ಹಿಜಾಬ್ ವಿವಾದ: ತ್ರಿಪುರಾ ಶಾಲೆಯಲ್ಲಿ 10ನೇ ತರಗತಿಯ ಬಾಲಕನ ಮೇಲೆ ಬಲಪಂಥೀಯರ ಹಲ್ಲೆ
ಅಗರ್ತಲಾ , ಆಗಸ್ಟ್. 05: ತ್ರಿಪುರಾದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 10 ನೇ ತರಗತಿಯ ವಿದ್ಯಾರ್ಥಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತರಗತಿಗಳಿಗೆ ಹಾಜರಾಗುವುದನ್ನು ತಡೆಯುವುದನ್ನು ವಿರೋಧಿಸಿದ ನಂತರ ಆತನ ಮೇಲೆ ಬಲಪಂಥೀಯ ಗುಂಪು ಹಲ್ಲೆ ನಡೆಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇಲಿಯಾಸ್ ಸರ್ಕಾರ್ ಸುಮನ್ ಎಂಬ ವಿದ್ಯಾರ್ಥಿಯನ್ನು ಬಲಪಂಥೀಯ ಗುಂಪು ತನ್ನ ತರಗತಿಯಿಂದ ಹೊರಗೆ ಎಳೆದುಕೊಂಡು ಬಂದು ಇಡೀ ಶಾಲೆಯ ಮುಂದೆ ಥಳಿಸಿದೆ. ಇಷ್ಟು ದೊಡ್ಡ ಘಟನೆ ನಡೆಯುತ್ತಿದ್ದರು ಕೂಡ ಯಾವುದೇ ಶಿಕ್ಷಕರು ಅಥವಾ ಶಾಲೆಯ ಮುಖ್ಯೋಪಾಧ್ಯಾಯರು ಬಾಲಕನ ರಕ್ಷಣೆಗೆ ಬರಲಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ವಿವಾದ ಶುರುವಾಗಿದ್ದು, ಕರ್ನಾಟಕದ ಉಡುಪಿಯಲ್ಲಿ. ಇದಾದ ನಂತರ ದೇಶದ ಹಲವು ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವ ಬಗ್ಗೆ ಕೊರೊಯಿಮುರಾ ಹೈಯರ್ ಸೆಕೆಂಡರಿ ಶಾಲೆಯ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದ ನಂತರ ಈ ಘಟನೆ ನಡೆದಿದೆ ಎಂದು ಪಿಟಿಐ ವರದಿಯಲ್ಲಿ ಸೇರಿಸಲಾಗಿದೆ.
ಘಟನೆಯ ನಂತರ ಸೆಪಹಿಜಾಲಾ ಜಿಲ್ಲೆಯ ಬಿಶಾಲ್ಗಢ ಉಪವಿಭಾಗದ ಪ್ರದೇಶವು ಉದ್ವಿಗ್ನವಾಗಿದೆ ಎಂದು ವರದಿಯಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯರು ಬೀದಿಗಿಳಿದಿದ್ದಾರೆ. ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸದಂತೆ ಮತ್ತು ಸರಿಯಾದ ಸಮವಸ್ತ್ರದಲ್ಲಿ ಶಾಲೆಗೆ ಬರುವಂತೆ ಹೇಳಿದ್ದ ಗುಂಪಿನ ಮಾತಿಗೆ ಇಲಿಯಾಸ್ ವಿರೋಧಿಸಿದ್ದಾರೆ.

