ಭೀಕರ ಬರ, ಮಳೆ ಕೊಯ್ಲು, ನದಿ ಸ್ವಚ್ಛತೆ ಬಗ್ಗೆ ಮೋದಿ
ನವದೆಹಲಿ, ಏಪ್ರಿಲ್ 24: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಿಂಗಳ ಬಾನುಲಿ ಕಾರ್ಯಕ್ರಮ 'ಮನ್ ಕಿ ಬಾತ್' ನ 19ನೇ ಸಂಚಿಕೆಯಲ್ಲಿ ನೀರಿನ ಮಹತ್ವದ ಬಗ್ಗೆ ಭಾನುವಾರ ಮಾತನಾಡಿದರು.
ದೇಶದ ಹಲವೆಡೆ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಜಲ ಕ್ಷಾಮ, ಪಂಚಾಯತ್ ರಾಜ್, ಮಳೆ ಕೊಯ್ಲು, ನದಿ ಸ್ವಚ್ಛತೆ ಬಗ್ಗೆ ಮಾತನಾಡಿದರು. ಮನ್ ಕಿ ಬಾತ್ ಸಂಚಿಕೆಯ ಮುಖ್ಯಾಂಶಗಳು ಹೀಗಿದೆ:
* ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಬರ ಪರಿಸ್ಥಿತಿ ಎದುರಿಸಲು ಅಲ್ಲಿನ ಜನರು ತಮ್ಮ ಬೆಳೆಪದ್ಧತಿಯನ್ನೇ ಬದಲಾಯಿಸಿದ್ದಾರೆ. ತಮ್ಮ ಜಮೀನಿನಲ್ಲಿ ನೀರಿಂಗಿಸುವ ಹೊಂಡಗಳನ್ನು ನಿರ್ಮಿಸಿದ್ದಾರೆ. ಗಿಡಗಳನ್ನು ಬೆಳೆಸಲು ಅವರಿಗೆ ಹೆಚ್ಚು ನೀರು ಬೇಕಿಲ್ಲ
* ಈ ಬಾರಿ ಉತ್ತಮ ಮುಂಗಾರುಮಳೆ ನಿರೀಕ್ಷೆಯಿದೆ. ಜೊತೆಗೆ ಬೆಳೆ ಉತ್ಪಾದನೆ ಹೆಚ್ಚಳ ಮಾಡಬೇಕಾದ ಹೊಣೆಗಾರಿಕೆಯೂ ಇದೆ.
* ನೀರಿನ ಸಮಸ್ಯೆ ನಿವಾರಿಸಲು ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕಿದೆ.

* ಮಳೆನೀರಿನ ಕೊಯ್ಲಿನಿಂದ ಭೂಮಿಯ ಜಲಮಟ್ಟ ಏರುತ್ತದೆ. ನೀರಿನ ಗುಣಮಟ್ಟ ಸುಧಾರಿಸುತ್ತದೆ. ಸ್ವಚ್ಛ ನೀರಿನಿಂದ ಆರೋಗ್ಯವೂ ಸುಧಾರಿಸುತ್ತದೆ. ಹಳ್ಳಿಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಪ್ರಚಾರ ಅಭಿಯಾನ ಕೈಗೆತ್ತಿಕೊಳ್ಳಬೇಕು
* ಗಂಗಾನದಿ ನಮ್ಮ ಪ್ರಮುಖ ಜಲ ಸಂಪನ್ಮೂಲ. ಗಂಗಾನದಿ ಸ್ವಚ್ಛತೆಗೆ ಕ್ರಮ ಕೈಗೊಂಡು, ಸ್ವಚ್ಛತೆಯ ಏಜೆಂಟರಾಗಬೇಕು.
* ಪಂಚಾಯ್ತಿ ರಾಜ್ ವ್ಯವಸ್ಥೆಯು ಗ್ರಾಮಗಳಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳು ಜನರಿಗೆ ತಲುಪಲು ನೆರವಾಗಿದೆ
* ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳದ ಬಗ್ಗೆ ಪೋಷಕರಿಗೆ ಅರಿವು ಅಗತ್ಯ. ಮಕ್ಕಳೊಡನೆ ನಿರಂತರ ಮಾತುಕತೆಯಿಂದ ದೈನಂದಿನ ಆಗು ಹೋಗುಗಳು ತಿಳಿಯಲಿದೆ.
* ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಮುಖ್ಯ, ಶಿಕ್ಷಣದ ಗುಣಮಟ್ಟ ಹೆಚ್ಚಳದಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ವಿಡಿಯೋ ಇಲ್ಲಿದೆ:












Click it and Unblock the Notifications