ದೇಶದಲ್ಲಿ ನಡೆದ ವಿವಿಧ ಘಟನಾವಳಿಗಳ ಪಕ್ಷಿನೋಟ
ಬೆಂಗಳೂರು, ಜ. 21: ಭಾರತದಲ್ಲಿ ಬುಧವಾರ ಹಲವು ಕಾರ್ಯಕ್ರಮಗಳು ಸಂಭವಿಸಿದವು. ಹಲವು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಹಾಗೂ ಇನ್ನು ಕೆಲವು ವಿವಿಧ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದು. ಅವುಗಳಲ್ಲಿ ಪ್ರಮುಖ ಘಟನೆಗಳನ್ನು ಚಿತ್ರ ಸಹಿತ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ವಿದ್ಯಾರ್ಥಿಗಳ ಜೊತೆ ಮಂಜುಳ್ ಭಾರ್ಗವ
ಅಮೆರಿಕದಲ್ಲಿ ಗಣಿತ ಪ್ರೊಫೆಸರ್ ಆಗಿರುವ ಭಾರತದ ಮೂಲದ ಮಂಜುಳ್ ಭಾರ್ಗವ ಬುಧವಾರ ಬೆಂಗಳೂರಿನಲ್ಲಿ ಫೀಲ್ಡ್ಸ್ ಮೆಡಲ್ ವಿಜೇತ ವಿದ್ಯಾರ್ಥಿಗಳೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ಮಯನ್ಮಾರ್ ಉಪಾಧ್ಯಕ್ಷರ ಭೇಟಿ
ಮಯನ್ಮಾರ್ ಗಣರಾಜ್ಯದ ಉಪಾಧ್ಯಕ್ಷ ಸಾಯ್ ಮಾವುಕ್ ಖಾನ್ ಅವರು ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬುಧವಾರ ಭೇಟಿ ಮಾಡಿದರು.

ಬಹುಮಾನ ವಿತರಣೆ
ಮುಂಬೈನ ಕೆ.ಪಿ.ಬಿ ಹಿಂದೂಜಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 40ನೇ ವಾರ್ಷಿಕೋತ್ಸವದಲ್ಲಿ ಹಿಂದೂಜಾ ಸಮೂಹದ ಜಿ.ಪಿ. ಹಿಂದೂಜಾ ಅವರು ವಿದ್ಯಾರ್ಥಿನಿಗೆ ಬಹುಮಾನ ವಿತರಿಸಿದರು.

ಯೂ ಟರ್ನ್ ಸರ್ಕಾರ
ಗೋಗೊಯ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಂಜನ್ ದತ್ತಾ ಅವರು ಕೇಂದ್ರದ ಬಿಜೆಪಿ ಸರ್ಕಾರ ಕುರಿತ 'ಯು ಟರ್ನ್' ಪುಸ್ತಕವನ್ನು ಬುಧವಾರ ಬಿಡುಗಡೆ ಮಾಡಿದರು.

ಮೀನುಗಾರರ ಪ್ರತಿಭಟನೆ
ಆಳ ಸಮುದ್ರ ಮೀನುಗಾರಿಕೆ ಕುರಿತು ಡಾ. ಬಿ. ಮೀನಾಕುಮಾರಿ ಸಮಿತಿ ನೀಡಿರುವ ವರದಿ ವಿರೋಧಿಸಿ ಮೀನುಗಾರರು ಬುಧವಾರ ಕೊಚ್ಚಿ ಹಾಗೂ ವೈಪೀನ್ ಮಧ್ಯೆಯ ಸಮುದ್ರ ಮಾರ್ಗದಲ್ಲಿ ಬೋಟ್ ನಿಲ್ಲಿಸಿ, ಮೀನುಗಾರಿಕೆ ನಡೆಸದೆ ಪ್ರತಿಭಟಿಸಿದರು.

