Hit and Run: ಮೀರತ್‌ನಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಓರ್ವ ಸಾವು, ಆಘಾತಕಾರಿ ವಿಡಿಯೋ ವೈರಲ್
ಮೀರತ್ ಅಕ್ಟೋಬರ್ 26: ಉತ್ತರಪ್ರದೇಶದ ಮೀರತ್‌ನಲ್ಲಿ ಹಿಟ್ ಅಂಡ್ ರನ್ ಪ್ರಕರಣದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ದಸರಾ ಆಯುಧ ಪೂಜೆಯಂದು ನಡೆದಿದ್ದು (ಅಕ್ಟೋಬರ್ 23) ಆ ಪ್ರದೇಶದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಅಬು ಲೇನ್ ಮಾರುಕಟ್ಟೆಯಲ್ಲಿ ಬಡ ಬಲೂನ್ ಮಾರಾಟಗಾರಿಗೆ ವೇಗವಾಗಿ ಬಂದ ಮಹೀಂದ್ರ ಸ್ಕಾರ್ಪಿಯೋ ಚಾಲಕ ಡಿಕ್ಕಿ ಹೊಡೆದು ಅದೇ ವೇಗದಲ್ಲಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಡಿಕ್ಕಿ ಹೊಡೆದ ರಬಸಕ್ಕೆ ಬಲೂನ್ ಮಾರಾಟಗಾರ ಭಾನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೋಡಗರನ್ನು ಬೆಚ್ಚಿ ಬೀಳಿಸಿದೆ. ಖಾಲಿ ರಸ್ತೆಯಲ್ಲಿ ತಡರಾತ್ರಿ ವೇಗವಾಗಿ ಬಂದ ಮಹೀಂದ್ರ ಸ್ಕಾರ್ಪಿಯೋ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ಎರಡು ಬಾರಿ ಪಲ್ಟಿಯಾಗಿದೆ.

ಅಪಘಾತದ ಬಳಿಕ ವಾಹನದಲ್ಲಿದ್ದವರು ಹೊರಬಂದಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಚಾಲಕನನನ್ನು ಥಳಿಸಿದ್ದಾರೆ. ನಂತರ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಆರೋಪಿಯು ಮದ್ಯದ ಅಮಲಿನಲ್ಲಿ ಕಾರನ್ನು ಅತಿವೇಗವಾಗಿ ಚಲಾಯಿಸುತ್ತಿದ್ದನು ಎಂಬ ವರದಿಗಳಿವೆ. ಆರೋಪಿಯನ್ನು ಅನುಭವ್ ಗೋಯಲ್ ಎಂದು ಗುರುತಿಸಲಾಗಿದ್ದು ಈತ ಎಸ್‌ಯುವಿಯನ್ನು ಚಲಾಯಿಸುತ್ತಿದ್ದನು ಎನ್ನಲಾಗಿದೆ. ವಾಹನದ ನಿಯಂತ್ರಣ ಕಳೆದುಕೊಂಡ ನಂತರ ರಸ್ತೆಯಲ್ಲಿ ನಾಲ್ಕೈದು ಜನರಿಗೆ ಡಿಕ್ಕಿ ಹೊಡೆದಿದೆ ಎಂಬ ಆರೋಪವಿದೆ. ಬಳಿಕ ಅದು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
नशे में निरीह की जान लेने वाले रईसज़ादों के जीने का हक़ भी छिनना चाहिए!
— gyanendra shukla (@gyanu999) October 25, 2023
नशे में धुत्त होकर तेज रफ़्तार कार से ग़ुब्बारा बेचने वाले गरीब को रौंद दिया गया, सोमवार को मेरठ के आबूलेन में हुई घटना का सीसीटीवी फ़ुटेज आज वायरल हुआ. पुलिस ने कार सवार अनुभव गोयल को पकड़ कलियाँ जबकि उसके… pic.twitter.com/6ozWb3dIOO
ಎಸ್‌ಯುವಿಯನ್ನು ಹಿಂಬಾಲಿಸುತ್ತಿದ್ದ ಭಾರೀ ಜನಸಮೂಹ
ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ತಡೆಯಲು ಹಲವಾರು ಹಿಂಬದಿ ಸವಾರರು ಪ್ರಯತ್ನ ಮಾಡಿದ್ದಾರೆ. ಆದರೆ ಚಾಲಕ ವಾಹನವನ್ನು ನಿಲ್ಲಿಸಿಲ್ಲ. ಎಸ್‌ಯುವಿಯನ್ನು ಹಿಂಬಾಲಿಸುತ್ತಿದ್ದ ಅಪಾರ ಜನಸಮೂಹವು ಘಟನಾ ಸ್ಥಳಕ್ಕೆ ತಲುಪಿದಾಗ ಚಾಲಕ ಅನುಭವ್ ಗೋಯಲ್ ಮಾತ್ರ ಸ್ಥಳದಲ್ಲಿದ್ದನು. ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಳಿಕ ಕಾರಿನಿಂದ ಜಿಗಿದು ಕಾರು ಚಾಲಕನ ಸ್ನೇಹಿತರು ಪರಾರಿಯಾಗಿದ್ದಾರೆ. ಅಪಘಾತದ ನಂತರ ಹಾನಿಗೊಳಗಾದ ಕಾರಿನಿಂದ ಅವರು ತಪ್ಪಿಸಿಕೊಳ್ಳುವುದನ್ನು ದೃಶ್ಯದಲ್ಲಿ ಕಾಣಬಹುದು. ಘಟನೆ ಬಳಿಕ ಹಿಂಬದಿ ಸವಾರರ ಗುಂಪು ಚಾಲಕನನ್ನು ಹಿಡಿದು ಥಳಿಸಿದ್ದಾರೆ.
ಅಪಾರ ಪ್ರಮಾಣದ ಮದ್ಯ ಪತ್ತೆ
ಅಪಘಾತಕ್ಕೊಳಗಾದ ಕಾರಿನಿಂದ ಅಪಾರ ಪ್ರಮಾಣದ ಮದ್ಯ ಪತ್ತೆಯಾಗಿದ್ದು, ಚಾಲಕ ಕೂಡ ಮದ್ಯದ ಅಮಲಿನಲ್ಲಿದ್ದ ಎಂದು ವರದಿಯಾಗಿದೆ. ಅಪಘಾತ ನಡೆದಾಗ ಆತನ ಎಲ್ಲಾ ಸ್ನೇಹಿತರು ಕೂಡ ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ. ಅಪಘಾತದ ನಂತರ ಅವರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದು, ಅನುಭವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಯಾರೋ ಮಾಡಿದ ತಪ್ಪಿಗೆ ಬಡ ಬಲೂನ್ ಮಾರಾಟಗಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವರ ಮೃತ ದೇಹವನ್ನು ಅವರ ಸೋದರ ಮಾವ ಗುರುತಿಸಿದ್ದಾರೆ. ಮರೋಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾತರಿಸಲಾಗಿದೆ.
ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಪೊಲೀಸರ ವರದಿಯಲ್ಲಿ ಆರೋಪಿಗಳ ಹೆಸರಿಸಿಲ್ಲ. ಹೀಗಾಗಿ ಜನರು ಪೊಲೀಸರನ್ನು ದೂಷಿಸುತ್ತಿದ್ದಾರೆ. ಪೊಲೀಸರು ಶ್ರೀಮಂತರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಬಡವರಿಗೆ ನ್ಯಾಯವನ್ನು ನಿರಾಕರಿಸುತ್ತಿದ್ದಾರೆ ಎಂಬ ಜನ ಆಕ್ರೋಶಗೊಂಡಿದ್ದಾರೆ.












Click it and Unblock the Notifications