School Holidays: ಈ ಭಾಗದಲ್ಲಿ ಶಾಲೆಗಳಿಗೆ 4 ರಜೆ ದಿನ ರಜೆ ಘೋಷಿಸಿದ ರಾಜ್ಯ ಸರ್ಕಾರ

School Holidays: ಈ ವರ್ಷದ ಆರಂಭದಿಂದಲೂ ಇಲ್ಲಿಯವರೆಗೂ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಹಾಗೆಯೇ ಇದೀಗ ಈ ಭಾಗಗಳಲ್ಲಿ ಶಾಲೆಗಳಿಗೆ ನಾಲ್ಕು ದಿನ ರಜೆ ಘೋಷಣೆ ಮಾಡಿ ಸರ್ಕಾರ ಘೋಷಣೆ ಮಾಡಿದೆ. ಹಾಗಾದ್ರೆ ರಜೆಗಳ ಬಗ್ಗೆ ದಿನಾಂಕ, ಕಾರಣ ಸಹಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹಲವು ರಾಜ್ಯಗಳಲ್ಲಿ 2025ರ ವರ್ಷ ಆರಂಭವಾದಾಗಿನಿಂದಲೂ ಇಲ್ಲಿವರೆಗೂ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಕರ್ನಾಕದಲ್ಲಿ ಸರ್ಕಾರಿ ರಜೆಗಳನ್ನು ಹರತುಪಡಿಸಿ ಪ್ರತಿಭಟನೆಗಳು, ವಿಶೇಷ ಕಾರ್ಯಕ್ರಮಗಳ ಮೇಳೆ ಹಲವು ಜಿಲ್ಲೆಗಳಲ್ಲಿ ಸಾಲು ರಜೆಗಳೇ ಸಿಕ್ಕಿವೆ. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವೇ ಸಿಕ್ಕಾಂತಾಗಿದೆ. ಮತ್ತೊಂದೆಡೆ ಇದೀಗ ಈ ಭಾಗಗಳಲ್ಲಿ ನಾಲ್ಕು ದಿನ ರಜೆ ಘೋಷಣೆ ಮಾಡಲಾಗಿದೆ.

Holiday Declared for All Schools for Four Days in These Part Know details

ಹರಿಯಾಣ ಸರ್ಕಾರವು ರಾಜ್ಯದ ಶಾಲೆಗಳಲ್ಲಿ 4 ದಿನಗಳ ರಜೆಯನ್ನು ಘೋಷಣೆ ಮಾಡಿದೆ.ಈ ರಜೆಗಳು ವಿದ್ಯಾರ್ಥಿ ಮತ್ತು ಶಿಕ್ಷಕರಿಗೂ ಅನ್ವಯ ಆಗಲಿದೆ ಎಂದು ತಿಳಿದುಬಂದಿದೆ. ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ ಏಪ್ರಿಲ್ 18ರಂದು ಗುಡ್‌ ಫ್ರೈಡೇ, ಮೇ 12ರಂದು ಬುದ್ಧ ಪೂರ್ಣಿಮಾ, ಅಕ್ಟೋಬರ್ 10ರಂದು ಕರ್ವಾ ಚೌತ್ ಮತ್ತು ನವೆಂಬರ್ 25ರಂದು ಗುರು ತೇಜ್ ಬಹದ್ದೂರ್ ಹುತಾತ್ಮ ದಿನದಂದು ರಾಜ್ಯದ ಶಾಲೆಗಳಿಗೆ ರಜೆ ಇರಲಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ಶಾಲಾ ಶಿಕ್ಷಣ ನಿರ್ದೇಶನಾಲಯವು ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದೆ. ರಾಜ್ಯದ ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಮತ್ತು ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮತ್ತೊಂದೆಡೆ ಈ ಬಾರಿ ರಣ ಬಿಸಿಲು ಮುಂದುವರೆದ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಸಿಗೆಗೂ ಮುನ್ನವೇ ಪರೀಕ್ಷೆಗಳನ್ನು ಮಗಿಸಿ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಸಾಮಾವ್ಯವಾಗಿ ಹೋಳಿ ಹಬ್ಬದ ದಿನದಂದು ದೇಶದ ಬಹುತೇಕ ರಾಜ್ಯಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೂ ಸಹ ರಜೆ ಘೋಷಣೆ ಮಾಲಾಗುತ್ತದೆ. ಹಾಗೆಯೇ ಈ ವರ್ಷದ ಮಾರ್ಚ್ 14ರಂದು ಹೋಳಿ ಹಬ್ಬ ಇರುವ ಹಿನ್ನೆಲೆ ತೆಲಂಗಾಣದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ ಮಾರ್ಚ್ 14ರ ಶುಕ್ರವಾರ, ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ಬಣ್ಣದ ಹಬ್ಬವನ್ನು ಹಿಂದೂಗಳು ಮತ್ತು ಇತರ ಧರ್ಮದ ಜನರು ಕೂಡ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಆದ್ದರಿಂದ ಸರ್ಕಾರ ಹೋಳಿ ಹಬ್ಬದ ದಿನ ರಜೆ ಘೋಷಳೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಹೋಳಿ ಹಬ್ಬದ ಸಮಯದಲಲ್ಲು ಕೆಲ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ. ಆದರೆ, ತೆಲಂಗಾಣ ಸರ್ಕಾರ ಈ ಹಬ್ಬವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ ಎಂದು ತಿಳಿದುಬಂದಿದೆ. ಹೋಳಿ ಹಬ್ಬದ ಮರುದಿನ ಶನಿವಾರ ಆಗಿರುವ ಹಿನ್ನೆಲೆ ಅರ್ಧ ದಿನವಷ್ಟೇ ತರಗತಿಗಳು ನಡೆಯಲಿವೆ. ಅಥವಾ ಕೆಲವೊಂದು ಶಿಕ್ಷಣ ಸಂಸ್ಥೆಗಳು ಐಚ್ಛಿಕವಾಗಿ ಆ ದಿನವೂ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ.

ನಂತರ ಭಾನುವಾರ ಇರುವ ಕಾರಣ ಎಲ್ಲಾ ಶಾಲಾ-ಕಾಲೇಜುಗಳಿಗೆ ಮೂರು ದಿನ ಸತತ ರಜೆಗಳು ಸಿಕ್ಕಾಂತಾಗಲಿವೆ. ಅಲ್ಲದೆ, ಶಾಲೆಗಳ ಜೊತೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಸಹ ಹೋಳಿ ರಜೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹೀಗೆ ಕೆಲವು ಹಬ್ಬಗಳ ಸಮಯದಲ್ಲಿ ರಜೆ ಘೋಷಣೆ ಮಾಡುವುದು ಆಯಾ ರಾಜ್ಯ ಸರ್ಕಾರದ ಮೇಲೆ ನಿರ್ಧಾರ ಆಗಿರುತ್ತದೆ. ಕರ್ನಾಟಕದಲ್ಲಿ ಬಹುತೇಕ ಜಿಲ್ಲೆಗಳಲ್ಲೂ ಸಹ ಈ ದಿನದಂದು ಹೋಳಿ ಹಬ್ಬ ಆಚರಣೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಇದು ಹಿಂದಿಗಿಂದಲೂ ನಡೆದುಕೊಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+