Get Updates
Get notified of breaking news, exclusive insights, and must-see stories!

Hit and Run Case: ಸ್ಕೂಟರ್‌ಗೆ ಡಿಕ್ಕಿ ಹೊಡೆದು ಬಾಲಕನನ್ನು ಎಳೆದೊಯ್ದ ಟ್ರಕ್- ವಿಡಿಯೋ ವೈರಲ್!

ಟ್ರಕ್‌ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಎಳೆದೊಯ್ದ ಘಟನೆ ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಅಜ್ಜ ಮೊಮ್ಮಗ ಸಾವನ್ನಪ್ಪಿದ್ದಾರೆ.

ಲಕ್ನೋ ಫೆಬ್ರವರಿ 28: ದೆಹಲಿಯ ಹಿಟ್‌ ಆಂಡ್ ರನ್ ಪ್ರಕರಣ ನಡೆದು ಎರಡು ತಿಂಗಳಾಗಿದೆ. ಅದಾದ ಬಳಿಕ ಬೆಂಗಳೂರಿನಲ್ಲೂ ಹಿಟ್‌ ಆಂಡ್ ರನ್ ಪ್ರಕರಣದ ವಿಡಿಯೋ ಭಾರೀ ವೈರಲ್ ಆಗಿತ್ತು. ಸದ್ಯ ಅಂತದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿಜಕ್ಕೂ ಭಯಹುಟ್ಟಿಸುವಂತಿದೆ. ಟ್ರಕ್‌ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಎಳೆದೊಯ್ದ ಘಟನೆ ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ಸ್ಕೂಟಿಗೆ ಅತಿವೇಗದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಮತ್ತು ಅವರ ಆರು ವರ್ಷದ ಮೊಮ್ಮಗ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸದರ್ ಕೊತ್ವಾಲಿ ಪ್ರದೇಶದಲ್ಲಿ ಕಾನ್ಪುರ-ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಮೊಮ್ಮಗನನ್ನು ಸ್ಕೂಟರ್ ಜೊತೆಗೆ ಟ್ರಕ್ ಎಳೆದೊಯ್ದಿದೆ. ಟ್ರಕ್ ಡಿಕ್ಕಿ ಹೊಡೆದ ರಬಸಕ್ಕೆ ಅಜ್ಜ ರಸ್ತೆ ಬದಿ ಬಿದ್ದಿದ್ದಾರೆ. ಆದರೆ ಮೊಮ್ಮಗ ಮಾತ್ರ ಸ್ಕೂಟರ್ ಜೊತೆಗೆ ಇದ್ದ ಎನ್ನಲಾಗಿದೆ. ಆತನನ್ನು ಸ್ಕೂಟರ್‌ ಜೊತೆಗೆ ಎಳೆದೊಯ್ಯಲಾಗಿದೆ ಎಂದು ಹೇಳಲಾಗುತ್ತಿದೆ.

Hit and Run Case: grandson killed as truck rams scooty, drags boy for several kms

ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರಕ್ ಸ್ಕೂಟಿಯನ್ನು ಎಳೆದುಕೊಂಡು ಹೋಗುತ್ತಿರುವಾಗ ಬಾಲಕ ಅದರ ಕೆಳಗೆ ಸಿಲುಕಿಕೊಂಡಿದ್ದಾನೆ. ಅನೇಕ ದಾರಿಹೋಕರು ಮತ್ತು ಪ್ರಯಾಣಿಕರು ಟ್ರಕ್ ಅನ್ನು ನಿಲ್ಲಿಸುವಂತೆ ಚಾಲಕನಿಗೆ ಕೂಗಿದರು. ಆದರೆ ಚಾಲಕ ಯಾಔಉದಕ್ಕೂ ಕಿವಿ ಕೊಡದೆ ವಾಹನ ಚಲಾಯಿಸಿದ್ದಾನೆ.

ಆರೋಪಿ ಚಾಲಕ ಹಲವಾರು ಕಿಲೋಮೀಟರ್‌ಗಳ ನಂತರ ಬ್ರೇಕ್ ಹಾಕಿದನು, ಆದರೆ ಅಲ್ಲಿಯವರೆಗೆ ಮಗು ಸಾವನ್ನಪ್ಪಿತ್ತು. ಪೊಲೀಸರು ಟ್ರಕ್ ಚಾಲಕ ಮತ್ತು ಸಹಾಯಕನನ್ನು ಬಂಧಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರನ್ನು ನಿವೃತ್ತ ಶಿಕ್ಷಕ ಉದಿತ್ ನಾರಾಯಣ ಚಾನ್ಸೋರಿಯಾ ಮತ್ತು ಅವರ ಆರು ವರ್ಷದ ಮೊಮ್ಮಗ ಸಾತ್ವಿಕ್ ಎಂದು ಗುರುತಿಸಲಾಗಿದೆ. ಟ್ರಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+