ಗಲಭೆ ಸಂತ್ರಸ್ತರು
ಬಿಹಾರದ ಮುಜಾಫರ್‌ಪುರದಲ್ಲಿ ನಡೆದ ಗಲಭೆಯಲ್ಲಿ ತೊಂದರೆ ಅನುಭವಿಸಿದ ಜನರ ಅಹವಾಲುಗಳನ್ನು ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಮಾತನಾಡಿದರು.

ಸಂಚಾರ ಜಾಗೃತಿಯಲ್ಲಿ ಬಾಲಿವುಡ್ ನಟಿ
ಮುಂಬೈನ ಥಾಣೆಯಲ್ಲಿ ನಡೆದ ಸಂಚಾರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ಮಾತನಾಡಿದರು.

ಜೈಪುರ ಜಾಹಿತ್ಯೋತ್ಸವ
ರಾಜಸ್ತಾನದ ಜೈಪುರದಲ್ಲಿ ಬುಧವಾರ ಆಯೋಜಿಸಿದ್ದ ಜೈಪುರ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ ಹಾಗೂ ಗಿರೀಶ್ ಕಾರ್ನಾಡ್.

ಚಿಟ್ ಫಂಡ್‌ನಲ್ಲಿ ನಷ್ಟ : ಪ್ರತಿಭಟನೆ
ಕೋಲ್ಕೊತದಲ್ಲಿ ಚಿಟ್ ಫಂಡ್‌ನಿಂದ ನಷ್ಟ ಅನುಭವಿಸಿದ ಗ್ರಾಹಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ರ್ಯಾಲಿ ನಡೆಸಿದರು.

ರಷ್ಯಾ ರಕ್ಷಣಾ ಸಚಿವರೊಂದಿಗೆ ಚರ್ಚೆ
ರಷ್ಯಾದ ರಕ್ಷಣಾ ಸಚಿವ ಸರ್ಜೀ ಶೋಯಿಗು ಜೊತೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಭೆ ನಡೆಸಿದರು.

ಶ್ರೀನಗರದಲ್ಲಿ ಬಂದ್
ಕಾಶ್ಮೀರದ ಶ್ರೀನಗರದಲ್ಲಿ ಬುಧವಾರ ನಡೆದ ಬಂದ್ ಸಂದರ್ಭ ಲಾಲ್ ಚೌಕ್‌ದಲ್ಲಿ ಕಂಡುಬಂದ ದೃಷ್ಯ.

ಜನರ ಆಕ್ರೋಶ
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ವಿದ್ಯಾರ್ಥಿಯೋರ್ವನ ಸಾವಿಗೆ ಕಾರಣವಾದ ಶಾಲಾ ಬಸ್ಸುಗಳಿಗೆ ಸ್ಥಳೀಯರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಶೀಲನಾ ಸಭೆಯಲ್ಲಿ ಪ್ರಧಾನಿ
ನವದೆಹಲಿಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಬುದ್ಧ ಮಹೋತ್ಸವ
ಅಂತಾರಾಷ್ಟ್ರೀಯ ಬುದ್ಧ ಮಹೋತ್ಸವದ ನಿಮಿತ್ತ ಬೌದ್ಧ ಸನ್ಯಾಸಿಗಳು ಮತ್ತು ಸ್ಥಳೀಯ ಭಕ್ತರು ಬುಧವಾರ ಬೋಧಗಯಾದಲ್ಲಿ ದುಂಗೇಶ್ವರಿ ಬೆಟ್ಟದಿಂದ ಮಹಾಬೋಧಿ ದೇವಸ್ಥಾನದವರಿಗೆ ಬುದ್ಧನ ಮೂರ್ತಿಯೊಂದಿಗೆ ಮೆರವಣಿಗೆ ನಡೆಸಿದರು.

ವಿಪತ್ತು ನಿರ್ವಹಣಾ ಪಡೆಯ ರೈಸಿಂಗ್ ಡೇ
ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 10ನೇ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರೊಂದಿಗೆ ಫೋಟೊ ತೆಗೆಸಿಕೊಂಡ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications