ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ ಸಂಬಂಧದಲ್ಲಿ ಬಿರುಕು- ದೇಹ ತುಂಡಾಗಿಸಿ ಬರ್ಬರ ಹತ್ಯೆ ಪ್ರಕರಣಗಳ ಪಟ್ಟಿ ಇಲ್ಲಿದೆ

|
Google Oneindia Kannada News

ಕೊರೊನಾ ಬಳಿಕ ಅತ್ಯಂತ ಕ್ರೂರವಾಗಿ ಹತ್ಯೆ ಪ್ರಕರಣಗಳು ದೇಶದಲ್ಲಿ ನಡೆಯುತ್ತಿವೆ. ಅದರಲ್ಲೂ ಈ ವರ್ಷ ನಡೆದ ಭೀಕರ ಹತ್ಯೆಗಳು ಭೀತಿಯನ್ನು ಹೆಚ್ಚಿಸಿವೆ. ಕೊಲೆ ಮಾಡುವುದು ಮಾತ್ರವಲ್ಲದೆ ದೇಹವನ್ನು ತುಂಡುಗಳಾಗಿ ಕತ್ತರಿಸಿ ಬೀಸಾಡಿದರೂ ಪಶ್ಚಾತ್ತಾಪ ಕೊಲೆಗಾರನಲ್ಲಿ ಕಂಡು ಬಾರದ ಹಂತವನ್ನು ನಾವು ತಲುಪಿದ್ದು ನಿಜಕ್ಕೂ ವಿಷಾದನೀಯ. ಹೆಚ್ಚಿನ ಪ್ರಕರಣಗಳು ಪ್ರೀತಿ ಸಂಬಂಧದಲ್ಲಿ ಬಿರುಕಿನಿಂದಾಗಿ ಅನುಮಾನದಿಂದಾಗಿ ಸಂಭವಿಸಿದ ಘಟನೆಗಳಾಗಿವೆ.

Year Ender 2022 : ಕರ್ನಾಟಕದಲ್ಲಿ ಈ ವರ್ಷ ನಡೆದ ರಾಜಕೀಯ ಬೆಳವಣೆಗೆಗಳುYear Ender 2022 : ಕರ್ನಾಟಕದಲ್ಲಿ ಈ ವರ್ಷ ನಡೆದ ರಾಜಕೀಯ ಬೆಳವಣೆಗೆಗಳು

ದೇಶದಲ್ಲಿ ಈ ವರ್ಷ ನಡೆದ ಭೀಕರ ಹತ್ಯೆಗಳ ಪಟ್ಟಿಯಲ್ಲಿ ದೆಹಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇತ್ತೀಚಿನದ್ದಾಗಿದೆ. ಪ್ರಿಯಕರ ಅಫ್ತಾಬ್ ಪೂನವಾಲಾ ಎಂಬಾತ ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು 35 ತುಂಡುಗಳಾಗಿ ಮಾಡಿದ್ದನು. ಜೊತೆಗೆ ಕೆಲ ದಿನಗಳ ವರೆಗೆ ಅದನ್ನು ಫ್ರಿಡ್ಜ್‌ನಲ್ಲಿರಿಸಿ ಬಳಿಕ ಅದನ್ನು ಅರಣ್ಯದಲ್ಲಿ ಎಸೆದಿದ್ದನು. ಪ್ರಕರಣದಲ್ಲಿ ಅಫ್ತಾಬ್ ಪೂನವಾಲಾನನ್ನು ಬಂಧಿಸಲಾಗಿದೆ.

ದೇಹ ತುಂಡಾಗಿಸಿ ಬರ್ಬರ ಹತ್ಯೆ ಪ್ರಕರಣಗಳ ಪಟ್ಟಿ

ದೇಹ ತುಂಡಾಗಿಸಿ ಬರ್ಬರ ಹತ್ಯೆ ಪ್ರಕರಣಗಳ ಪಟ್ಟಿ

ಶ್ರದ್ಧಾ ಹತ್ಯೆಯ ನಂತರ, ದಿಲ್ದಾರ್ ಅನ್ಸಾರಿ ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಬುಡಕಟ್ಟು ಹುಡುಗಿ ರೂಬಿಕಾ ಪಹಾಡಿಯನ್ನು ಕೊಂದು 50 ತುಂಡುಗಳನ್ನಾಗಿ ಕತ್ತರಿಸಿ ಕಾಡುಗಳಲ್ಲಿ ಎಸೆದಿದ್ದನು ಎಂಬುವ ಸುದ್ದಿ ಇನ್ನೂ ಇತ್ಯರ್ಥವಾಗಿಲ್ಲ.

ಮತ್ತೊಂದೆಡೆ, ಜೈಪುರದಲ್ಲಿ ಸೋದರಳಿಯನೊಬ್ಬ ತನ್ನ ಚಿಕ್ಕಮ್ಮನನ್ನು ಕೊಂದು ಆಕೆಯ ಮೃತ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಸೂಟ್ಕೇಸ್ನಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾನೆ. ಇದಕ್ಕೂ ಮುನ್ನ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮೋದಿ ನಗರ ಪ್ರದೇಶದಲ್ಲಿ ಭೂಮಾಲೀಕ ಉಮೇಶ್ ಎಂಬಾತ ಅಂಕಿತ್ ಖೋಕರ್‌ನನ್ನು ಕತ್ತು ಹಿಸುಕಿ ಕೊಂದು ಆತನ ಮೃತದೇಹವನ್ನು ತುಂಡು ತುಂಡಾಗಿ ಎಸೆದಿದ್ದನು.

ದೆಹಲಿಯಲ್ಲಿಯೇ ಮಹಿಳೆ ಪೂನಂ ತನ್ನ ಮಗ ದೀಪಕ್‌ನೊಂದಿಗೆ ಪತಿ ಅಂಜನ್ ದಾಸ್‌ನನ್ನು ಕೊಂದು, ತನ್ನ ಗಂಡನ ಮೃತ ದೇಹವನ್ನು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ನಂತರ ಆ ತುಂಡುಗಳನ್ನು ಒಂದೊಂದಾಗಿ ಕಾಡಿಗೆ ಚರಂಡಿಗೆ ಎಸೆದಿದ್ದಳು.

ಮಾತ್ರವಲ್ಲದೆ ತನ್ನ ವಿವಾಹಿತ ಗೆಳತಿ ಜ್ಯೋತಿಯನ್ನು ಭೇಟಿಯಾಗಲು ಬಂದಿದ್ದ ವಿಕಾಸ್ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು 6 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಎಸೆದಿರುವ ಹೃದಯವಿದ್ರಾವಕ ಸುದ್ದಿ ಬಿಹಾರದ ನಳಂದಾದಲ್ಲಿ ನಡೆದಿದೆ. ಜ್ಯೋತಿ ಭಯದಿಂದಲೇ ತನ್ನ ಗಂಡನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದಾಗ ಅಚ್ಚರಿಯಾಗಿತ್ತು.

ಇವುಗಳು ಮಾಧ್ಯಮಗಳು ಮತ್ತು ಪೊಲೀಸರ ಚುರುಕಿನಿಂದಾಗಿ ದೇಶದ ಗಮನಕ್ಕೆ ಬಂದ ಕೆಲವು ಘಟನೆಗಳಾಗಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ. ಈ ಆಘಾತಕಾರಿ ಘಟನೆಗಳು ಮಾನವರು ಮೊದಲಿಗಿಂತ ಹೆಚ್ಚು ಕ್ರೂರ, ನಿರ್ದಯ ಮತ್ತು ಸಂವೇದನಾಶೀಲರಾಗಿರುವುದನ್ನು ಸಾಬೀತುಪಡಿಸುತ್ತವೆ. ಲಿಂಗ ಭೇದವಿಲ್ಲದೆ, ಎಲ್ಲರೂ ಇಂತಹ ಘೋರ ಕೊಲೆಗಳನ್ನು ನಡೆಸುತ್ತಿದ್ದಾರೆ ಮತ್ತು ಯಾವುದೇ ಅಪರಾಧಿಗಳು ಸಿಕ್ಕಿಬಿದ್ದಾಗ ತಮ್ಮ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲ ಎನ್ನುವುದು ಮತ್ತು ಆಶ್ಚರ್ಯಕರ ಸಂಗತಿ.

