Hindi Diwas 2026: ದೇಶದ ವಿವಿಧ ಭಾಷಿಕರ ಬೆಸೆಯುವಲ್ಲಿ ಹಿಂದಿ ಭಾಷೆ ಪ್ರಮುಖ ಪಾತ್ರ: ಕೇಂದ್ರ ಗೃಹ ಸಚಿವ ಅಮಿತ್ ಶಾ

Hindi Diwas 2026: ದೇಶದ ವಿವಿಧ ಭಾಷೆಯ ಜನರನ್ನು ಬೆಸೆಯುವಲ್ಲಿ ಹಿಂದಿ ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಭಾರತದಲ್ಲಿನ ಇನ್ನುಳಿದ ಭಾಷೆಗಳ ಗೌರವ ಮತ್ತು ಬೆಳವಣಿಗೆಗೆ ಧಕ್ಕೆಯಾಗದಂತೆ ಹಿಂದಿ ಭಾಷೆಯೂ ಸಹ ಬೆಳೆಯಬೇಕು ಎಂದೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಭಾರತದ ಸಂಸ್ಕೃತಿ ಮತ್ತು ಸಾಹಿತ್ಯವು ಕಮಲದಂತಿದ್ದು, ಪ್ರತಿಯೊಂದು ಪ್ರಾದೇಶಿಕ ಭಾಷೆಯೂ ಅದರ ಒಂದು ದಳವನ್ನು ಪ್ರತಿನಿಧಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಒಂದು ದಳ ಕಳೆದುಹೋದರೂ, ಇಡೀ ಕಮಲದ ಸೌಂದರ್ಯ ಕಡಿಮೆಯಾಗುತ್ತದೆ. ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಸರಿಯಾದ ಗೌರವ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳುವಾಗ ಹಿಂದಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

Hindi Diwas 2026 Hindi Plays Key Role in Uniting India s Diverse Linguistic Communities Says Amit Shah

ನವಿ ಮುಂಬೈನಲ್ಲಿ ಎರಡು ದಿನಗಳ ಹಿಂದಿ ದಿವಸ್ 2026 ಮತ್ತು ಆರನೇ ಅಖಿಲ ಭಾರತೀಯ ರಾಜಭಾಷಾ ಸಮ್ಮೇಳನವನ್ನು ಉದ್ಘಾಟಿಸಿದ ಅಮಿತ್ ಶಾ ಅವರು ಮಾತನಾಡಿದರು. ದೇಶದಲ್ಲಿ ಹಲವು ಭಾಷೆಗಳು ಇರುವುದು ದೇಶದ ದೌರ್ಬಲ್ಯವಲ್ಲ ಅದೇ ಶಕ್ತಿ ಎಂದು ಪ್ರತಿಪಾದಿಸಿದರು.

ಭಾರತವು ಹಲವು ಭಾಷೆಗಳು ಮತ್ತು ಉಪಭಾಷೆಗಳನ್ನು ಹೊಂದಿದ್ದರೂ, ಭಾರತೀಯ ಭಾವನೆ ಮತ್ತು ರಾಷ್ಟ್ರದ ಧ್ವನಿ ಒಂದೇ ಆಗಿರಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಾಷಾ ವೈವಿಧ್ಯತೆಯು ದೇಶದ ಶಕ್ತಿಯಾಗಿದೆ ಮತ್ತು ಹಿಂದಿ ವಿವಿಧ ಭಾರತೀಯ ಭಾಷೆಗಳ ನಡುವೆ ಸಂವಹನದ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆ ಮೂಲಕ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಬಹುಭಾಷಾ ಸಂಸ್ಕೃತಿಯನ್ನು ಹೊಂದಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ, ಅಧಿಕೃತ ಭಾಷಾ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮತ್ತು ಕೊಡುಗೆಗಳಿಗಾಗಿ ಹನ್ನೊಂದು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಗೌರವಿಸಲಾಯಿತು. ವಂದೇ ಮಾತರಂ ಅನ್ನು ಕೇಂದ್ರೀಕರಿಸಿದ ರಾಜಭಾಷಾ ಇಲಾಖೆಯ ಮಾಸಿಕ ಪತ್ರಿಕೆ ರಾಜಭಾಷಾ ಭಾರತಿಯ ವಿಶೇಷ ಸ್ಮರಣಾರ್ಥ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು ಮತ್ತು ಮೂರು ಪುಸ್ತಕಗಳನ್ನು ಸಹ ಬಿಡುಗಡೆ ಮಾಡಲಾಯಿತು. ಭಾರತಿ ಬಹುಭಾಷಾ ಅನುವಾದ ಅಪ್ಲಿಕೇಶನ್ ಅನ್ನು ಉದ್ಘಾಟಿಸಲಾಯಿತು ಮತ್ತು ಭಾರತೀಯ ಭಾಷೆಗಳಿಗೆ ಮೀಸಲಾಗಿರುವ ದೇಶದ ಮೊದಲ ಡೇಟಾ ಕೇಂದ್ರವಾದ ಭಾಷಾ ಕುಂಜ್‌ವನ್ನು ಸಹ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

Hindi Diwas 2026: ದೇಶದಲ್ಲಿ ಮಾತೃಭಾಷೆಗೆ ಆದ್ಯತೆ

ಭಾರತೀಯ ಭಾಷೆಗಳಿಗೆ ಉತ್ತೇಜನೆ ನೀಡುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಪಕ್ಷಕ್ಕೆ ಸೀಮಿತವಾಗಿಸಬೇಕು. ಯಾವುದೇ ಮಗುವು ತನ್ನ ಮಾತೃಭಾಷೆಯ ಮೂಲಕ ಮಾತ್ರವೇ ಭಾರತವನ್ನು ಅರ್ಥ ಮಾಡಿಕೊಳ್ಳಬಲ್ಲದು. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ (NEP)ಮೂಲಕ ಮಾತೃಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯಗೊಳಿಸಿದ್ದಾರೆ ಎಂದೂ ಕೇಂದ್ರ ಗೃಹ ಸಚಿವ ಅಮಿತ್ ಅವರು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+