ಶಾಲೆಯ ಪ್ರಾಂಶುಪಾಲರ ಕಚೇರಿಗೆ ಮುತ್ತಿಗೆ ಹಾಕಿ ಹಿಜಾಬ್ ಧರಿಸುವುದನ್ನು ಬಂದ್ ಮಾಡುವಂತೆ ಹೇಳುತ್ತಿದ್ದ ಗುಂಪು, ಇದನ್ನು ವಿರೋಧಿಸಿದ ಇಲಿಯಾಸ್ ಕಡೆಗೆ ತಿರುಗಿದೆ. ಇದಾದ ಬಳಿಕ ಶಾಲೆಯ ಹೊರಗೆ ಜಮಾಯಿಸಿದ ಗುಂಪೊಂದು ಬಾಲಕನ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಭುರಾಂಪುರ ನಿವಾಸಿ ಇಲಿಯಾಸ್‌ನನ್ನು ಶಾಲೆಯ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
"ಶಿಕ್ಷಕರೊಂದಿಗಿನ ಸಭೆಯ ನಂತರ, ನಾನು ಇತ್ತೀಚೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮವಸ್ತ್ರವನ್ನು ಧರಿಸಿ ಶಾಲೆಗೆ ಹಾಜರಾಗುವಂತೆ ಸೂಚಿಸಿದೆ. ಆದರೂ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ಧಾರ್ಮಿಕ ನಂಬಿಕೆಯಾಗಿರುವುದರಿಂದ ನಿರ್ದೇಶನವನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ಹೇಳಿದರು" ಎಂದು ಶಾಲೆಯ ಮುಖ್ಯೋಪಾಧ್ಯಾಯ ಪ್ರಿಯತೋಷ್ ನಂದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಸ್ವಲ್ಪ ಸಮಯದಿಂದ ಹಿಜಾಬ್ ಸರಣಿಯ ಉದ್ವಿಗ್ನತೆ ಮುಂದುವರೆದಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ಗೆ ಸಂಯೋಜಿತವಾಗಿರುವ ಮಾಜಿ ವಿದ್ಯಾರ್ಥಿಗಳ ಗುಂಪು ಇತ್ತೀಚೆಗೆ ಶಾಲೆಗಳಿಗೆ ಭೇಟಿ ನೀಡಿ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳನ್ನು ಸರಿಯಾದ ಶಾಲಾ ಸಮವಸ್ತ್ರವನ್ನು ಧರಿಸಲು ಮತ್ತು ಮಹಿಳಾ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸುವಂತೆ ಒತ್ತಾಯಿಸಲು ಒತ್ತಾಯಿಸಿದೆ ಎಂದು ಮುಖ್ಯೋಪಾಧ್ಯಾಯ ಪ್ರಿಯತೋಷ್ ನಂದಿ ಹೇಳಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ಮುಂದುವರೆಸಿದ್ದರಿಂದ, ಕೆಲವು ಹಿಂದೂ ವಿದ್ಯಾರ್ಥಿಗಳು ಗುರುವಾರ ಕೇಸರಿ ಬಣ್ಣದ ಕುರ್ತಾದಲ್ಲಿ ಶಾಲೆಗೆ ಹಾಜರಾಗಿದ್ದರು. ಶಾಲಾ ಸಮವಸ್ತ್ರವನ್ನು ಧರಿಸಲು ಕೇಸರಿ ಕುರ್ತಾದ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರು ಕೇಳಿದಾಗ ಅವರು "ಎಲ್ಲಾ ವಿದ್ಯಾರ್ಥಿಗಳು ಸರಿಯಾದ ಶಾಲಾ ಸಮವಸ್ತ್ರದಲ್ಲಿ ಸಂಸ್ಥೆಗೆ ಬಂದರೆ ತಾವು ಶಾಲಾ ಸಮವಸ್ತ್ರವನ್ನು ಧರಿಸುವುದಾಗಿ ತಿಳಿಸಿದರು ಎಂದು ಹೇಳಿದ್ದಾರೆ.
ಇತ್ತ, ಇದು ಕೋಮು ವಿಚಾರವಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಮಸ್ಯೆಯನ್ನು ಉಲ್ಬಣಗೊಳಿಸಲು ತರಗತಿಗಳನ್ನು ಸಹ ರದ್ದುಗೊಳಿಸಲಾಗಿದೆ. ರಾಜ್ಯದ ಅಧಿಕಾರಿಗಳು ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications