ಒರಿಸ್ಸಾದಲ್ಲಿ ಒಟ್ಟಾಗಿ ಬೀದಿ ಗುಡಿಸಿದ ಹಿಂದು-ಮುಸ್ಲಿಮರು
ಬರಿಪಡ, ಜುಲೈ 24: ಒಡಿಶಾದ ಪುರಿಯಲ್ಲಿ ನಡೆದ ಜಗನ್ನಾಥ ಯಾತ್ರೆಯ ನಂತರ ಇಲ್ಲಿನ ಹಿಂದು ಮತ್ತು ಮುಸ್ಲಿಮರು ಸೇರಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ಅಪರೂಪದ ಕ್ಷಣ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಯಿತು.
ಜಗನ್ನಾಥ ರಥ ಹಿಂತಿರುಗಿ ಬರುವ ಯಾತ್ರೆಯಾದ 'ಬಹುದಾ ಯಾತ್ರೆ'ಯ ನಂತರ ಇಲ್ಲಿನ ಬರಿಪಡ ಎಂಬ ಊರಿನ ಹಿಂದು ಮತ್ತು ಮುಸ್ಲಿಮರು ಸೇರಿ ಬಿದ್ದಿದ್ದ ಕಸವನ್ನೆಲ್ಲ ತೆಗೆದು, ರಸ್ತೆಯನ್ನು ಶುಚಿಗೊಳಿಸಿದರು.
ಸ್ವಚ್ಛ ಭಾರತ ನಮ್ಮೆಲ್ಲರ ಕರ್ತವ್ಯ, ಇದಕ್ಕೂ ಮತಕ್ಕೂ ಸಂಬಂಧಿವಿಲ್ಲ. ನಾವೆಲ್ಲ ಸ್ವ ಇಚ್ಛೆಯಿಂದ ಬಂದು ಈ ಕೆಲಸ ಮಾಡುತ್ತಿದ್ದೇವೆ. ಇಂಥ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ ಎಂದು ಕಾರ್ಯಕರ್ತರೊಬ್ಬರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಪ್ರತಿವರ್ಷ ಒಂಬತ್ತು ದಿನಗಳ ಕಾಲ ನಡೆಯುವ ಪುರಿಯ ಜಗನ್ನಾಥ ಯಾತ್ರೆ ಜು.23 ರಂದು ಮುಕ್ಯಾತವಾಗಿದ್ದು, ದೇಶ-ವಿದೇಶಗಳಿಂದ ಈ ಅದ್ಧೂರಿ ರಥಯಾತ್ರೆಯನ್ನು ಲಕ್ಷಾಂತರ ಜನ ಕಣ್ತುಂಬಿಸಿಕೊಂಡಿದ್ದರು.
ಪ್ರತಿ ವರ್ಷ ಆಷಾಡ ಮಾಸದ ಶುಕ್ಲಪಕ್ಷದ ಬಿದಿಗೆಯಂದು ಆರಂಭವಾಗುವ ಈ ಯಾತ್ರೆ, ಈ ವರ್ಷ ಜುಲೈ 14, ಶುಕ್ರವಾರದಿಂದ ಆರಂಭವಾಗಿತ್ತು.












Click it and Unblock the Notifications