ಅಷ್ಟಕ್ಕೂ, ಈ ಕೊಲೆಗಾರರ ​​ಮೇಲೆ ಯಾವ ರೀತಿಯ ಮನೋವಿಜ್ಞಾನವು ಪ್ರಾಬಲ್ಯ ಹೊಂದಿದೆ? ಇಷ್ಟೊಂದು ಭೀಕರ ಹತ್ಯೆಯನ್ನು ಹೇಗೆ ನಡೆಸಲಾಗುತ್ತಿದೆ? ಕೊಲ್ಲುವ ವಿಶಿಷ್ಟ ವಿಧಾನಗಳನ್ನು ಜನರು ಹೇಗೆ ಕಲಿಯುತ್ತಿದ್ದಾರೆ? ಇವುಗಳ ಕೆಲವು ಪ್ರಶ್ನೆಗಳ ಉತ್ತರಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ನಿಜವಾದ ಅಪರಾಧಿಗಳೇ?

ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ನಿಜವಾದ ಅಪರಾಧಿಗಳೇ?

ಅಫ್ತಾಬ್ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ, ಕೋಣೆಯಲ್ಲಿ ಬಿದ್ದಿದ್ದ ರಕ್ತವನ್ನು ತೊಳೆದ ಕ್ರೌರ್ಯ ನಿಜಕ್ಕೂ ಭಯಾನಕ. ಈ ಎಲ್ಲದಕ್ಕೂ ಸ್ಫೂರ್ತಿ ಯಾವುದು ಎಂದರೆ ಅಮೆರಿಕದ ವೆಬ್ ಸರಣಿ ಡೆಕ್ಸ್ಟರ್. ಅದನ್ನು ನೋಡಿದ ಅಫ್ತಾಬ್ ಕೊಲೆಯಿಂದ ಹಿಡಿದು ಪೊಲೀಸರನ್ನು ದಾರಿ ತಪ್ಪಿಸುವವರೆಗೆ ಯೋಜನೆ ರೂಪಿಸಿದನು. 90 ರ ದಶಕದಲ್ಲಿ ನಟ ಶಾರುಖ್ ಖಾನ್ ಅವರು ಅಭಿನಯದ 'ಬಾಜಿಗರ್' ಸಿನಿಮಾದಲ್ಲಿ ಅವರು ತಮ್ಮ ಗೆಳತಿಯನ್ನು ಕೊಂದು ನಂತರ ಸಾಕ್ಷ್ಯವನ್ನು ನಾಶಪಡಿಸಿದರು. ಬಳಿಕ ಆಕೆಯ ಸ್ನೇಹಿತೆಯನ್ನೂ ಕೊಂದು ನಂತರ ಆಕೆಯ ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿ ಸಮುದ್ರದಲ್ಲಿ ಎಸೆದರು. ಚಿತ್ರದಲ್ಲಿನ ಅಭಿನಯವು ಶಾರುಖ್‌ಗೆ ಖ್ಯಾತಿಯನ್ನು ತಂದುಕೊಟ್ಟಿರಬಹುದು ಆದರೆ ಅಂದಿನಿಂದ ಇಲ್ಲಿಯವರೆಗೆ ಮಹಿಳೆಯರು ಮತ್ತು ಪುರುಷರು ಸೂಟ್‌ಕೇಸ್‌ಗಳಲ್ಲಿ ಸತ್ತಿದ್ದಾರೆ.

ಕೊಲ್ಲುವ ವಿಶಿಷ್ಟ ವಿಧಾನಗಳನ್ನು ಜನರು ಹೇಗೆ ಕಲಿಯುತ್ತಿದ್ದಾರೆ?

