ಬುಧವಾರದ ಹಲವು ಸುದ್ದಿ ಚಿತ್ರ ಸಹಿತ ನೋಡಿ
ಬೆಂಗಳೂರು, ಫೆ. 4: ದೇಶ ಹಾಗೂ ವಿದೇಶಗಳಲ್ಲಿ ಬುಧವಾರ ನಡೆದ ಹಲವು ಘಟನಾವಳಿಗಳ ಚಿತ್ರ ಸಹಿತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ.
ನವದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ, ತೈಪೆಯಲ್ಲಿ ನದಿಗೆ ಬಿದ್ದು ಅಪಘಾತಕ್ಕೀಡಾದ ವಿಮಾನದಿಂದ ಬದುಕುಳಿದ ಪ್ರಯಾಣಿಕರನ್ನು ರಕ್ಷಿಸಲಾಯಿತು. ಐಎಸ್ಐಎಸ್ ಉಗ್ರರು ಹತ್ಯೆಗೈದ ಜೋರ್ಡಾನ್ ಪೈಲೆಟ್‌ನ ಛಾಯಾಚಿತ್ರ ಹಿಡಿದು ಆತನ ತಾಯಿ ಹಾಗೂ ಪತ್ನಿ ದುಃಖಿಸಿದರು. ನವದೆಹಲಿಯ ಗುರ್ಗಾಂವ್‌ನಲ್ಲಿ ತರಬೇತಿ ಮುಗಿಸಿದ ಸಿಆರ್‌ಪಿಎಫ್ ಯೋಧರು ಪಾಸಿಂಗ್ ಔಟ್ ಪರೇಡ್ ಸಮಯದಲ್ಲಿ ವಿವಿಧ ಬಹುಮಾನ ಗಳಿಸಿದರು.
ಶ್ರೀಲಂಕಾದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಂದರ್ಭ ತಮಿಳು ನರ್ತಕಿಯೊಬ್ಬರು ತಮ್ಮ ಕಲೆ ಪ್ರದರ್ಶಿಸಿದರು. ಹರ್ಯಾಣದ ಸೂರಜ್‌ಕುಂಡ್‌ನ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ವಿದೇಶಿ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇನ್ನೂ ಹಲವು ಸುದ್ದಿಗಳಿಗಾಗಿ ಈ ಕೆಳಗೆ ಕ್ಲಿಕ್ ಮಾಡಿ.

ಬೆಸ್ಟ್ ಆಲ್ ರೌಂಡರ್ ಟ್ರೇನಿ
ಗುರ್ಗಾಂವ್‌ನಲ್ಲಿ ಆಯೋಜಿಸಿದ್ದ ಸಿಆರ್‌ಪಿಎಫ್ ಪಾಸಿಂಗ್ ಔಟ್ ಅಕಾಡೆಮಿ ಪರೇಡ್‌ನಲ್ಲಿ ತರಬೇತಿ ಸಂದರ್ಭ ಉತ್ತಮ ಪ್ರದರ್ಶನ ತೋರಿದ ಸೈನಿಕನಿಗೆ 'ಬೆಸ್ಟ್ ಆಲ್ ರೌಂಡರ್ ಟ್ರೇನಿ' ಗೌರವದ ನಿಮಿತ್ತ ಖಡ್ಗ ನೀಡಿ ಗೌರವಿಸಲಾಯಿತು.

ಉತ್ತಮ ಪ್ರದರ್ಶನಕ್ಕೆ ಬಹುಮಾನ
ಗುರ್ಗಾಂವ್‌ನಲ್ಲಿ ಆಯೋಜಿಸಿದ್ದ ಸಿಆರ್‌ಪಿಎಫ್ ಪಾಸಿಂಗ್ ಔಟ್ ಅಕಾಡೆಮಿ ಪರೇಡ್‌ನಲ್ಲಿ ತರಬೇತಿ ಸಂದರ್ಭ ಉತ್ತಮ ಪ್ರದರ್ಶನ ತೋರಿದವರಿಗೆ ಬಹುಮಾನ ನೀಡಲಾಯಿತು.

ತಮಿಳಿಗರ ನರ್ತನ
ಶ್ರೀಲಂಕಾದ ಕೊಲಂಬೋದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ತಮಿಳು ನರ್ತಕಿಯೊಬ್ಬರು ತೋರಿದ ಪ್ರದರ್ಶನ.

ವಿದೇಶಿ ಕಲಾವಿದರು
ಹರ್ಯಾಣದ ಸೂರಜ್‌ಕುಂಡ್‌ನ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ವಿದೇಶಿ ಕಲಾವಿದರು ತೋರಿದ ಪ್ರದರ್ಶನ.

ಬ್ರಿಟಿಷ್ ಏಶಿಯನ್ ಟ್ರಸ್ಟ್ ಊಟ
ಲಂಡನ್‌ನಲ್ಲಿ ಭಾರತೀಯ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ಬಾಲಿವುಡ್ ನಟಿ ರಾಣಿ ಮುಖರ್ಜಿ, ಬ್ರಿಟನ್ ರಾಜಕುಮಾರ ಚಾರ್ಲ್ಸ್, ಡಚೆಸ್ ಕಾರ್ನವಾಲ್ ಅವರು ಬ್ರಿಟಿಷ್ ಏಶಿಯನ್ ಟ್ರಸ್ಟ್ ಊಟದಲ್ಲಿ ಭಾಗವಹಿಸಿದ್ದರು.

ಉಪ ಕುಲಪತಿಗಳ ಸಭೆ
ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ಸಭೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಭಾಗವಹಿಸಿದ್ದರು.

ಕೇಜ್ರಿವಾಲ್, ಅಶುತೋಶ್
ನವದೆಹಲಿಯಲ್ಲಿ ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್ ಅವರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಹೊರಬರುತ್ತಿರುವುದು. ಅವರೊಂದಿಗೆ ಇನ್ನೋರ್ವ ಮುಖಂಡ ಅಶುತೋಶ್ ಇದ್ದರು.

ರಾಹುಲ್ ಪ್ರಚಾರ
ನವದೆಹಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದರು.

ನಾವು ವಲಸಿಗರಲ್ಲ
ಬಿಜೆಪಿ ಬಿಡುಗಡೆ ಮಾಡಿರುವ ದೂರದೃಷ್ಟಿ ದಾಖಲೆಯಲ್ಲಿ ಪೂರ್ವ ರಾಜ್ಯಗಳ ಜನರನ್ನು ವಲಸಿಗರು ಎಂದು ಹೇಳಿದ್ದನ್ನು ಉಲ್ಲೇಖಿಸಿ ಗುವಾಹಟಿಯಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ಜನರು ಪ್ರತಿಭಟನೆ ನಡೆಸಿದರು.

ಬದುಕುಳಿದವರ ರಕ್ಷಣೆ
ತೈವಾನ್‌ನ ತೈಪೆಯಲ್ಲಿ ನದಿಯೊಂದರಲ್ಲಿ ಬಿದ್ದು ಅಪಘಾತಕ್ಕೀಡಾದ ವಿಮಾನದಲ್ಲಿ ಬದುಕುಳಿದವರ ರಕ್ಷಣಾ ಕಾರ್ಯ ನಡೆಯಿತು.

ತಾಯಿಯ ದುಃಖ
ಐಎಸ್ಐಎಸ್ ಉಗ್ರರು ಸುಟ್ಟು ಕೊಂದ ಜೋರ್ಡಾನ್ ಪೈಲಟ್ ಲೆ. ಮುವಾತ್ ಅಲ್-ಕಾಸೀಸ್ಬೆ ಅವರ ತಾಯಿ ತಮ್ಮ ಮಗುವಿನ ಛಾಯಾಚಿತ್ರವನ್ನು ಹಿಡಿದು ಅಮ್ಮಾನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಪತ್ನಿಯ ಸಂಕಟ
ಐಎಸ್ಐಎಸ್ ಉಗ್ರರು ಸುಟ್ಟು ಕೊಂದ ಜೋರ್ಡಾನ್ ಪೈಲಟ್ ಪತ್ನಿ ಅನ್ವರ್ ಅಲ್ ತರಾವ್ನೆ ತಮ್ಮ ಪತಿಯ ಛಾಯಾಚಿತ್ರ ಹಿಡಿದು ಅಮ್ಮಾನ್‌ನಲ್ಲಿ ಪ್ರತಿಭಟಿಸಿದರು.

ಕಟಕಟೆಯಲ್ಲಿ ದಾವೂದ್ ಸಹೋದರ
ಹಲ್ಲೆ ಹಾಗೂ ಸುಲಿಗೆ ನಡೆಸಿದ ಆರೋಪ ಎದುರಿಸುತ್ತಿರುವ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್‌ನನ್ನು ಮುಂಬೈಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications