'ಗುಜರಾತ್ ಅಂದರೆ ಗಾಂಧಿ, ವಲ್ಲಭ ಭಾಯ್ ಪಟೇಲ್ ಹಾಗೂ ವ್ಯಾಪಾರ'
ಗಾಂಧಿನಗರ, ಜನವರಿ 10: ಗುಜರಾತ್ ಅಂದರೆ ಗಾಂಧಿ, ವಲ್ಲಭ ಭಾಯ್ ಪಟೇಲ್ ಹುಟ್ಟಿದ ನಾಡು, ವ್ಯವಹಾರ-ವ್ಯಾಪಾರಗಳ ಭೂಮಿ ಎಂದು ಪ್ರಧಾನಿ ನರೇಂದ್ರ ಮೋದಿ ವೈಬ್ರಂಟ್ ಗುಜರಾತ್ ಸಮಾವೇಶದಲ್ಲಿ ಹೇಳಿದ ಮಾತುಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಈ ಸಮಾವೇಶದಲ್ಲಿ ಮೋದಿ ಅವರಾಡಿದ ಮಾತುಗಳ ಮುಖ್ಯಾಂಶಗಳು ಇಲ್ಲಿವೆ.

* 2003ರ ನಂತರ ನಡೆಯುತ್ತಿರುವ ಅತ್ಯಂತ ಯಶಸ್ವಿ ಸಮಾವೇಶ ಇದು
* ಭಾರತವು ಆಟೋ ಕೈಗಾರಿಕೆಯ ಮಾರಾಟ ಹಾಗೂ ಉತ್ಪಾದನೆ ದೃಷ್ಟಿಯಿಂದಲೂ ಪ್ರಮುಖ ಮಾರುಕಟ್ಟೆ
* ಬಂಡವಾಳ ವಾಪಸಾತಿ ರಿಟರ್ನ್ ಆನ್ ಇನ್ವೆಸ್ಟ್ ಮೆಂಟ್ ನಲ್ಲಿ ಭಾರತ ಎತ್ತರದ ಸ್ಥಾನದಲ್ಲಿದೆ
* ಸಮಾವೇಶದ ಆರಂಭದಿಂದಲೂ ಭಾಗವಹಿಸುತ್ತಿರುವ ಜಪಾನ್ ಹಾಗೂ ಕೆನಡಾ ದೇಶಗಳನ್ನು ವಿಶೇಷವಾಗಿ ಉಲ್ಲೇಖಿಸಬೇಕು
* ಗುಜರಾತ್-ಮಹಾತ್ಮ ಗಾಂಧಿ ಹಾಗೂ ಸರ್ದಾರ್ ವಲ್ಲಭ ಭಾಯ್ ಪಟೇಲ್ ಹುಟ್ಟಿದ ನಾಡು. ಜತೆಗೆ ವ್ಯವಹಾರ-ವ್ಯಾಪಾರಗಳ ನಾಡು
* ಭಾರತವು ಆರ್ ಅಂಡ್ ಡಿಗೆ ಉತ್ತಮ ದೇಶ. ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಸಂಖ್ಯೆಯ ಎಂಜಿನಿಯರ್ ಗಳು, ವಿಜ್ಞಾನಿಗಳು ಇರುವ ದೇಶ ಭಾರತ
* 2014-15ರಲ್ಲಿ ಜಾಗತಿಕ ಆರ್ಥಿಕತೆಗೆ ಭಾರತ ಶೇ 12.4ರಷ್ಟು ಕೊಡುಗೆ ನೀಡಿದೆ.
* ವಿದೇಶಿ ಬಂಡವಾಳ ಅತಿ ಹೆಚ್ಚು ಹರಿದುಬರುತ್ತಿರುವ ಹತ್ತು ದೇಶಗಳಲ್ಲಿ ಭಾರತವೂ ಒಂದು
* 2015-16ರಲ್ಲಿ ಉತ್ಪಾದನಾ ವಲಯ ಶೇ 9ರಷ್ಟು ಅಭಿವೃದ್ಧಿ ಕಂಡಿದೆ. ಉತ್ಪಾದನಾ ವಲಯದಲ್ಲಿ ನಾವೀಗ ಜಗತ್ತಿನಲ್ಲೇ ಆರನೇ ಸ್ಥಾನದಲ್ಲಿದ್ದೇವೆ.
* ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸುತ್ತದೆ. ಪ್ರತಿ ಭಾರತೀಯರಿಗೂ ಸ್ವಂತ ಸೂರು ದೊರೆಯುತ್ತದೆ. ಎಲ್ಲರಿಗೂ ಶುದ್ಧ ನೀರು ಹಾಗೂ ದಿನದ ಇಪ್ಪತ್ನಾಲ್ಕು ಗಂಟೆಯೂ ವಿದ್ಯುತ್, ವಿಶಾಲವಾದ ರಸ್ತೆಗಳು, ವೇಗದ ರೈಲು ದೊರೆಯುತ್ತದೆ.











Click it and Unblock the Notifications