ಕೊಲ್ಲುವ ವಿಶಿಷ್ಟ ವಿಧಾನಗಳನ್ನು ಜನರು ಹೇಗೆ ಕಲಿಯುತ್ತಿದ್ದಾರೆ?

ಭಾರತದಲ್ಲಿ ಲವ್ ಜಿಹಾದ್‌ಗೆ ಬಲಿಯಾದ ಹಿಂದೂ ಹುಡುಗಿಯರು ಸೂಟ್‌ಕೇಸ್‌ಗಳಲ್ಲಿ ಸತ್ತಿದ್ದಾರೆ ಅಥವಾ ಛಿದ್ರಗೊಂಡಿದ್ದಾರೆ ಎನ್ನಲಾಗುತ್ತಿದೆ. ವಧ್ (Vadh) ಎಂಬ ಇತ್ತೀಚಿನ ಚಲನಚಿತ್ರದಲ್ಲಿ, ಒಬ್ಬ ತಂದೆ ಸುಲಿಗೆ ಮಾಡುವ ಗೂಂಡಾನನ್ನು ಕೊಂದು ಅವನ ದೇಹವನ್ನು ತುಂಡುಗಳಾಗಿ ಮಾಡಿ ಎಸೆದು, ಅವನ ಬಟ್ಟೆಗಳನ್ನು ಸುಟ್ಟು ಮತ್ತು ಅವನ ಮೂಳೆಗಳನ್ನು ಹಿಟ್ಟಿನ ಗಿರಣಿಯಲ್ಲಿ ಯಾವುದೇ ಪುರಾವೆಗಳಿಲ್ಲದೆ ಪುಡಿಮಾಡುತ್ತಾನೆ.

ಚಲನಚಿತ್ರಗಳು ಸಮಾಜದ ಕನ್ನಡಿ ಎಂದು ಹೇಳುತ್ತೇವೆ. ಸಿನಿಮಾಗಳು ಸಮಾಜದಲ್ಲಿ ಏನಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಈಗ ಸಮಾಜ ಚಲನಚಿತ್ರಗಳಿಂದ ಪಾಠವನ್ನು ಕಲಿಯುತ್ತಿದೆ. ಚಲನಚಿತ್ರಗಳು ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಹೆಚ್ಚು ಪುಷ್ಠಿ ನೀಡುವಂತೆ ರಚನೆಗೊಳ್ಳುತ್ತಿವೆ. ಇಂತಹ ಪರಿಸ್ಥಿತಿ ಚಿಂತಾಜನಕ ಮಾತ್ರವಲ್ಲ, ಸ್ಫೋಟಕವಾಗಿದೆ.

ಭೀಕರ ಕೊಲೆಗಳ ಹಿಂದಿರುವ ಮನೋವಿಜ್ಞಾನ

ಭೀಕರ ಕೊಲೆಗಳ ಹಿಂದಿರುವ ಮನೋವಿಜ್ಞಾನ

ಉತ್ತಮ ಜೀವನ ನಡೆಸುತ್ತಿರುವ, ಸಂಬಂಧದಲ್ಲಿ ಸಂತೋಷವಾಗಿರುವ, ಕೆಲಸ ಮಾಡುವ, ಆರ್ಥಿಕವಾಗಿ ಸಮೃದ್ಧವಾಗಿರುವ ಸಾಮಾನ್ಯ ನಾಗರಿಕನು ಕೋಪದಲ್ಲಿ ಮಾರಣಾಂತಿಕ ಹೆಜ್ಜೆ ಇಟ್ಟರೆ ಅದು ತಪ್ಪು ಎಂದು ಪರಿಗಣಿಸಬಹುದು. ಆದರೆ ಚೆನ್ನಾಗಿ ಯೋಚಿಸಿ ತಂತ್ರ ಮತ್ತು ಪಿತೂರಿ ಮಾಡಿ, ಮೊದಲು ಕೊಂದು ನಂತರ ಮೃತದೇಹಗಳನ್ನು ತುಂಡರಿಸಿ, ತೊಳೆಯುವುದು, ಫ್ರಿಡ್ಜ್‌ನಲ್ಲಿ ಇಡುವುದು, ಕಾಡುಗಳಲ್ಲಿ ಮತ್ತು ಚರಂಡಿಗಳಲ್ಲಿ ಎಸೆಯುವುದು ಮತ್ತು ನಂತರ ಪೊಲೀಸರನ್ನು ದಾರಿ ತಪ್ಪಿಸುವುದು ಇವು ಕೆಲವು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳಾಗಿವೆ.

ಇಂತಹ ದುಷ್ಕೃತ್ಯದ ನಂತರ ಒಬ್ಬ ಸಾಮಾನ್ಯ ವ್ಯಕ್ತಿ ಭಯಪಡುತ್ತಾನೆ, ಆದರೆ ಮೇಲಿನ ಎಲ್ಲಾ ಉದಾಹರಣೆಗಳ ಅಪರಾಧಿಗಳಲ್ಲಿ ಯಾರೂ ತಮ್ಮ ಕಾರ್ಯಗಳಿಗೆ ವಿಷಾದಿಸುವುದಿಲ್ಲ. ಇದು ಅಂತಹ ಮಾನಸಿಕ ಕಾಯಿಲೆಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಭಯದಿಂದಲೇ ಹತ್ಯೆ ಮಾಡಿದರೂ ಸಾಮಾನ್ಯ ಮನುಷ್ಯ ಊಹಿಸಿದ ರೀತಿಯಲ್ಲಿ ಹತ್ಯೆ ಮಾಡುತ್ತಿದ್ದಾನೆ.

ಒಬ್ಬ ಸಾಮಾನ್ಯ ವ್ಯಕ್ತಿ ಇಷ್ಟು ಅನಾಗರಿಕನಾಗಲು ಸಾಧ್ಯವಿಲ್ಲ. ಅಪರಾಧಿಯ ಮಾನಸಿಕ ಸ್ಥಿತಿ ಏನು? ಅದು ಸಾಮಾನ್ಯವಾಗಿದಿಯೇ ಅಥವಾ ಅಸಹಜವಾಗಿದೆ? ಇದನ್ನು ಪತ್ತೆ ಮಾಡುವುದು ಪೊಲೀಸರ ಕೆಲಸ. ಆದರೆ ನಮ್ಮ ದೇಶದಲ್ಲಿ ಅಪರಾಧಗಳ ಮಾನಸಿಕ ಸ್ಥಿತಿಯ ಬಗ್ಗೆ ಅವಲೋಕ ಮಾಡುವ ಮನಶ್ಶಾಸ್ತ್ರಜ್ಞರ ಪ್ರಮಾಣ ತುಂಬಾ ಕಡಿಮೆಯಾಗಿದೆ. ಆದರೆ ವಿದೇಶಗಳಲ್ಲಿ ಸಣ್ಣ ಅಪರಾಧಗಳನ್ನು ಪರಿಹರಿಸಲು ಮನಶ್ಶಾಸ್ತ್ರಜ್ಞರು ಅಪರಾಧದ ಸ್ಥಳಕ್ಕೆ ಪೊಲೀಸರೊಂದಿಗೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ಘೋರ ಅಪರಾಧ ಎಸಗುವ ಅಪರಾಧಿಗಳ ಮನಃಶಾಸ್ತ್ರದ ಬಗ್ಗೆ ದೇಶದಲ್ಲಿ ಸಂಶೋಧನೆ ನಡೆದಿರುವುದು ತೀರಾ ಕಡಿಮೆ. ಹೀಗಾಗಿ ಕ್ರೂರ ಅಪರಾಧಿಗಳ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಳ್ಳುವು ಬಹುಮುಖ್ಯವಾದ ಕಾರ್ಯವಾಗಿದೆ.

English summary
Here is the list of gruesome murders in the country this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X