ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಶೀತ ಅಲೆಯ ಸ್ಥಿತಿಗತಿ ಇಲ್ಲಿದೆ
ಕರ್ನಾಟಕದ ಹಲವೆಡೆ ಚಳಿ ಹೆಚ್ಚಾಗುತ್ತಲೇ ಇದ್ದು ದಟ್ಟ ಮಂಜು ಆವರಿಸಿದೆ. ಹೀಗಾಗಿ ಕೆಲ ದಿನಗಳಿಂದ ಕರ್ನಾಟಕದಲ್ಲಿ ತಾಪಮಾನ ಕುಸಿಯುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಬೆಂಗಳೂರಿನ ಹಲವೆಡೆ ಶೀತ ಅಲೆ ಅಧಿಕವಾಗಿದೆ.
ಬೆಂಗಳೂರಿನಲ್ಲಿಂದು ಹಲವೆಡೆ ದಟ್ಟ ಮಂಜು ಆವರಿಸಿದ್ದು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆಯನ್ನು ನೀಡಲಾಗಿದೆ. ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಇದೆ.
ಶೀತ ಮಾರುತಗಳು ಅಪ್ಪಳಿಸುವ ಕಾರಣದಿಂದಾಗಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಚಳಿ ವಾತಾವರಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೊತೆಗೆ ದೇಹ ಪೂರ್ತಿ ಕವರ್ ಮಾಡುವ ಬೆಚ್ಚಿಗಿನ ಬಟ್ಟೆಗಳು, ಸಾಧ್ಯವಾದಾಗ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ.
ದೆಹಲಿಯಲ್ಲಿ ದಟ್ಟ ಮಂಜು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದೆಹಲಿಯಲ್ಲಿ ಶೀತ ಅಲೆ ಕಣ್ಣಾಮುಚ್ಚಾಲೆ ಆಟವಾಡಿದಂತೆ ಕಾಣುತ್ತಿದೆ. ಒಂದು ದಿನ ಮಂಜಿನ ವಾತವಾರಣ ಕಡಿಮೆ ಇದ್ದರೆ ಮತ್ತೊಂದು ದಿನ ಚಳಿಯ ಅಲೆ ಅಧಿಕವಾಗಿರುತ್ತದೆ. ಹವಾಮಾನ ಇಲಾಖೆ ಪ್ರಕಾರ ಜನವರಿ 15ರಿಂದ 19ರ ನಡುವೆ ಉತ್ತರ ಭಾರತದಲ್ಲಿ ಮೂಳೆ ಕೊರೆಯುವ ಚಳಿ ಕಾಣಿಸಲಿದೆ.

ರೈಲುಗಳು ಮತ್ತು ವಿಮಾನಗಳು ತಡ
ಶನಿವಾರದಿಂದ ದೆಹಲಿಯ ಹವಾಮಾನವು ತುಂಬಾ ಕೆಟ್ಟದಾಗಿ ಬದಲಾಗಬಹುದು ಮತ್ತು ಇಲ್ಲಿ ಕನಿಷ್ಠ ತಾಪಮಾನವು ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ ಇರಬಹುದು. ಆದ್ದರಿಂದ ರಾಜಸ್ಥಾನ ಮತ್ತು ಯುಪಿಯ ಕೆಲವು ಜಿಲ್ಲೆಗಳಲ್ಲಿಯೂ ಇದೇ ಆಗಬಹುದು ಎಂದು ಐಎಂಡಿ ಹೇಳಿದೆ.
ಹೀಗಾಗಿ ಇಂದು ದೆಹಲಿಯಲ್ಲಿ ಮತ್ತೆ ದಟ್ಟವಾದ ಮಂಜು ಕಾಣಿಸಿಕೊಂಡಿದೆ. ಮಂಜಿನಿಂದಾಗಿ ರೈಲುಗಳು ಮತ್ತು ವಿಮಾನಗಳು ತಡವಾಗಿ ಓಡಾಡುತ್ತಿವೆ. ಇದರಿಂದಾಗಿ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ/ಕಠ್ಮಂಡು, ದೆಹಲಿ-ಚಂಡೀಗಢ-ಕುಲ್ಲು, ದೆಹಲಿ-ಜೈಪುರ, ದೆಹಲಿ-ಧರ್ಮಶಾಲಾ-ಚಂಡೀಗಢ, ದೆಹಲಿ-ಶಿಮ್ಲಾ-ಧರ್ಮಶಾಲಾ, ದೆಹಲಿ-ಡೆಹ್ರಾಡೂನ್ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ.

