ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ದಿವಸ 2022: ಹಿಂದಿ ಪ್ರತಿಸ್ಪರ್ಧಿಯಲ್ಲ, ದೇಶದ ಎಲ್ಲಾ ಭಾಷೆಗಳ ಸ್ನೇಹಿತ: ಅಮಿತ್ ಶಾ

|
Google Oneindia Kannada News

ನವದೆಹಲಿ, ಸೆ.14: ಹಿಂದಿ ಭಾಷೆಯು ಪ್ರತಿಸ್ಪರ್ಧಿಯಲ್ಲ, ಆದರೆ ದೇಶದ ಇತರ ಎಲ್ಲಾ ಭಾಷೆಗಳ "ಸ್ನೇಹಿತ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಹಿಂದಿಯನ್ನು ಇತರ ಪ್ರಾದೇಶಿಕ ಭಾಷೆಗಳ ವಿರುದ್ಧ ಎತ್ತಿಕಟ್ಟುವ "ತಪ್ಪು ಮಾಹಿತಿ" ಯನ್ನು ಖಂಡಿಸಿದ್ದಾರೆ. ಹಿಂದಿ ದಿವಸ್ ಸಂದರ್ಭದಲ್ಲಿ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನದಲ್ಲಿ ಮಾತನಾಡಿದ ಗೃಹ ಸಚಿವ ಹಿಂದಿ ಭಾಷೆಯ ಏಕೀಕರಣದ ಅಂಶವನ್ನು ಒತ್ತಿ ಹೇಳಿದರು. ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. "ಹಿಂದಿ ಇಡೀ ರಾಷ್ಟ್ರವನ್ನು ಅಧಿಕೃತ ಭಾಷೆಯಾಗಿ ಏಕತೆಯ ಎಳೆಯಲ್ಲಿ ಒಂದುಗೂಡಿಸುತ್ತದೆ" ಎಂದು ಅಮಿತ್ ಶಾ ಹೇಳಿದರು.

Hindi Diwas 2022 ವಿರುದ್ಧ ವಿಧಾನಸೌಧ ಮುಂದೆ ಎಚ್‌ಡಿಕೆ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆHindi Diwas 2022 ವಿರುದ್ಧ ವಿಧಾನಸೌಧ ಮುಂದೆ ಎಚ್‌ಡಿಕೆ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ

ಹಿಂದಿ ಪ್ರಪಂಚದಾದ್ಯಂತ ಭಾರತಕ್ಕೆ ವಿಶೇಷ ಗೌರವವನ್ನು ತಂದಿದೆ

ಹಿಂದಿ ಪ್ರಪಂಚದಾದ್ಯಂತ ಭಾರತಕ್ಕೆ ವಿಶೇಷ ಗೌರವವನ್ನು ತಂದಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿ ದಿವಸ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. "ಹಿಂದಿ ಪ್ರಪಂಚದಾದ್ಯಂತ ಭಾರತಕ್ಕೆ ವಿಶೇಷ ಗೌರವವನ್ನು ತಂದಿದೆ. ಅದರ ಸರಳತೆ, ಸ್ವಾಭಾವಿಕತೆ ಮತ್ತು ಸೂಕ್ಷ್ಮತೆಯು ಯಾವಾಗಲೂ ಆಕರ್ಷಿಸುತ್ತದೆ. ಹಿಂದಿ ದಿವಸ್‌ನಂದು, ಅದನ್ನು ಸಮೃದ್ಧವಾಗಿ ಮತ್ತು ಸಬಲೀಕರಣಗೊಳಿಸಲು ದಣಿವರಿಯಿಲ್ಲದೆ ಕೊಡುಗೆ ನೀಡಿದ ಎಲ್ಲ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ "ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹಿಂದಿ ದೇಶದ ಎಲ್ಲಾ ಭಾಷೆಗಳ ಸ್ನೇಹಿತ

ಹಿಂದಿ ದೇಶದ ಎಲ್ಲಾ ಭಾಷೆಗಳ ಸ್ನೇಹಿತ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಿಂದಿ ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳ "ಸಮಾನಾಂತರ ಅಭಿವೃದ್ಧಿ" ಗಾಗಿ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದರು. ಭಾಷೆಗಳ ಸಹಬಾಳ್ವೆಯನ್ನು ಒಪ್ಪಿಕೊಳ್ಳುವ ಅಗತ್ಯವಿದೆ ಎಂದ ಅವರು, ಅದರ ನಿಘಂಟನ್ನು ವಿಸ್ತರಿಸಲು ಇತರ ಭಾಷೆಗಳಿಂದ ಪದಗಳನ್ನು ತೆಗೆದುಕೊಳ್ಳುವ ಮೂಲಕ ಹಿಂದಿಯನ್ನು ಹೊಂದಿಕೊಳ್ಳುವ ಅಗತ್ಯವಿದೆ ಎಂದರು.

"ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಸ್ಪರ್ಧಿಗಳು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿ ದೇಶದ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ. ಹಿಂದಿ ದೇಶದ ಎಲ್ಲಾ ಭಾಷೆಗಳ ಸ್ನೇಹಿತ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು" ಎಂದು ಅಮಿತ್ ಶಾ ಹೇಳಿದರು.

ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಪ್ರತಿಭಟನೆ

ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಪ್ರತಿಭಟನೆ

ದೇಶದ ಹಿಂದಿಯೇತರ ಜನರ ಮೇಲೆ ಕೇಂದ್ರವು ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ದಕ್ಷಿಣ ಭಾರತದ ರಾಜ್ಯಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಜನತಾದಳ (ಜಾತ್ಯತೀತ) ಹಿಂದಿ ಭಾಷೆಯ ಆಚರಣೆಯನ್ನು ವಿರೋಧಿಸಿದೆ. ಹಿಂದಿ ದಿವಸ್‌ಗೆ ಸರ್ಕಾರ ಹೇಗೆ ಜನರ ತೆರಿಗೆ ಹಣ ಖರ್ಚು ಮಾಡುತ್ತಿದೆ ಎಂದು ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ''ಕನ್ನಡವನ್ನು ಆಚರಿಸುವ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರ ಹಿಂದಿಯನ್ನು ಆಚರಿಸುತ್ತಿದೆ ಎಂದು ಕಿಡಿ ಕಾರಿದರು.

ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಮಾಜಿ ಶಾಸಕ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷ (ಕೆಸಿವಿಪಿ) ಮುಖಂಡ ವಾಟಾಳ್ ನಾಗರಾಜ್ ಅವರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದರು.

ಹಿಂದಿ ವಿರೋಧಿ ಸಮ್ಮೇಳನ ನಡೆಸಿದ್ದ ಡಿಎಂಕೆ

ಹಿಂದಿ ವಿರೋಧಿ ಸಮ್ಮೇಳನ ನಡೆಸಿದ್ದ ಡಿಎಂಕೆ

ಹಲವಾರು ದಕ್ಷಿಣ ಭಾರತದ ಪಕ್ಷಗಳು, ವಿಶೇಷವಾಗಿ ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಜಗಂ (ಡಿಎಂಕೆ) ಕೇಂದ್ರ ಸರ್ಕಾರವು ಹಿಂದಿಯೇತರ ಜನರ ಮೇಲೆ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. 1957 ರ ಸೆಪ್ಟೆಂಬರ್ 21 ರಂದು, ಡಿಎಂಕೆ ಹಿಂದಿ ವಿರೋಧಿ ಸಮ್ಮೇಳನವನ್ನು ಆಯೋಜಿಸಿತು ಮತ್ತು ಹಿಂದಿಯ "ಹೇರಿಕೆಯ" ವಿರುದ್ಧ ಹಿಂದಿ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಿತು.


ಇತ್ತ, ಹಿಂದಿ ಸಮೃದ್ಧವಾದಾಗ ಮಾತ್ರ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಅಭಿವೃದ್ಧಿ ಹೊಂದುತ್ತವೆ ಎಂದು ಅಮಿತ್ ಶಾ ಹೇಳಿದರು.


"ಪ್ರತಿಯೊಬ್ಬರೂ ಇದನ್ನು ಒಪ್ಪಿಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಎಲ್ಲಿಯವರೆಗೆ ನಾವು ಭಾಷೆಗಳ ಸಹಬಾಳ್ವೆಯನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ನಮ್ಮ ಭಾಷೆಯಲ್ಲಿ ದೇಶವನ್ನು ನಡೆಸುವ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ. ಎಲ್ಲಾ ಭಾಷೆಗಳು ಮತ್ತು ಮಾತೃಭಾಷೆಗಳನ್ನು ಜೀವಂತವಾಗಿ ಮತ್ತು ಸಮೃದ್ಧವಾಗಿ ಇಡುವುದು ನಮ್ಮ ಗುರಿಯಾಗಬೇಕು. ಈ ಎಲ್ಲಾ ಭಾಷೆಗಳ ಏಳಿಗೆಯಿಂದ ಮಾತ್ರ ಹಿಂದಿ ಅಭಿವೃದ್ಧಿ ಹೊಂದುತ್ತದೆ ಎಂದು ಅಮಿತ್ ಶಾ ಹೇಳಿದರು.


ಪ್ರತಿ ವರ್ಷ ಹಿಂದಿ ದಿವಸ್ ಅನ್ನು ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ದಿನದಂದು ಹಲವಾರು ಪ್ರತಿಭಟನೆಗಳು, ಹಿಮದಿ ವಿರೋಧಿ ದಿನ ಆಚರಿಸಲಾಗುತ್ತದೆ.

English summary
Hindi Diwas 2022: Hindi language is not a competiton, is a friend of all the other languages says Union home minister Amit Shah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X