ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್.. ಇದೀಗ ಶಾವ್ನಾ ಪಾಂಡ್ಯ. ಯಾರೀಕೆ?

Subscribe to Oneindia Kannada

ಬೆಂಗಳೂರು, ಫೆಬ್ರವರಿ 10: ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಇಲ್ಲೀವರೆಗೆ ಕೇವಲ ಇಬ್ಬರು ಭಾರತೀಯ ಮೂಲದ ಮಹಿಳೆಯರಷ್ಟೆ ಅಂತರಿಕ್ಷದ ಅಟ್ಟಳಿಗೆ ಏರಿದ್ದಾರೆ. ಆದರೆ ಮರಳಿ ಬಂದಿದ್ದು ಓರ್ವಾಕೆ ಮಾತ್ರ.[ಬಾಹ್ಯಾಕಾಶದಿಂದ ಭುವಿಗಿಳಿದ ಸುನೀತಾ ವಿಲಿಯಮ್ಸ್]

ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಮರಳಿ ಬರುವಾಗ ದುರಂತ ಅಂತ್ಯ ಕಂಡ ಕಲ್ಪನಾ ಚಾವ್ಲಾ ನಮ್ಮೆಲ್ಲರ ನೆನಪಿನಿಂದ ಇನ್ನೂ ಮಾಸಿಲ್ಲ. ಇದಾದ ಬಳಿಕ ಸುನಿತಾ ವಿಲಿಯಮ್ಸ್ ಆ ಸಾಧನೆ ಮಾಡಿದ್ದರು. ಇದೀಗ ಭಾರತ ಮೂಲದ ಮೂರನೇ ಮಹಿಳೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲಿದ್ದಾರೆ. ಈಕೆಯ ಹೆಸರು ಶಾವ್ನಾ ಪಾಂಡ್ಯ. ಸುಮಾರು 12 ವರ್ಷಗಳ ನಂತರ ಭಾರತ ಮೂಲದ ಮಹಿಳೆಯೊಬ್ಬರ ಕೈಗೊಳ್ಳುತ್ತಿರುವ ಅಂತರಿಕ್ಷ ಯಾತ್ರೆ ಇದಾಗಿದೆ.[ಫೆ. 15ಕ್ಕೆ ಇಸ್ರೊದಿಂದ 104 ಉಪಗ್ರಹಗಳ ಮೆಗಾ ಉಡಾವಣೆ]

1997ರಲ್ಲಿ ಕಲ್ಪನಾ ಚಾವ್ಲಾ

1997ರಲ್ಲಿ ಕಲ್ಪನಾ ಚಾವ್ಲಾ

1997ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತ ಮೂಲದ ಮಹಿಳೆಯೊಬ್ಬರು ಬಾಹ್ಯಾಕಾಶಕ್ಕೆ ಹೋಗಿದ್ದರು; ಆಕೆ ಕಲ್ಪನಾ ಚಾವ್ಲಾ. ಅಮೆರಿಕಾದ ಬಾಹ್ಯಾಕಾಶ ನೌಕೆ ಕೊಲಂಬಿಯಾ ಆಕೆಯನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿತ್ತು. ಆದರೆ ಆಕೆ ಅದೇ ಕೊಲಂಬಿಯಾದಲ್ಲಿ ವಾಪಾಸ್ ಬರುವಾಗ ಅವಘಡ ನಡೆದು ದುರಂತ ಅಂತ್ಯವಾದರು.

2007ರಲ್ಲಿ ಸುನಿತಾ ಪಯಣ

2007ರಲ್ಲಿ ಸುನಿತಾ ಪಯಣ

ಕಲ್ಪನಾ ಚಾವ್ಲಾ ನಂತರ ಮತ್ತೆ ಭಾರತೀಯಳೊಬ್ಬಳು ಬಾಹ್ಯಾಕಾಶಕ್ಕೆ ಹೋಗಲು ಬರೋಬ್ಬರಿ 9 ವರ್ಷ ಬೇಕಾಯಿತು. ಸುನಿತಾ ವಿಲಿಯಮ್ಸ್ 2006ರಲ್ಲಿ ಎರಡನೇ ಭಾರತೀಯ ಮಹಿಳೆಯಾಗಿ ಬಾಹ್ಯಾಕಾಶಕ್ಕೆ ಕಾಲಿಟ್ಟರು. ಅಮೆರಿಕಾದ ಬಾಹ್ಯಾಕಾಶ ನೌಕೆ ಡಿಸ್ಕವರಿಯಲ್ಲಿ ಈಕೆ ಪ್ರಯಾಣ ಮಾಡಿದ್ದರು.

ಇದೀಗ ಶಾವ್ನಾ ಪಾಂಡ್ಯ

ಇದೀಗ ಶಾವ್ನಾ ಪಾಂಡ್ಯ

2018ರಲ್ಲಿ ಶಾವ್ನಾ ಪಾಂಡ್ಯಾ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ. ಸರಿ ಸುಮಾರು 12 ವರ್ಷಗಳ ನಂತರ ಭಾರತದ ಮಹಿಳೆಯೊಬ್ಬರು ಈ ಸಾಧನೆ ಮಾಡುತ್ತಿದ್ದಾರೆ. ಅಂದ ಹಾಗೆ ಈಕೆ ಬಾಹ್ಯಾಕಾಶಕ್ಕೆ ಕಾಲಿಡುತ್ತಿರುವ ಕೇವಲ ಮೂರನೇ ಭಾರತೀಯ ಮೂಲದ ಮಹಿಳೆಯಾಗಲಿದ್ದಾರೆ.

 3200ರಲ್ಲಿ ಇಬ್ಬರು

3200ರಲ್ಲಿ ಇಬ್ಬರು

ಅಂತರಿಕ್ಷ ಯಾತ್ರೆಗಾಗಿ ಒಟ್ಟು 3200 ಜನರ ಅಂತಿಮ ಪಟ್ಟಿಯಲ್ಲಿ ಇಬ್ಬರನ್ನಷ್ಟೆ ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಶಾವ್ನಾ ಕೂಡಾ ಒಬ್ಬರು. ಎಂಟು ಜನ ಸಹ ಗಗನಯಾತ್ರಿಗಳೊಂದಿಗೆ ಶಾವ್ನಾ ಅಂತರಿಕ್ಷ ಯಾತ್ರೆ ಕೈಗೊಳ್ಳಲಿದ್ದಾರೆ.

ಮುಂಬೈ ಮೂಲ

ಮುಂಬೈ ಮೂಲ

ಶಾವ್ನಾ ತಂದೆ ತಾಯಿ ಮುಂಬೈನವರು. ಆಕೆ ಹುಟ್ಟಿದ್ದು ಕೆನಡಾದ ಆಲ್ಬರ್ಟಾದಲ್ಲಿ. ವೃತ್ತಿಯಿಂದ ಶಾವ್ನಾ ನ್ಯೂರೋ ಸರ್ಜನ್; ಆಲ್ಬರ್ಟಾ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಡು, ಬರವಣಿಗೆ ಸೇರಿದಂತೆ ಹಲವು ಹವ್ಯಾಸಗಳು ಈಕೆಗಿವೆ. ಫ್ರೆಂಚ್, ಸ್ಪ್ಯಾನಿಷ್, ರಷ್ಯಾದ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ.

ನ್ಯೂರೋಲಜಿ ಕಲಿತಿದ್ದೇಕೆ?

ನ್ಯೂರೋಲಜಿ ಕಲಿತಿದ್ದೇಕೆ?

ಶಾವ್ನಾಗೆ ವೈದ್ಯಕೀಯ ಮತ್ತು ಬಾಹ್ಯಾಕಾಶದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಬಾಹ್ಯಾಕಾಶಕ್ಕೆ ಕಾಲಿಟ್ಟ ಮೊದಲ ಮಹಿಳೆ ರೋಬರ್ಟಾ ಬೊಂಡಾರ್ ನ್ಯೂರೋ ಒಪ್ತಾಮೋಲಾಜಿಸ್ಟ್ ಆಗಿದ್ದರಿಂದ ಈಕೆಯೂ ನ್ಯೂರಾಲಜಿ ಆಯ್ದುಕೊಂಡರು. ನ್ಯೂರಾಲಜಿಯಲ್ಲಿ ಬಿ.ಎಸ್ಸಿ ಪದವಿ ಪಡೆದು ಎಂ.ಎಸ್ಸಿಗಾಗುವಾಗ ಬಾಹ್ಯಾಕಾಶ ವಿಜ್ಞಾನವನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ವಿಶ್ವವಿದ್ಯಾಲಯದಿಂದ ಪಡೆದುಕೊಂಡರು. ಮುಂದೆ ಮೆಡಿಸಿನ್ ವಿಭಾಗದಲ್ಲಿ ಎಂ.ಡಿ ಅಧ್ಯಯನವನ್ನೂ ನಡೆಸಿದರು. ವಿಚಿತ್ರ ಎಂದರೆ ಈಕೆ ಮೆಡಿಕಲ್ ಶಾಲೆ ಮತ್ತು ಸ್ಪೇಸ್ ಪ್ರಾಜೆಕ್ಟ್ ಗೆ ಒಟ್ಟಿಗೆ ಅರ್ಜಿ ಹಾಕಿದ್ದರು.

ಭರ್ಜರಿ ತಯಾರಿ

ಭರ್ಜರಿ ತಯಾರಿ

2018ರ ಬಾಹ್ಯಾಕಾಶ ಯೋಜನೆಗೆ ಶಾವ್ನಾ ಭರ್ಜರಿ ತಯಾರಿಯಲ್ಲಿದ್ದಾರೆ. 'ಪೋಲಾರ್ ಸಬ್ ಆರ್ಬಿಟಲ್ ಸೈನ್ಸ್' ಪ್ರಾಜೆಕ್ಟ್ ಹೆಸರಿನಲ್ಲಿ ಅವರ ಕಲಿಕೆ ಸಾಗುತ್ತಿದೆ. ಅಮೆರಿಕಾದ ಎಂಬ್ರಿ ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯದಲ್ಲಿ ಈ ತರಬೆತಿ ನಡೆಯುತ್ತಿದ್ದು ಅಂತರಿಕ್ಷ ಉಡುಗೆಗಳನ್ನು ತೊಟ್ಟು ಆಕೆಗೆ ತರಬೇತಿ ನೀಡಲಾಗುತ್ತಿದೆ.

 ನೀರಿನಾಳದಲ್ಲಿ 100 ದಿನ

ನೀರಿನಾಳದಲ್ಲಿ 100 ದಿನ

ಇದರ ಜತೆ ಜತೆಗೆ 100 ದಿನಗಳ ನೀರಿನಾಳದ ಸಂಶೋದನೆಯಲ್ಲೂ ಈಕೆ ತೊಡಗಿಸಿಕೊಂಡಿದ್ದಾರೆ. ಅಮೆರಿಕಾದ ಪ್ಲೋರಿಡಾದಲ್ಲಿರುವ ವಿಶ್ವದ ಏಕೈಕ ನೀರನಾಳದ ಪ್ರಯೋಗಾಲಯ 'ಅಕ್ವೇರಿಯಸ್ ಸ್ಪೇಟ್ ರೀಸರ್ಚ್ ಫೆಸಿಲಿಟಿ' ಕೇಂದ್ರದಲ್ಲಿ ಆಕೆ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಂಬೈ ಭೇಟಿ

ಮುಂಬೈ ಭೇಟಿ

ಇತ್ತೀಚೆಗಷ್ಟೆ ಶಾವ್ನ ಪಾಂಡ್ಯ ಮುಂಬೈಗೆ ಬಂದು ತಮ್ಮ ಕುಟುಂಬವನ್ನು ಭೇಟಿಯಾಗಿ ಹೋಗಿದ್ದರು. ಬಂದವರೇ ಶಾಲಾ ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನ. ನಾಯಕತ್ವ, ಅನ್ವೇಷಣೆಗಳ ಬಗ್ಗೆ ಪಾಠ ಮಾಡಿ ಹೋಗಿದ್ದಾರೆ.

ಸಾಧಕಿಯ ಮಾತು

ಸಾಧಕಿಯ ಮಾತು

'ನೀವು ಆಸಕ್ತಿ ಮತ್ತು ಬಧ್ಧತೆಗೆ ಆದ್ಯತೆ ನೀಡಿದ್ದೇ ಆದಲ್ಲಿ, ನೀವು ಎಷ್ಟು ಸಾಧಿಸಬಹುದು ಎಂಬುದೇ ಸುಂದರವಾದುದು' ಎನ್ನುತ್ತಾರೆ ಶಾವ್ನ ಪಾಂಡ್ಯ.

ನಾನು ಸಣ್ಣವಳಾಗಿದ್ದಾಗ ಬಾಹ್ಯಾಕಾಶವನ್ನು ಪ್ರೀತಿಸುತ್ತಿದ್ದೆ, ನಕ್ಷತ್ರಗಳನ್ನು ಇಷ್ಟಪಡುತ್ತಿದ್ದೆ. ನನಗೆ 10 ವರ್ಷಗಳಾದಾಗ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ವಿಪರೀತ ಮೋಹ ಬೆಳೆಯಿತು ಎನ್ನುತ್ತಾರೆ ಶಾವ್ನಾ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In 2018, Indian-origin Shawna Pandya may become only the third woman of Indian origin to go to space. In November 1997, Kalpana Chawla became the first woman of Indian origin to travel in space, but unfortunately she did not came back. In December 2006, Sunita Williams became the second woman to venture into space.
Please Wait while comments are loading...