ನಾಸಾ ವಿಡಿಯೋದಲ್ಲಿ ದೇವರ ನಾಡು ಕೇರಳದ ಪ್ರವಾಹ
Recommended Video

ನವದೆಹಲಿ, ಆಗಸ್ಟ್ 23: ಕೇರಳದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಲೇ ಇದ್ದ ಧಾರಾಕಾರ ಮಳೆಯ ಉಪಗ್ರಹ ದಾಖಲೆಯನ್ನು ಆಧರಿಸಿ ನಾಸಾ(National Aeronautics and Space Administration) ಒಂದು ವಿಡಿಯೋ ಬಿಡುಗಡೆ ಮಾಡಿದೆ.
ಕಳೆದ ವಾರ ಸುರಿದ ಧಾರಾಕಾರ ಮಳೆಯನ್ನು ದಾಖಲಿಸಿರುವ ನಾಸಾ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ಕೇವಲ ಕೇರಳ ಮಾತ್ರವಲ್ಲದೆ, ಭಾರತದ ಹಲವೆಡೆ ಆಗಸ್ಟ್ 13 ರಿಂದ 20ರವರೆಗೆ ಸುರಿದ ಭಾರೀ ಮಳೆಯನ್ನು ಟ್ರ್ಯಾಕ್ ಮಾಡಿದೆ.

ನಾಸಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಳದಿ ಬಣ್ಣದಲ್ಲಿ ಕಾಣುವ ಸ್ಥಳಗಳು ಅತಿಯಾದ ಮಳೆಗೆ ತುತ್ತಾಗಿವೆ. ಪ್ರವಾಹಕ್ಕೆ ತುತ್ತಾದ ಕೇರಳ ಈ ವಿಡಿಯೋದಲ್ಲಿ ಹಳದಿ, ಕೆಂಪು ಬಣ್ಣದಲ್ಲಿ ಕಾಣಿಸುತ್ತಿದೆ. ಕಳೆದ ಒಂದು ವಾರದಲ್ಲಿ ಕೇರಳದಲ್ಲಿ ಸುಮಾರು 18.5 ಇಂಚು ಮಳೆಯಾಗಿದೆ ಎಂದು ನಾಸಾ ಹೇಳಿದೆ.
NASA provided estimates of the monsoon rainfall that affected India from Aug 13-20 https://t.co/v3VJFw0ZIz
— NASA Earth (@NASAEarth) August 21, 2018
ಈ ಮಳೆ ಡೇಟಾವನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಕಲೆಹಾಕಲಾಗಿದೆ.
ಕೇರಳದಲ್ಲಿ ಕಳೇದ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ, ಪ್ರವಾಹ ಉಂಟಾಗಿ ಇದುವರೆಗೂ 400 ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದ್ದು, ಕೇರಳವನ್ನು ಮತ್ತೆ ಮೊದಲಿನಂತೆ ಮಾಡಲು ಸಾಕಷ್ಟು ಸಮಯವೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications