ಗುರುವಾರದ ದೇಶ, ವಿದೇಶದ ಸುದ್ದಿ ಚಿತ್ರಗಳಲ್ಲಿ ನೋಡಿ

ಬೆಂಗಳೂರು, ಫೆ. 5: ದೇಶ ಹಾಗೂ ವಿದೇಶಗಳಲ್ಲಿ ಗುರುವಾರ ನಡೆದ ಪ್ರಮುಖ ಘಟನಾವಳಿಗಳ ಸುದ್ದಿಗಳ ಸಂಕ್ಷಿಪ್ತ ವಿವರಣೆಯನ್ನು ಚಿತ್ರ ಸಹಿತ ಇಲ್ಲಿ ನೀಡಲಾಗಿದೆ.

ನವದೆಹಲಿಯಲ್ಲಿ ನೂತನ ಗೃಹ ಕಾರ್ಯದರ್ಶಿಯಾಗಿ ಎಸ್.ಸಿ. ಗೋಯಲ್ ಅವರಿಂದ ಅಧಿಕಾರ ಸ್ವೀಕಾರ, ಸೂರಜ್‌ಕುಂಡ್‌ನ ಫರೀದಾಬಾದ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಜಾನಪದ ನೃತ್ಯ ಪ್ರದರ್ಶನ, ನವದೆಹಲಿಯಲ್ಲಿ ಹಾಲಿವುಡ್ ನಟ ಹಾಗೂ ಕ್ಯಾಲಿಫೋರ್ನಿಯಾ ಮಾಜಿ ರಾಜ್ಯಪಾಲ ಅರ್ನಾಲ್ಡ್ ಸ್ಕ್ವಾರ್ಜನೆಗರ್ ವಿದ್ಯಾರ್ಥಿಗಳೊಂದಿಗೆ ಫೋಟೊ ತೆಗೆಸಿಕೊಂಡರು. ತೈಪೆಯಲ್ಲಿ ನದಿಗೆ ಬಿದ್ದ ವಿಮಾನದ ಅವಶೇಷ ಹೊರತೆಗೆಯಲಾಯಿತು.

ಚೆನ್ನೈನ ಮರೀನಾ ಬೀಚ್‌ನಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ದಿನದ ನಿಮಿತ್ತ ಧೂಮಪಾನ ವಿರುದ್ಧ ಜಾಗೃತಿ ರ್ಯಾಲಿ ನಡೆಸಿದರು. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಿರಣ್ ಬೇಡಿ ಹಾಗೂ ಅರವಿಂದ ಕೇಜ್ರಿವಾಲ್ ಪ್ರಚಾರದಲ್ಲಿ ಭಾಗವಹಿಸಿದ್ದರು. ಇನ್ನಷ್ಟು ಸುದ್ದಿಗಳಿಗಾಗಿ ಕೆಳಗೆ ಕ್ಲಿಕ್ ಮಾಡಿ.

ನವದೆಹಲಿಯಲ್ಲಿ ಅರ್ನಾಲ್ಡ್

ನವದೆಹಲಿಯಲ್ಲಿ ಅರ್ನಾಲ್ಡ್

ಹಾಲಿವುಡ್ ನಟ ಹಾಗೂ ಕ್ಯಾಲಿಫೋರ್ನಿಯಾ ಮಾಜಿ ರಾಜ್ಯಪಾಲ ಅರ್ನಾಲ್ಡ್ ಸ್ಕ್ವಾರ್ಜನೆಗರ್ ಅವರು ನವದೆಹಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಫೋಟೊ ತೆಗೆಸಿಕೊಂಡರು.

ಜಾನಪದ ನೃತ್ಯ

ಜಾನಪದ ನೃತ್ಯ

ಸೂರಜ್‌ಕುಂಡ್‌ನ ಫರೀದಾಬಾದ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಜಾನಪದ ನೃತ್ಯ ಪ್ರದರ್ಶನ ನೀಡಿದ ಜಾನಪದ ಕಲಾವಿದರು.

ವಿಸಿಟರ್ಸ್ ಅವಾರ್ಡ್

ವಿಸಿಟರ್ಸ್ ಅವಾರ್ಡ್

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ Visitor's Award for Innovation 2015 ಅನ್ನು ದೆಹಲಿ ವಿಶ್ವವಿದ್ಯಾಲಯದ ಪ್ರೊ. ವಿಜಯ ಕೆ. ಚೌಧರಿ ಹಾಗೂ ಡಾ. ಅಮಿತಾ ಗುಪ್ತಾ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿತರಿಸಿದರು.

ಜಾಗೃತಿ ರ್ಯಾಲಿ

ಜಾಗೃತಿ ರ್ಯಾಲಿ

ಚೆನ್ನೈನ ಮರೀನಾ ಬೀಚ್‌ನಲ್ಲಿ ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ಕಾಲೇಜು ವಿದ್ಯಾರ್ಥಿಗಳು ಜಾಗೃತಿ ರ್ಯಾಲಿ ಹಮ್ಮಿಕೊಂಡಿದ್ದರು.

ಕೇಜ್ರಿವಾಲ್‌ಗೆ ಸನ್ಮಾನ

ಕೇಜ್ರಿವಾಲ್‌ಗೆ ಸನ್ಮಾನ

ನವದೆಹಲಿಯ ತಿಲಕ್ ನಗರದಲ್ಲಿ ಆಯೋಜಿಸಿದ್ದ ಚುನಾವಣೆ ಪ್ರಚಾರದಲ್ಲಿ ಆದ್ಮಿ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್ ಅವರನ್ನು ಗೌರವಿಸಲಾಯಿತು.

ಮೋದಿ-ಬೇಡಿ ಚರ್ಚೆ

ಮೋದಿ-ಬೇಡಿ ಚರ್ಚೆ

ನವದೆಹಲಿಯ ಅಂಬೇಡ್ಕರ್ ನಗರದಲ್ಲಿ ಆಯೋಜಿಸಿದ್ದ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಗಹನ ಚರ್ಚೆ ನಡೆಸಿದರು.

ಕಣ್ಣೀರ ಧಾರೆ

ಕಣ್ಣೀರ ಧಾರೆ

ನವದೆಹಲಿಯಲ್ಲಿ ಪ್ರಚಾರ ಕೈಗೊಂಡ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ನೆರೆದ ಜನ ನೋಡಿ ಕಣ್ಣೀರು ಸುರಿಸಿದರು.

ಮೋದಿ ಭಂಗಿ

ಮೋದಿ ಭಂಗಿ

ನವದೆಹಲಿಯಲ್ಲಿ ನಡೆದ ಚುನಾವಣೆ ಪ್ರಚಾರ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವಾಗ ತೋರಿದ ಭಂಗಿ.

ಅಧಿಕಾರ ಸ್ವೀಕಾರ

ಅಧಿಕಾರ ಸ್ವೀಕಾರ

ನವದೆಹಲಿಯ ನಾರ್ತ್ ಬ್ಲಾಕ್‌ ಕಚೇರಿಯಲ್ಲಿ ಗೃಹ ಕಾರ್ಯದರ್ಶಿಯಾಗಿ ಎಲ್.ಸಿ. ಗೋಯಲ್ ಅಧಿಕಾರ ವಹಿಸಿಕೊಂಡರು.

ವಿಮಾನದ ಅವಶೇಷ

ವಿಮಾನದ ಅವಶೇಷ

ತೈವಾನ್‌ನ ತೈಪೆಯಲ್ಲಿ ನದಿಗೆ ಬಿದ್ದು ನಾಶವಾದ ವಿಮಾನದ ಅವಶೇಷಗಳನ್ನು ಮೇಲಕ್ಕೆತ್ತಲಾಯಿತು.

ಭೀಕರ ಅಪಘಾತ

ಭೀಕರ ಅಪಘಾತ

ನ್ಯೂಯಾರ್ಕ್‌ನ ವಲ್ಹಾಲ್ಲಾ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಸುಟ್ಟುಹೋದ ರೈಲು ಹಾಗೂ ಕಾರು.

ಚಿನ್ನದ ಪದಕ

ಚಿನ್ನದ ಪದಕ

ತ್ರಿಶೂರ್‌ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗೇಮ್ಸ್‌ನ ಭಾರ ಎತ್ತುವ ಸ್ಪರ್ಧೆಯಲ್ಲಿ ಆಸ್ಸಾಂನ ಜಮೀರ್ ಹುಸೇನ್ 326 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+