ಶುಕ್ರವಾರ ದೇಶದಲ್ಲಿ ಏನೆಲ್ಲಾ ಆಯ್ತು ಗೊತ್ತಾ?

ಬೆಂಗಳೂರು, ಫೆ. 6: ದೇಶ ಹಾಗೂ ವಿದೇಶಗಳಲ್ಲಿ ಶುಕ್ರವಾರ ನಡೆದ ಹಲವು ಘಟನಾವಳಿಗಳ ಚಿತ್ರ ಸಹಿತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ಮುಂಬೈನಲ್ಲಿ ಶಮಿತಾಬ್ ಚಿತ್ರದ ಸ್ಕ್ರೀನಿಂಗ್‌ನಲ್ಲಿ ಭಾಗವಹಿಸಿದ್ದ ನಟಿ ಅಕ್ಷರಾ ಹಾಸನ್, ನವದೆಹಲಿಯ ಎಐಸಿಸಿ ಮುಖ್ಯ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ, ನವದೆಹಲಿಯ ಗುರುದ್ವಾರ ರಕಬ್ ಗಂಜ್ ಸಾಹೀಬ್‌ನಲ್ಲಿ ಅರವಿಂದ ಕೇಜ್ರಿವಾಲ್ ಪ್ರಾರ್ಥನೆ, ಅಫ್ಘಾನಿಸ್ತಾನದ ಕಾಬುಲ್ ಹತ್ತಿರ ಇರುವ ಮೆಸ್ ಅಯ್ನಾಕ್ ಕಣಿವೆಯಲ್ಲಿರುವ ಗುಹೆಯಲ್ಲಿ ಕಂಡುಬಂದ ಬುದ್ಧನ ವಿಗ್ರಹ, ಸೂರಜ್‌ಕುಂಡ್‌ನ ಫರೀದಾಬಾದ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಜಾನಪದ ನೃತ್ಯ ಪ್ರದರ್ಶಿಸಿದ ಕಲಾವಿದರು, ನವದೆಹಲಿಯಲ್ಲಿ ನಿತಿ ಆಯೋಗದ ಪ್ರಥಮ ಸಭೆ, ಒರಿಸ್ಸಾ ಬಜೆಟ್ ಅಧಿವೇಶನ ಮುಂತಾದ ಸುದ್ದಿಗಳನ್ನು ಚಿತ್ರ ಸಹಿತ ನೀಡಲಾಗಿದೆ.

ಅಕ್ಷರಾ ಸೌಂದರ್ಯ ಅನಾವರಣ

ಅಕ್ಷರಾ ಸೌಂದರ್ಯ ಅನಾವರಣ

ಮುಂಬೈನಲ್ಲಿ ನಡೆದ ಶಮಿತಾಬ್ ಚಿತ್ರದ ಸ್ಕ್ರೀನಿಂಗ್‌ನಲ್ಲಿ ಭಾಗವಹಿಸಿದ್ದ ನಟಿ ಅಕ್ಷರಾ ಹಾಸನ್.

ಜಾನಪದ ನೃತ್ಯ

ಜಾನಪದ ನೃತ್ಯ

ಸೂರಜ್‌ಕುಂಡ್‌ನ ಫರೀದಾಬಾದ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಜಾನಪದ ನೃತ್ಯ ಪ್ರದರ್ಶಿಸಿದ ಕಲಾವಿದರು.

ಜಾನಪದ ಕಲಾವಿದರು

ಜಾನಪದ ಕಲಾವಿದರು

ಸೂರಜ್‌ಕುಂಡ್‌ನಲ್ಲಿನ ಫರೀದಾಬಾದ್‌ನಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ಭಾಗವಹಿಸಿದ್ದ ಜಾನಪದ ಕಲಾವಿದರು.

ಚಿನ್ನದ ಯುವತಿಯರು

ಚಿನ್ನದ ಯುವತಿಯರು

ಕೋಝಿಕೊಡೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗೇಮ್ಸ್‌ನ ಬೀಚ್ ವಾಲಿಬಾಲ್‌ನಲ್ಲಿ ಚಿನ್ನದ ಪದಕ ಗಳಿಸಿದ ಕೇರಳದ ಕೆ.ಎ. ಶಹಾನಾ ಹಾಗೂ ಇ ಅಶ್ವಾತಿ.

