ಹೋಳಿ 2023: ಗೋರಖನಾಥ ದೇವಸ್ಥಾನದಲ್ಲಿ ಹೋಳಿ ಮಳೆ- ಸಿಎಂ ಯೋಗಿ ಆದಿತ್ಯನಾಥ್ ಭಾಗಿ
'ಈ ಹಬ್ಬದಲ್ಲಿ ಜಾತಿ ಅಥವಾ ವರ್ಗದ ಬೇಧವಿಲ್ಲ' ಎಂದು ಸಿಎಂ ಯೋಗಿ ಆದಿತ್ಯನಾಥ್ ಗೋರಖನಾಥ ದೇವಸ್ಥಾನದಲ್ಲಿ ಹೋಳಿ ಆಚರಿಸಿದರು.
ಗೋರಖನಾಥ ಮಾರ್ಚ್ 8: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದ ಗೋರಖನಾಥ ದೇವಸ್ಥಾನದಲ್ಲಿ ಹೋಳಿ ಹಬ್ಬವನ್ನು ಆಚರಿಸಿದರು. ಹೋಳಿ ಹಬ್ಬದಂದು ನಾನು ಎಲ್ಲರಿಗೂ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನಿಮ್ಮ ಮನಸ್ಸಿನಲ್ಲಿ ಯಾರ ಬಗ್ಗೆಯೂ ಯಾವುದೇ ರೀತಿಯ ದ್ವೇಷ, ಅಸೂಯೆ ಇಟ್ಟುಕೊಳ್ಳಬೇಡಿ ಎಂದು ಹೋಳಿ ಯಾವಾಗಲೂ ಪ್ರೇರೇಪಿಸುತ್ತದೆ. ಈ ಹಬ್ಬದಲ್ಲಿ ಜಾತಿ ಬೇಧ, ವರ್ಗ ಭೇದವಿಲ್ಲ. ಚಿಕ್ಕವನ್ನು ದೊಡ್ಡವನು ಎಲ್ಲ ವರ್ಗದ ಜನರು ಸೇರಿರುತ್ತಾರೆ.

ಅವರೆಲ್ಲರೂ ಒಂದೇ ಎನ್ನುವ ಭಾವನೆಯಲ್ಲು ಇಟ್ಟುಕೊಂಡು ಹಬ್ಬ ಆಚರಿಸುತ್ತಾರೆ. ಪರಸ್ಪರ ಬಣ್ಣವನ್ನು ಹಚ್ಚುತ್ತಾರೆ. ಪರಿಚಯವಿಲ್ಲದೇ ಇದ್ದರೂ ಬಣ್ಣವನ್ನು ಹಚ್ಚಿ ಸ್ನೇಹದಿಂದ ವರ್ತಿಸುತ್ತಾರೆ ಎಂದರು.
ಇದಾದ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಗೋರಖ್ ಪುರದ ನರಸಿಂಹ ಭಗವಾನ್ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು ಉತ್ಸವಗಳು ಹೇಗೆ ನಡೆಯಬೇಕು ಎಂಬುದಕ್ಕೆ ಈ ಮೆರವಣಿಗೆಗಳು ಉದಾಹರಣೆಯಾಗಿವೆ. ಹಬ್ಬಗಳು ಭಾರತದ ಪ್ರಾಚೀನತೆಯನ್ನು ಪ್ರತಿಬಿಂಬಿಸುತ್ತವೆ. ಇದು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಸಂಕೇತಿಸುತ್ತದೆ ಎಂದರು.
#WATCH | Uttar Pradesh CM Yogi Adityanath participates in #Holi celebrations at Gorakhnath Temple in Gorakhpur. pic.twitter.com/KppGtG2dwn
— ANI UP/Uttarakhand (@ANINewsUP) March 8, 2023
ಇದಕ್ಕೂ ಮುನ್ನ ಸೋಮವಾರ ಶ್ರೀ ಹೋಳಿಕಾ ದಹನ ಉತ್ಸವ ಸಮಿತಿ ವತಿಯಿಂದ ಹೋಳಿಕಾ ದಹನದ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು ಹೋಳಿ ಹಾಡುಗಳ ಮೇಲೆ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಕಂಡುಬಂತು. ಮೆರವಣಿಗೆ ಆರಂಭಗೊಂಡಲ್ಲೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಯಿತು.
#WATCH उत्तर प्रदेश: मुख्यमंत्री योगी आदित्यनाथ ने गोरखपुर में होली का जश्न मनाया। https://t.co/MHq8fPw2Hg pic.twitter.com/MpFtE0u7iE
— ANI_HindiNews (@AHindinews) March 8, 2023
ಗೋರಕ್ಷಪೀಠಾಧೀಶ್ವರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರತಿ ನೆರವೇರಿಸಿ ಹೂವಿನ ಹೋಳಿ ಹರಿಸುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿದರು. ಮೆರವಣಿಗೆಯು ಪಾಂಡೆಹಟಾದಿಂದ ಪ್ರಾರಂಭವಾಗಿ ಘಂಟಾಘರ್, ಮದರಸಾ ಚೌಕ್, ಲಾಲ್ಡಿಗ್ಗಿ, ಘಾಸಿಕತ್ರ, ಜಾಫ್ರಾ ಬಜಾರ್, ಬೆಣಿಗಂಜ್, ಚರಣ್‌ಲಾಲ್ ಚೌಕ್, ಆರ್ಯನಗರ, ಬಕ್ಷೀಪುರ, ನಖಾಸ್ ಚೌಕ್, ಘಂಟಾಘರ್ ಮೂಲಕ ಸಾಗಿ ಮತ್ತೆ ಪಾಂಡೇಹಟ ಚೌಕದಲ್ಲಿ ಸಮಾರೋಪಗೊಂಡಿತು.
ಮೆರವಣಿಗೆಯಲ್ಲಿ ಕುದುರೆಯು ಮುಂಚೂಣಿಯಲ್ಲಿತ್ತು. ನಂತರ ಬ್ಯಾಂಡ್-ಬಾಜಾ ಕೂಡ ಇತ್ತು. ಈ ವೇಳೆ ಯುವಕರು ಹೋಳಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಸಾಗುವ ಸ್ಥಳದಿಂದ ಜನರು ಬಣ್ಣ ಮತ್ತು ಗುಲಾಲ್‌ಗಳನ್ನು ಹಾಕಿ ಎಲ್ಲರನ್ನು ಸ್ವಾಗತಿಸಿದರು. ಇದರಿಂದ ಇಡೀ ವಾತಾವರಣವೇ ಹೋಳಿ ಮಯವಾಗಿತ್ತು.












Click it and Unblock the Notifications