Puri Jagannath Temple: ಪುರಿ ದೇವಾಲಯದ ರತ್ನ ಭಂಡಾರಕ್ಕೆ ಸರ್ಪಗಾವಲು? ಹೈಕೋರ್ಟ್ ನ್ಯಾಯಾಧೀಶರು ಹೇಳಿದ್ದೇನು
ಒಡಿಶಾದ ಪುರಿಯಲ್ಲಿರುವ ವಿಶ್ವ ಪ್ರಸಿದ್ಧ ಜಗನ್ನಾಥ ದೇವಾಸ್ಥನದಲ್ಲಿರುವ ರತ್ನ ಭಂಡಾರವನ್ನು 46 ವರ್ಷಗಳ ನಂತರ ಭಾನುವಾರ ತೆರೆಯಲಾಗಿದೆ. ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದಲ್ಲಿ ಒಳ ಖಜಾನೆ ಮತ್ತು ಹೊರ ಖಜಾನೆಯನ್ನು ತೆರೆಯಲು 11 ಸದಸ್ಯರ ತಂಡವನ್ನು ಒಡಿಶಾ ಸರ್ಕಾರ ರಚನೆ ಮಾಡಿತ್ತು.
ಹೈಕೋರ್ಟ್ ನ್ಯಾಯಾಧೀಶ ಬಿಸ್ವನಾಥ್ ಮಾತನಾಡಿ, ಒಳಗಿನ ಚೇಂಬರ್ ಖಜಾನೆಗೆ ಭೇಟಿ ನೀಡಿದ ನಂತರ, ಮ್ಯಾಜಿಸ್ಟ್ರೇಟ್ ಮತ್ತು ಇತರರ ಸಮ್ಮುಖದಲ್ಲಿ ಬೀಗಗಳನ್ನು ಕತ್ತರಿಸಿದ ನಂತರ ಆವರಣವನ್ನು ಪ್ರವೇಶಿಸಲು ಸಾಧ್ಯವಾಯಿತು ಎಂದು ಮಾಧ್ಯಮಗಳಿಗೆ ತಿಳಿಸಿದರು.

ಭಂಡಾರವನ್ನು ಹಾವುಗಳನ್ನು ಕಾಯುತ್ತಿವೆಯಾ?
ಪುರಿ ಜಗನ್ನಾಥನ ಸನ್ನಿಧಿಯಲ್ಲಿರುವ ರತ್ನ ಭಂಡಾರಕ್ಕೆ ಸರ್ಪಗಳು ಕಾವಲಿವೆ ಎಂದೆಲ್ಲಾ ವದಂತಿಗಳು ಹಬ್ಬಿದ್ದವು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶ ಬಿಸ್ವನಾಥ್ ಅವರು, ಅಂತಹ ಯಾವುದೇ ಸರ್ಪಗಳು ಇಲ್ಲ ಎನ್ನುವು ಮೂಲಕ ವದಂತಿಗಳನ್ನು ನಿರಾಕರಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಯ ಏಳರಿಂದ ಎಂಟು ಸದಸ್ಯರು ತಂಡದ ಭಾಗವಾಗಿರುವುದರಿಂದ, ಬಹುದಾ ಯಾತ್ರೆಯ ಸಿದ್ಧತೆಗಳು ಪ್ರಾರಂಭವಾಗಿರುವುದರಿಂದ ಅವರು ಕಾರ್ಯನಿರತರಾಗಿದ್ದಾರೆ, ಆದ್ದರಿಂದ ಆಭರಣಗಳ ಹೆಚ್ಚಿನ ಪರಿಶೀಲನೆ ಮತ್ತು ಸ್ಥಳಾಂತರಕ್ಕೆ ನಮಗೆ ಹೆಚ್ಚಿನ ಸಮಯ ಸಿಗಲಿಲ್ಲ. ನಾವು ದೇವರ ಆಭರಣಗಳು ಮತ್ತು ಅಮೂಲ್ಯ ರತ್ನಗಳನ್ನು ಸ್ಥಳಾಂತರಕ್ಕೆ ಮತ್ತೊಂದು ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ ಎಂದು ನ್ಯಾಯಾಧೀಶ ಬಿಸ್ವನಾಥ್ ಹೇಳಿದರು.
ಹೊರ ಖಜಾನೆಯಲ್ಲಿ ಶೇಖರಿಸಲಾಗಿದ್ದ ಆಭರಣಗಳನ್ನು ದೇವಸ್ಥಾನದ ಆವರಣದಲ್ಲಿರುವ ತಾತ್ಕಾಲಿಕ ಸ್ಟ್ರಾಂಗ್ ರೂಮ್‌ಗೆ ಸ್ಥಳಾಂತರಿಸಲಾಗಿದ್ದು, ನಂತರ ಅದನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಸೀಲ್ ಮಾಡಲಾಗಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತದ (ಎಸ್‌ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರಬಿಂದಾ ಪಾಧಿ ತಿಳಿಸಿದ್ದಾರೆ.
ಪುರಿಯ ರಾಜ ಗಜಪತಿ ಮಹಾರಾಜ್, ಎಸ್‌ಜೆಟಿಎ ಮತ್ತು ಭಂಡಾರ್ ಮೇಕಪ್ ಸೇವಕರ ಬಳಿ ಇರಿಸಲಾದ ಕೀಲಿಗಳೊಂದಿಗೆ ಬೀಗಗಳನ್ನು ತೆರೆದ ನಂತರ ನಾವು ರತ್ನ ಭಂಡಾರ್‌ನ ಹೊರ ಕೋಣೆಯನ್ನು ಪ್ರವೇಶಿಸಿದ್ದೇವೆ ಎಂದಿದ್ದಾರೆ.
ಸದ್ಯ ರತ್ನ ಭಂಡಾರದಲ್ಲಿ ಸಿಕ್ಕಿರುವ ಆಭರಣಗಳು, ಅಪರೂಪದ ರತ್ನಗಳ ಮೌಲ್ಯಮಾಪವನ್ನು ಇನ್ನು ಮಾಡಿಲ್ಲ. ಏನೆಲ್ಲಾ ಸಿಕ್ಕಿದೆ ಎನ್ನುವ ಬಗ್ಗೆ ಇನ್ನು ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ ಅಪಾರ ಪ್ರಮಾಣದ ಸಂಪತ್ತು ಇರುವುದು ಮಾತ್ರ ಸ್ಪಷ್ಟವಾಗಿದೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಸಾರ್ವಜನಿಕವಾಗಿ ಮಾಹಿತಿ ನೀಡುವ ಸಾಧ್ಯತೆ ಇದೆ.












Click it and Unblock the Notifications