ಹಿಂದಿಗೆ ತಮಿಳುನಾಡು ನೆಲದಲ್ಲಿ ಜಾಗ ಇಲ್ಲ, ಸಿಎಂ ಸ್ಟಾಲಿನ್ ಹೇಳಿದ್ದೇನು? Hindi Language Policy
ಹಿಂದಿ ಭಾಷೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ, ಅದರಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಾದದ ನಡುವೆ ದೊಡ್ಡ ಕಾಳಗ ಶುರುವಾಗುತ್ತಿದೆ. ಹೀಗಿದ್ದಾಗ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವ ಪ್ರಯತ್ನ ಆಗುತ್ತಿದೆ ಎಂಬ ಆರೋಪ ಕೂಡ ಇದೆ. ಹೀಗಾಗಿಯೇ ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಭಾಷೆ ಹೇರಿಕೆ ಮಾಡುವ ವಿಚಾರದಲ್ಲಿ, ತೀವ್ರ ವಿರೋಧವನ್ನು ಪದೇ ಪದೇ ವ್ಯಕ್ತಪಡಿಸುತ್ತಾ ಬಂದಿವೆ. ತಮಿಳುನಾಡು, ಕರ್ನಾಟಕ ಮತ್ತು ಕೇರಳ ಕೂಡ ಹಿಂದಿ ಹೇರಿಕೆ ವಿಚಾರದಲ್ಲಿ ತೀವ್ರವಾದ ವಿರೋಧ ಹೊರ ಹಾಕುತ್ತಾ ಬರುತ್ತಿವೆ. ಹೀಗೆ ಇದ್ದಾಗ ಹಿಂದಿಗೆ ತಮಿಳುನಾಡು ನೆಲದಲ್ಲಿ ಜಾಗ ಇಲ್ಲ, ಎಂದು ಮತ್ತೊಮ್ಮೆ ಹೇಳಿದ್ದಾರೆ ಅಲ್ಲಿನ ಸಿಎಂ ಸ್ಟಾಲಿನ್ ಅವರು.
ಹಿಂದಿ ದೇಶದಲ್ಲಿ ಅತಿಹೆಚ್ಚು ಜನರು ಮಾತನಾಡುವ ಭಾಷೆ, ಇದೇ ಕಾರಣ ಮುಂದೆ ಇಟ್ಟುಕೊಂಡು ಭಾರತದ ಪ್ರತಿಯೊಂದು ರಾಜ್ಯದ ಮೇಲೂ ಹಿಂದಿ ಹೇರಿಕೆ ಮಾಡುವುದು ಸರಿಯಲ್ಲ ಎಂಬ ವಾದ ಹಾಗೂ ಆಗ್ರಹ ಮೊದಲಿನಿಂದ ಕೂಡ ಇದೆ. ಹೀಗಿದ್ದರೂ ಪದೇ ಪದೇ ಹಿಂದಿ ಹೇರಿಕೆ ವಿಚಾರಕ್ಕೆ ತಿಕ್ಕಾಟ ನಡೆಯುತ್ತಲೇ ಬಂದಿದೆ. ಮತ್ತೊಂದು ಕಡೆ ದೇಶದಲ್ಲಿ ಮಾತನಾಡುವ ಎಲ್ಲಾ ಭಾಷೆಗೂ ಸಮಾನ ಅವಕಾಶ ಮತ್ತು ಸ್ಥಾನಮಾನ ಸಿಗಬೇಕು ಎಂಬ ಆಗ್ರಹ ಕೂಡ ಇದೆ. ಇಷ್ಟೆಲ್ಲದರ ಮಧ್ಯೆ ತಮಿಳುನಾಡು ಸಿಎಂ ನೀಡಿರುವ ಹೇಳಿಕೆ ದೇಶಾದ್ಯಂತ ಸದ್ದು ಮಾಡುತ್ತಿದೆ.

