ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ ಮಡಿದವರ ಹೆಸರು

Posted By:
Subscribe to Oneindia Kannada

ಕುನೇರು (ಆಂಧ್ರಪ್ರದೇಶ), ಜನವರಿ 22 : ಆಂಧ್ರದ ಕುನೇರು ಬಳಿ ಜಗದಲಪುರ-ಭುವನೇಶ್ವರ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಶನಿವಾರ ರಾತ್ರಿ 11 ಗಂಟೆಗೆ ಅಪಘಾತಕ್ಕೀಡಾಗಿದ್ದು, ಕನಿಷ್ಠ 23 ಜನರು ಸಾವಿಗೀಡಾಗಿದ್ದಾರೆ.

Hirakhand express derailment: Several dead

18448 ಜಗದಲಪುರ-ಭುವನೇಶ್ವರ ಎಕ್ಸ್ ಪ್ರೆಸ್ ರೈಲು ಕುನೇರು ರೈಲು ನಿಲ್ದಾಣದ ಬಳಿ ಹಳಿ ತಪ್ಪಿದೆ. ಇಂಜಿನ್, ಲಗ್ಗೇಜ್ ವ್ಯಾನ್, ಎರಡು ಜನರಲ್ ಬೋಗಿ, ಎರಡು ಸ್ಲೀಪರ್ ಬೋಗಿ, ಒಂದು ಎಸಿ ತ್ರಿ ಟಯರ್ ಕೋಚ್ ಮತ್ತು ಎರಡು ಎಸಿ ಟು ಟಯರ್ ಕೋಚ್ ಗಳು ಹಳಿ ತಪ್ಪಿವೆ.

ಆರಂಭದಲ್ಲಿ ಹನ್ನೆರಡು ಪ್ರಯಾಣಿಕರು ಮೃತರಾಗಿದ್ದಾರೆ ಎಂಬ ಮಾಹಿತಿ ಪೂರ್ವ ಕರಾವಳಿ ರೈಲ್ವೆ ಇಲಾಖೆಯ ವಕ್ತಾರರು ಹೇಳಿಕೆ ನೀಡಿದ್ದರು. ಆದರೆ, ಮೃತರ ಸಂಖ್ಯೆ ಹೆಚ್ಚಾಗುತ್ತಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಇನ್ನೂ ಹಲವರು ರೈಲಿನಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಅಪಘಾತದಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸ್ವತಃ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

Hirakhand express derailment: Several dead

ಮೃತರ ಕುಟುಂಬಕ್ಕೆ 2 ಲಕ್ಷ ರು. : ಈ ಅಪಘಾತದಲ್ಲಿ ಮತೃರಾದವರ ಕುಟುಂಬದವರಿಗೆ 2 ಲಕ್ಷ ರು. ಪರಿಹಾರ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ಹಾಗೆಯೆ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರು. ಮತ್ತು ಸಣ್ಣಪುಟ್ಟ ಗಾಯಾಳಗಳಿಗೆ 25 ಸಾವಿರ ರು. ಪರಿಹಾರ ಘೋಷಿಸಲಾಗಿದೆ.

ಉಗ್ರರ ಕೈವಾಡದ ಶಂಕೆ : ಈ ದುರಂತದ ಹಿಂದೆ ಯಾವುದಾದರೂ ಉಗ್ರ ಸಂಘಟನೆಯ ಕೈವಾಡ ಇರಬಹುದಾ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ರೈಲ್ವೆ ಇಲಾಖೆಯ ರಕ್ಷಣಾ ಘಟಕ ಈ ತನಿಖೆಯ ನೇತೃತ್ವ ವಹಿಸಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jagdalpur-Bhubneswar Hirakhand express derails near Kuneru on Saturday night around 11 pm. More than 23 have been killed and more than 40 passengers injured.
Please Wait while comments are loading...