ಗುರುದ್ವಾರದಲ್ಲಿ ಪ್ರಾರ್ಥನೆ

ಗುರುದ್ವಾರದಲ್ಲಿ ಪ್ರಾರ್ಥನೆ

ನವದೆಹಲಿಯ ಗುರುದ್ವಾರ ರಕಬ್ ಗಂಜ್ ಸಾಹೀಬ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್.

ನಿತಿ ಆಯೋಗದ ಪ್ರಥಮ ಸಭೆ

ನಿತಿ ಆಯೋಗದ ಪ್ರಥಮ ಸಭೆ

ನವದೆಹಲಿಯಲ್ಲಿ ಆಯೋಜಿಸಿದ್ದ ನಿತಿ ಆಯೋಗದ ಪ್ರಥಮ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ವಿತ್ತ ಸಚಿವ ಅರುಣ್ ಜೈಟ್ಲಿ ಕೂಡ ಇದ್ದರು.

ಕಾಂಗ್ರೆಸ್ ಸಭೆ

ಕಾಂಗ್ರೆಸ್ ಸಭೆ

ನವದೆಹಲಿಯ ಎಐಸಿಸಿ ಮುಖ್ಯ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು.

ಸನ್ಮಾನ

ಸನ್ಮಾನ

ಮುಂಬೈನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯಾ ಅವರನ್ನು ಸನ್ಮಾನಿಸಿದರು.

ಅಘ್ಫಾನ್‌ನಲ್ಲಿ ಬುದ್ಧನ ವಿಗ್ರಹ

ಅಘ್ಫಾನ್‌ನಲ್ಲಿ ಬುದ್ಧನ ವಿಗ್ರಹ

ಅಫ್ಘಾನಿಸ್ತಾನದ ಕಾಬುಲ್ ಹತ್ತಿರ ಇರುವ ಮೆಸ್ ಅಯ್ನಾಕ್ ಕಣಿವೆಯಲ್ಲಿರುವ ಗುಹೆಯಲ್ಲಿ ಕಂಡುಬಂದ ಬುದ್ಧನ ವಿಗ್ರಹವನ್ನು ಪುರಾತತ್ವ ಶಾಸ್ತ್ರಜ್ಞರು ಸ್ವಚ್ಛಗೊಳಿಸಿದರು.

ನ್ಯಾಯಾಲಯಕ್ಕೆ ಹಾಜರು

ನ್ಯಾಯಾಲಯಕ್ಕೆ ಹಾಜರು

ಪಶ್ಚಿಮ ಬಂಗಾಳದಲ್ಲಿ ನಡೆದ ಬರ್ಧ್ವಾನ್ ಸ್ಫೋಟ ಪ್ರಕರಣದ ಆರೋಪಿ ಉಗ್ರಗಾಮಿ ಸಂಘಟನೆ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್‌ನ ಸದಸ್ಯ ಮುಫಜಿಲ್ ಹಕ್‌ನನ್ನು ಕೋಲ್ಕೊತಾದಲ್ಲಿ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹಾಜರುಪಡಿಸಿದರು.

ಒರಿಸ್ಸಾ ಬಜೆಟ್ ಅಧಿವೇಶನ

ಒರಿಸ್ಸಾ ಬಜೆಟ್ ಅಧಿವೇಶನ

ಒರಿಸ್ಸಾ ವಿಧಾನಸಭೆಯ ಬಜೆಟ್‌ ಅಧಿವೇಶನದಲ್ಲಿ ಮುಖ್ಯಮಂತ್ರಿ ನವೀನ್ ಪಾಟ್ನಾಯಿಕ್ ಹಾಗೂ ರಾಜ್ಯ ವಿತ್ತ ಸಚಿವ ಪ್ರದೀಪ್ ಅಮಾತ್ ಕಂಡುಬಂದಿದ್ದು ಹೀಗೆ.

ರೋದನ

ರೋದನ

ತೈವಾನ್‌ನ ತೈಪೆಯಲ್ಲಿ ನದಿಯಲ್ಲಿ ಪತನಗೊಂಡ ವಿಮಾನದ ಪ್ರಯಾಣಿಕರ ದೇಹವನ್ನು ಹೊರತೆಗೆದಾಗ ಅವರ ಸಂಬಂಧಿಕರು ರೋದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+