Hindenburg Research: ಹಿಂಡೆನ್ ಬರ್ಗ್‌ ವರದಿ, ಅದಾನಿ 8 ಕಂಪನಿಗಳ ಷೇರು ಕುಸಿತ

ಮುಂಬೈ, ಆಗಸ್ಟ್ 13: ಅಮೆರಿಕ ಮೂಲದ ಹಿಂಡೆನ್‌ ಬರ್ಗ್ ವರದಿ ಮತ್ತೆ ಭಾರತದಲ್ಲಿ ಚರ್ಚೆಗೆ ಕಾರಣವಾಗಿದೆ. ವರದಿಯ ಬಳಿಕ ಅದಾನಿ ಗ್ರೂಪ್‌ನ 8 ಕಂಪನಿಗಳ ಷೇರು ಕುಸಿತ ಕಂಡಿದೆ. ಹೂಡಿಕೆದಾರರು ಸಮಾಧಾನದಿಂದ ಇರಿ ಎಂದು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ. ಈ ವರದಿ ಬಳಿಕ ಸೋಮವಾರ ಪೇರು ಪೇಟೆಯಲ್ಲಿ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ.

ಸೋಮವಾರ ಅದಾನಿ ಗ್ರೂಪ್‌ನ 10 ಕಂಪನಿಗಳ ಪೈಕಿ 8 ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಹಿಂಡೆನ್‌ ಬರ್ಗ್ ವರದಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ತನ್ನ ವರದಿಯಲ್ಲಿ ಆರೋಪ ಮಾಡಿತ್ತು.

Hindenburg Research Report Shares Of Adani Groups 8 Companies Falling

ಯಾವ-ಯಾವ ಕಂಪನಿಗಳು: ಅದಾನಿ ಗ್ರೂಪ್‌ನ ಅದಾನಿ ವಿಲ್ಮರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಎನರ್ಜಿ ಸಲ್ಯೂಷನ್ಸ್, ಎನ್‌ಡಿಟಿವಿ, ಅದಾನಿ ಪೋರ್ಟ್‌, ಅದಾನಿ ಎಂಟರ್‌ಪ್ರೈಸಸ್, ಎಸಿಸಿ ಮತ್ತು ಅದಾನಿ ಪವರ್‌ನ ಷೇರಿನ ಮೌಲ್ಯ ಇಳಿಕೆಯಾಗಿದೆ. ಆದರೆ ಅಂಜುಜಾ ಸಿಮೆಂಟ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಕಳೆದ ವಾರ something big soon India ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಂಡೆನ್‌ ಬರ್ಗ್ ಪೋಸ್ಟ್ ಹಾಕಿತ್ತು. ಬಳಿಕ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಪಾಲುದಾರಿಕೆ ಹೊಂದಿದ್ದಾರೆ ಎಂದು ಆರೋಪಿಸಿ ವರದಿ ಬಿಡುಗಡೆ ಮಾಡಿತ್ತು.

ಈ ಹಿಂದೆಯೂ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ ಬರ್ಗ್ ಅದಾನಿ ಗ್ರೂಪ್ ವಿರುದ್ಧ ವರದಿ ಪ್ರಕಟಿಸಿದಾಗ ಭಾರತದ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿತ್ತು. ಷೇರುಗಳು ಕುಸಿತಗೊಂಡಿದ್ದವು. ಈಗಲೂ ಹಾಗೆಯೇ ಆಗಿದ್ದು, ಹೂಡಿಕೆದಾರರಲ್ಲಿ ಆತಂಕ ಉಂಟಾಗಿದೆ.

ಈಗಾಗಲೇ ಕಳೆದ ವಾರ ಬಿಡುಗಡೆಯಾದ ಹಿಂಡೆನ್‌ ಬರ್ಗ್ ವರದಿ ಭಾರತದಲ್ಲಿ ರಾಜಕೀಯ ಸ್ವರೂಪ ಪಡೆದಿದೆ. ವರದಿ ಬಗ್ಗೆ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಇಂತಹ ಸಮಯದಲ್ಲಿಯೇ ಷೇರುಪೇಟೆಯಲ್ಲಿ ಅದಾನಿ ಗ್ರೂಪ್‌ನ 8 ಕಂಪನಿಗಳ ಷೇರುಗಳಲ್ಲಿ ಕುಸಿತವಾಗಿದೆ.

ಆತಂಕ ಬೇಡ ಎಂದ ಸೆಬಿ: ಹಿಂಡೆನ್‌ ಬರ್ಗ್ ವರದಿ, ಅದಾನಿ ಗ್ರೂಪ್ 8 ಕಂಪನಿಗಳ ಷೇರುಗಳು ಕುಸಿತದ ಬಳಿಕ ಸೆಬಿ ಹೂಡಿಕೆದಾರರ ಆತಂಕ ಕಡಿಮೆ ಮಾಡಲು ಮುಂದಾಗಿದೆ. ನಿಮ್ಮ ಕಾರ್ಯ ಮುಂದುವರೆಸಿ, ಸಮಾಧಾನದಿಂದ ಇರಿ ಎಂದು ಸೆಬಿ ಹೇಳಿದೆ.

ಆಗಸ್ಟ್ 10ರ ವರದಿಯಲ್ಲಿ ಹಿಂಡೆನ್‌ ಬರ್ಗ್ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಬುಚ್ ದಂಪತಿಯ ಪಾಲುದಾರಿಕೆ ಇದೆ. ಅದಾನಿ ಮರಿಷಸ್ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ಶೆಲ್ ಕಂಪನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿತ್ತು.

ಅದಾನಿ ಷೇರು ಹಗರಣದ ಕುರಿತು 2023ರಲ್ಲಿಯೇ ಹಿಂಡೆನ್ ಬರ್ಗ್ ವರದಿಯೊಂದನ್ನು ಪ್ರಕಟಿಸಿತ್ತು. ಆದರೆ ಈಗ ಈ ಷೇರು ಹಗರಣದಲ್ಲಿ ಮಾಧವಿ ಬುಚ್, ಧವಲ್ ಬುಚ್ ಪಾತ್ರವಿದೆ ಎಂದು ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+