ಹಿ. ಪ್ರದೇಶದಲ್ಲಿ ಮತ ಚಲಾಯಿಸಿದ ಸ್ವತಂತ್ರ ಭಾರತದ ಮೊದಲ ಮತದಾರ

Posted By: ಚೆನ್ನಬಸವೇಶ್ವರ್
Subscribe to Oneindia Kannada

ಶಿಮ್ಲಾ, ನವೆಂಬರ್ 9: ಇವರ ಹೆಸರು ಶ್ಯಾಮ್ ಶರಣ್ ತ್ಯಾಗಿ. ಸದ್ಯ ಇವರಿಗೆ ಭರ್ತಿ 100 ವರ್ಷ ವಯಸ್ಸು. ಇವರು ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ 1951ರಲ್ಲಿ ನಡೆದಾಗ ಕಿನೌರ್ ಜಿಲ್ಲೆಯ ಕಲ್ಪ್ ನಲ್ಲಿ ಮೊದಲಿಗರಾಗಿ ಮತದಾನ ಮಾಡಿದ್ದರು. ಅವತ್ತು ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು.

ಅಲ್ಲಿಂದ ನಿರಂತರ ಮತದಾನ ಮಾಡುತ್ತಾ ಬಂದವರು ಇವತ್ತೂ ಚುನಾವಣೆ ಬಂದರೆ ಸಾಕು ಚಿರಯೌವನನಂತೆ ಎದ್ದು ಹೋಗಿ ಮತದಾನ ಮಾಡಿ ಬರುತ್ತಾರೆ. ಒಂದೇ ಒಂದು ಲೋಕಸಭೆ ಚುನಾವಣೆಯಾಗಲೀ, ವಿಧಾನಸಭೆ ಚುನಾವಣೆಯಲ್ಲಾಗಲೀ ಅವರು ಮತದಾನ ಮಾಡುವುದನ್ನು ತಪ್ಪಿಸಿಕೊಂಡಿಲ್ಲ.

Himachal Pradesh elections: Independent India's first voter to cast his vote today

ತ್ಯಾಗಿಗೆ ಈಗ ವಯಸ್ಸಾಗಿದೆ; ಮೊದಲಿನಂತೆ ನಡೆಯಲು ಸಾಧ್ಯವಾಗುತ್ತಿಲ್ಲ. ಹೀಗಿದ್ದೂ ದೇಶದ ಮೊದಲ ಮತದಾರರು ಎಂಬ ಕಾರಣಕ್ಕೆ ಅವರ ಮತದಾನಕ್ಕೆ ಜಿಲ್ಲಾಡಳಿತ ವಿಶೇಷ ಸಿದ್ಧತೆ ಮಾಡಿಕೊಂಡಿದೆ.

ತ್ಯಾಗಿಯವರನ್ನು ಮತಗಟ್ಟೆಗೆ ಕರೆತರಲು ವಿಶೇಷ ವಾಹನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಮಾತ್ರವಲ್ಲ ಅವರಿಗೆ ಭರ್ಜರಿ ಸ್ವಾಗತ ಕೋರಲೂ ಮತಗಟ್ಟೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shyam Saran Negi, Independent India's first voter, is all set to cast his vote on Thursday in the Himachal Pradesh Assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