ಹಿಂದಿ ವಿರುದ್ಧ ಸ್ಟಾಲಿನ್ ವಿಶೇಷ ಪೋಸ್ಟ್
ತಮಿಳುನಾಡು ಸಿಎಂ ಸ್ಟಾಲಿನ್ ಅವರು ಈ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಭಾಷಾ ಹುತಾತ್ಮರ ದಿನ: ಆಗ ಮತ್ತು ಈಗ, ಹಿಂದಿಗೆ ಇಲ್ಲಿ ಸ್ಥಾನವಿಲ್ಲ! ಎಂದು ಪೋಸ್ಟ್ ಮಾಡಿದ್ದಾರೆ. ಭಾಷಾ ಹುತಾತ್ಮರ ದಿನಾಚರಣೆ ಹಿನ್ನೆಲೆ ಸ್ಟಾಲಿನ್ ತಮ್ಮ ಎಕ್ಸ್ ಖಾತೆಯಲ್ಲಿ 1965ರ ಘಟನೆಗಳನ್ನ ಮೆಲುಕು ಹಾಕಿದ್ದು, ಇದರ ಜೊತೆಗೆ ಭಾಷಾ ವಿಷಯದಲ್ಲಿ ಡಿಎಂಕೆ ನಾಯಕ ಸಿ ಎನ್ ಅಣ್ಣಾದೊರೈ ಹಾಗೂ ಎಂ. ಕರುಣಾನಿಧಿ ಅವರ ಕೊಡುಗೆ ಮೆಲುಕು ಹಾಕಿದ್ದಾರೆ. ಅಲ್ಲದೆ ಇದೇ ವೇಳೆ, 'ಹುತಾತ್ಮರ' ಉಲ್ಲೇಖ ಒಳಗೊಂಡ ಪೋಸ್ಟ್ ಮಾಡುವ ಮೂಲಕ ಹಿಂದಿ ಹೇರಿಕೆ ವಿರುದ್ಧ ಮತ್ತೆ ಗುಡುಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಹಿಂದಿ ವಿರೋಧಿ ಧ್ವನಿ ದಕ್ಷಿಣ ಭಾರತದಲ್ಲಿ ಕೇಳಿ ಬಂದಿದೆ.
மொழிப்போர்த் தியாகிகள் வீரவணக்க நாள்: அன்றும் இன்றும் என்றும் இந்திக்கு இங்கே இடமில்லை!
— M.K.Stalin - தமிழ்நாட்டை தலைகுனிய விடமாட்டேன் (@mkstalin) January 25, 2026
மொழியை உயிராய் நேசிக்கும் ஒரு மாநிலம், இந்தித் திணிப்புக்கு எதிராக ஒன்றுதிரண்டு போராடியது. திணித்த ஒவ்வொரு முறையும் அதே வீரியத்தோடு போராடியது.
இந்தியத் துணைக் கண்டத்திலுள்ள பல்வேறு மொழிவழித்… pic.twitter.com/EmVm1TqTXy
ಪರ & ವಿರೋಧದ ಚರ್ಚೆ ಜೋರು
ತನ್ನ ಭಾಷೆ ಹೆಚ್ಚಾಗಿ ಪ್ರೀತಿಸುವ ರಾಜ್ಯ, ಹಿಂದಿ ಹೇರಿಕೆ ವಿರುದ್ಧ ಒಟ್ಟಾಗಿ ಹೋರಾಡಿತು. ಪ್ರತಿ ಬಾರಿ ಹೇರಲ್ಪಟ್ಟಾಗ ಅದೇ ಹುರುಪಿನಿಂದ ಹೋರಾಡಿತು. ಇದು ಭಾರತ ಉಪಖಂಡದಲ್ಲಿ ವಿವಿಧ ಭಾಷಾ ರಾಷ್ಟ್ರೀಯತೆ ಹಕ್ಕುಗಳು ಮತ್ತು ಗುರುತನ್ನು ರಕ್ಷಿಸಿತು ಎಂದಿದ್ದಾರೆ ಸ್ಟಾಲಿನ್. ಈಗ ಸ್ಟಾಲಿನ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದು, ಪರ & ವಿರೋಧದ ಚರ್ಚೆಗಳು ಜೋರಾಗಿವೆ. ಒಂದು ಕಡೆ ತಮಿಳುನಾಡು ಚುನಾವಣೆ ಹತ್ತಿರದಲ್ಲೇ ಇರುವ ಸಮಯದಲ್ಲಿ ಈ ವಿಚಾರ ರಾಜಕೀಯ ತಿರುವು ಪಡೆಯುವ ಮುನ್ಸೂಚನೆ ಕೂಡ ಸಿಗುತ್ತಿದೆ.












Click it and Unblock the Notifications