ಕೆಲ ರಾಜ್ಯಗಳಲ್ಲಿ ಸುಧಾರಣೆ ಕಂಡ ಮಂಜು
ಇಂದು ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಇಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇಂದು ದೆಹಲಿಯಲ್ಲಿ ಕಡಿಮೆ ತಾಪಮಾನ 10 ಡಿಗ್ರಿ ಮತ್ತು ಗರಿಷ್ಠ ತಾಪಮಾನ 21 ಡಿಗ್ರಿ ಇರಬಹುದು.
ಅಂದಹಾಗೆ ಇಂದು ಮಂಜು ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಂಜು ಸ್ವಲ್ಪ ಸುಧಾರಣೆಯಾಗಿದೆ. ಆದರೆ ದೆಹಲಿಯಲ್ಲಿ ಮಾಲಿನ್ಯವು ಚಳಿಗಾಲದ ಜೊತೆಗೆ ಉತ್ತುಂಗದಲ್ಲಿದೆ.
ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 312 ಆಗಿದ್ದು, ಇದು ತುಂಬಾ ಕಳಪೆಯಾಗಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಇಂದು ಬೆಳಿಗ್ಗೆ ದೆಹಲಿಯ AQI ಸ್ಥಿತಿ ಹೀಗಿದೆ...

ದೆಹಲಿಯಲ್ಲಿ ವಾಯುಮಾಲಿನ್ಯ ಸ್ಥಿತಿಗತಿ
ಪಂಜಾಬಿ ಬಾಗ್, ದೆಹಲಿ - DPCC ಪಿತಮ್ ಪುರ 349 AQI
ಪುಸಾ, ದೆಹಲಿ - IMD ಪಶ್ಚಿಮ ದೆಹಲಿ 365 AQI
ಶಾದಿಪುರ, ದೆಹಲಿ - ಪಶ್ಚಿಮ ದೆಹಲಿ 371 AQI
ಮುಂಡ್ಕಾ, ದೆಹಲಿ - ಭೀಮ್ ನಗರ 369 AQI
ಪರ್ಪರ್ಗಂಜ್, ದೆಹಲಿ - 384 AQI
ಅಶೋಕ್ ವಿಹಾರ್, ದೆಹಲಿ - DPCC 354 AQI
ಲೋಧಿ ರಸ್ತೆ, ದೆಹಲಿ - 357 AQI

ದಕ್ಷಿಣ ಭಾಗದಲ್ಲಿ ಸದ್ಯದ ವಾತಾವರಣ
ಎನ್‌ಸಿಆರ್ ಕುರಿತು ಮಾತನಾಡುವುದಾದರೆ, ನೋಯ್ಡಾದಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಮತ್ತು ಗರಿಷ್ಠ ತಾಪಮಾನ 24 ಡಿಗ್ರಿ, ಗಾಜಿಯಾಬಾದ್‌ನಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಮತ್ತು ಗರಿಷ್ಠ ತಾಪಮಾನ 23 ಡಿಗ್ರಿ ಮತ್ತು ಗುರುಗ್ರಾಮ್‌ನಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಮತ್ತು ಗರಿಷ್ಠ ತಾಪಮಾನ 24 ಡಿಗ್ರಿ ಎಂದು ನಿರೀಕ್ಷಿಸಲಾಗಿದೆ.ಹಾಗಾಗಿ ದಕ್ಷಿಣ ಭಾಗದಲ್ಲಿ ಸದ್ಯಕ್ಕೆ ವಾತಾವರಣ ಶುಭ್ರವಾಗಿರಲಿದ್ದು, ಈಶಾನ್ಯ ಭಾಗದಲ್ಲಿ ಲಘು ಮಳೆಯಾಗುವ ನಿರೀಕ್ಷೆ ಇದೆ.












Click it and Unblock the Notifications