Get Updates
Get notified of breaking news, exclusive insights, and must-see stories!

ವೈರಲ್ ವಿಡಿಯೋ: ಹಿಮಾಚಲ ಪ್ರದೇಶದಲ್ಲಿ ಮಳೆಯ ರೌದ್ರಾವತಾರ

Recommended Video

      ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: 13 ಮಂದಿ ಸಾವು | Oneindia Kannada

      ಕುಲ್ಲು, ಸೆಪ್ಟೆಂಬರ್ 25: ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಲೇ ಇರುವ ಮಳೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಎಡಬಿಡದೆ ಸುರಿಯುತ್ತಲೇ ಇರುವ ಮಳೆಯಿಂದಾಗಿ ಇಲ್ಲಿನ ಬಿಯಾಸ್ ಮತ್ತು ರಾವಿ ನದಿಗಳು ತುಂಬಿ ಹರಿಯುತ್ತವೆ. ಇದರಿಂದಾಗಿ ಉಂಟಾದ ಪ್ರವಾಹಕ್ಕೆ ಇದುವರೆಗೂ 13 ಜನ ಮೃತರಾಗಿದ್ದಾರೆ.

      ಗುಡ್ಡಗಾಡು ಪ್ರದೇಶವಾದ ಹಿಮಾಚಲ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಭೂಕುಸಿತದಿಂದ ಪ್ರಾಣಹಾನಿ ತಪ್ಪಿಸಲು ಮುನ್ನೆಚ್ಚರಿಕೆ ದೃಷ್ಟಿಯಿಂದ ಮುನ್ನೂರೈವತ್ತಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ.

      ಹಿಮಾಚಲ ಪ್ರದೇಶವು ಪ್ರಮುಖ ಪ್ರವಾಸೀ ತಾಣವಾಗಿರುವುದರಿಂದ, ಪ್ರವಾಸಕ್ಕೆಂದು ಅಲ್ಲಿಗೆ ತೆರಳಿರುವವರು ಪರಿತಪಿಸುವಂತಾಗಿದೆ. ನದಿ ತೀರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಸೆಪ್ಟೆಂಬರ್ ಅಂತ್ಯದವರೆಗೂ ಈ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿಯಲಿದೆ.

      Array

      ನೀರಲ್ಲಿ ತೇಲಿಹೋದ ಗಜಗರ್ಭದ ಬಸ್!

      ಬಸ್ಸೊಂದು ನಿಂತಿರುವಂತೆಯೇ ಭೂಕುಸಿತವುಂಟಾಗಿ, ಗಜಗರ್ಭದ ಬಸ್ಸು ಪ್ರಚಂಡ ಪ್ರವಾಹದಲ್ಲಿ ತೇಲಿಹೋಗುತ್ತಿರುವ ದೃಶ್ಯ ನೋಡಿದರೆ ಹಿಮಾಚಲ ಪ್ರದೇಶ ಪ್ರವಾಹದ ರೌದ್ರಾವತಾರ ಅರ್ಥವಾಗುತ್ತದೆ. ಈ ವಿಡಿಯೋವಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

      Array

      ತುಂಬಿ ಹರಿದ ಬಿಯಾಸ್ ನದಿ

      ಕುಲ್ಲು ಮತ್ತು ಮನಾಲಿ ನಡುವಲ್ಲಿರುವ ಬಿಯಾಸ್(ಪಂಜಾಬಿ ಭಾಷೆಯಲ್ಲಿ ಬಿಯಾಸ್ ನದಿಯನ್ನು ವ್ಯಾಸ್ ನದಿ ಎಂದೂ ಕರೆಯಲಾಗುತ್ತದೆ) ನದಿ ತುಂಬಿ ತುಳುಕುತ್ತಿದ್ದು, ನದಿ ತೀರದಲ್ಲಿ ವಾಸವಿದ್ದ ಜನರನ್ನು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

      ನೀರಿನಲ್ಲಿ ದೋಣಿಯಲ್ಲ, ಲಾರಿ!

      ದೂರದಿಂದ ನೋಡಿದರೆ ಅಲೆಗಳ ಮೇಲೆ ದೋಣಿಯೊಂದು ಚಲಿಸುತ್ತಿರುವಂತೆ ಕಾಣುವ ದೃಶ್ಯ! ಹತ್ತಿರ ಬಂದು ನೋಡಿದರೆ ಪ್ರಳಯದ ರೌದ್ರಾವತಾರಕ್ಕೆ ದೋಣಿಯಂತೆ, ದೊಡ್ಡ ಲಾರಿಯೆ ನೀರಿನಲ್ಲಿ ತೇಲಿ ಹೋಗುತ್ತಿದೆ. ಈ ದೃಶ್ಯವೂ ವೈರಲ್ ಆಗಿದೆ.

      ಕಣ್ಣೆದುರಲ್ಲೇ ಭೂಕುಸಿತ!

      ಕಣ್ಣೆದುರಲ್ಲೇ ಭೂಕುಸಿತದಿಂದ ರಸ್ತೆಯೆಲ್ಲ ಪ್ರಪಾತವಾಗುತ್ತಿರುವ ದ್ರಶ್ಯ ಕಂಡುಬರುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವವರದು ಸಾಹಸದ ಬದುಕೇ. ಆದರೆ ಪ್ರಾಣ ಹಾನಿ ತಪ್ಪಿಸುವ ಸಲುವಾಗಿ ಈಗಾಗಲೇ ಇಲ್ಲಿನ ಮುನ್ನೂರೈವತ್ತಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+