಲೇಜು, ಬ್ಯಾಂಕ್‌ಗಳು, ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದೆ. ಪಂಜಾಬ್ ಸರ್ಕಾರ ಬಿಡುಗಡೆ ಮಾಡಿದ ರಜಾ ದಿನಗಳ ಪಟ್ಟಿಯ ಪ್ರಕಾರ, ಮೇ 1ರಂದು ಮತ್ತು ಮೇ 30 ರಂದು ಎರಡು ಸರ್ಕಾರಿ ರಜಾ ದಿನಗಳಿವೆ.
ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಇತಿಹಾಸ: ಗುರು ಅರ್ಜುನ್ ದೇವ್ ಜಿ ಸಿಖ್ಖರ ಐದನೇ ಗುರುಗಳಾಗಿದ್ದಾರೆ. ಅವರು ಏಪ್ರಿಲ್ 15, 1563ರಂದು ಗೋಯಿಂದ್ವಾಲ್ ಸಾಹಿಬ್‌ನಲ್ಲಿ ಜನಿಸಿದರು. ಅವರ ತಂದೆ ರಾಮದಾಸ್ ಜಿ ಮತ್ತು ತಾಯಿ ಬೀಬಿ ಭಾನಿ ಜಿ.ಗುರು ಅರ್ಜುನ್ ದೇವ್ ಜಿ 1606 ಮೇ30 ರಂದು ಲಾಹೋರ್‌ನಲ್ಲಿ ಹುತಾತ್ಮರಾದರು. ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಅವರಿಗೆ ಹಲವು ರೀತಿಯ ಚಿತ್ರಹಿಂಸೆ ನೀಡಲಾಯಿತು. ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಅವರನ್ನು ಪದೇ ಪದೇ ಒತ್ತಾಯ ಮಾಡಲಾಯಿತು. ಆದರೆ, ಗುರು ಸಾಹಿಬ್ ಮಾತ್ರ ತಮ್ಮ ಸಿಖ್ ಧರ್ಮವನ್ನು ತ್ಯಜಿಸಲಿಲ್ಲ.












Click it and Unblock the Notifications