ಚಿತ್ರ ಸುದ್ದಿ : ಶುಕ್ರವಾರ ದೇಶದಲ್ಲಿ ಏನೇನಾಯ್ತು ನೋಡಿ...
ಬೆಂಗಳೂರು,
ಜ. 30: ದೇಶ ಹಾಗೂ ವಿದೇಶದಲ್ಲಿ ಶುಕ್ರವಾರ ನಡೆದ ಹಲವು ಘಟನಾವಳಿಗಳ ಕುರಿತು ಚಿತ್ರ ಸಹಿತ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿದೆ. id="toptextpromo"> id='are-slot-1' class='oiad oi-axt oiadv'>ನವದೆಹಲಿಯಲ್ಲಿ
ಮಹಾತ್ಮಾ ಗಾಂಧಿ ಪುಣ್ಯತಿಥಿ ಆಚರಣೆ, ತರಬೇತಿ ಮುಗಿಸಿ ಗಡಿ ಕಾಯಲು ಹೊರಟ ಬಿಎಸ್ಎಫ್ ಯೋಧರು, ತಮಿಳುನಾಡಿನ ಶಂಕರ ಮಠದಲ್ಲಿ ಮಾತೃಧರ್ಮಕ್ಕೆ ವಾಪಸ್ ಬಂದ ಕ್ರೈಸ್ತ ಧರ್ಮೀಯರು, ನಾಥುರಾಮ್ ಗೋಡ್ಸೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ನವದೆಹಲಿಯಲ್ಲಿ ಮಧ್ಯಪ್ರದೇಶ ಮಿತ್ರ ಮಂಡಳ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿವರಾಜ್ ಸಿಂಗ್ ಚವ್ಹಾಣ್, ಕಾಂಗ್ರೆಸ್ ತೊರೆದ ಜಯಂತಿ ನಟರಾಜನ್ ಸುದ್ದಿಗೋಷ್ಠಿ, ಜಮ್ಮುವಿನ ಗ್ರಾಮದ ಮೇಲೆ ಪಾಕಿಸ್ತಾನದಿಂದ ಶೆಲ್ ದಾಳಿ, ಶಾರದಾ ಚಿಟ್‌ಫಂಡ್ ಹಗರಣದಲ್ಲಿ ವಿಚಾರಣೆಗೆ ಹಾಜರಾದ ಸಂಸದ ಮುಕುಲ್ ರಾಯ್, ಪಾಕಿಸ್ತಾನದ ಮಸೀದಿಯಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಫೋಟದ ದೃಶ್ಯಗಳನ್ನು ಕಾಣಬಹುದು. id='are-slot-2' class='oiad oi-axt oiadv'>
ಪುಣ್ಯತಿಥಿಯಂದು ಸ್ವಚ್ಛತೆ ಜಾಗೃತಿ
ಓರಿಸ್ಸಾ ರಾಜಧಾನಿ ಭವನೇಶ್ವರದಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಪುಣ್ಯ ತಿಥಿ ಸಂದರ್ಭ ವಿದ್ಯಾರ್ಥಿಗಳು ಸ್ವಚ್ಛ ಭಾರತ ಅಭಿಯಾನ ನಡೆಸಿದರು.

ನರೇಂದ್ರ ನಮನ
ನವದೆಹಲಿಯ ಗಾಂಧಿ ಸ್ಮೃತಿಯಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಪುಣ್ಯ ತಿಥಿಯಲ್ಲಿ ಸಮಾಧಿಗೆ ನಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ.

ರಾಷ್ಟ್ರಪತಿಯಿಂದ ನಮನ
ನವದೆಹಲಿಯ ರಾಜಘಾಟ್‌ನಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಪುಣ್ಯ ತಿಥಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ಶ್ರದ್ಧಾಂಜಲಿ
ನವದೆಲಿಯ ರಾಜಘಾಟ್‌ನಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದರು.

ದೇಶದ ಕಾವಲುಗಾರರು
ಕಾಶ್ಮೀರದ ಶ್ರೀನಗರದಲ್ಲಿ ತರಬೇತಿ ಮುಗಿಸಿದ ಬಿಎಸ್ಎಫ್ ಸೈನಿಕರು ಪಾಸಿಂಗ್ ಔಟ್ ಪರೇಡ್ ನಡೆಸಿದಾಗ ಬಾಲಕಿಯೋರ್ವಳು ಚಿತ್ರವನ್ನು ಸೆರೆಹಿಡಿದಳು. ಈ ಪರೇಡ್‌ನಲ್ಲಿ 333 ಸೈನಿಕರು ತರಬೇತಿ ಮುಗಿಸಿ ದೇಶದ ಗಡಿ ಕಾಯಲು ಸಜ್ಜಾಗಿದ್ದಾರೆ.

ದೇಶದ ರಕ್ಷಣೆಗೆ ಸಜ್ಜು
ಕಾಶ್ಮೀರದ ಶ್ರೀನಗರದಲ್ಲಿ ತರಬೇತಿ ಮುಗಿಸಿ ದೇಶದ ಗಡಿ ಕಾಯಲು ಹೊರಟ ಬಿಎಸ್ಎಫ್ ಯೋಧರು ಪಾಸಿಂಗ್ ಪರೇಡ್ ನಡೆಸಿದರು.

ಮಾತೃಧರ್ಮಕ್ಕೆ ವಾಪಸ್
ತಮಿಳುನಾಡಿನ ಚೆನ್ನೈನ ಶಂಕರ ಮಠದಲ್ಲಿ ಹಿಂದೂ ಮಕ್ಕಳ್ ಕಚ್ಚಿ ಪಕ್ಷದ ನೇತೃತ್ವದಲ್ಲಿ ಹಲವು ಕ್ರೈಸ್ತ ಧರ್ಮೀಯರು ಹಿಂದೂ ಧರ್ಮಕ್ಕೆ ವಾಪಸ್ ಬಂದರು.

ಮಾತೃಧರ್ಮಕ್ಕೆ ವಾಪಸ್
ತಮಿಳುನಾಡಿನ ಚೆನ್ನೈನ ಶಂಕರ ಮಠದಲ್ಲಿ ಹಿಂದೂ ಮಕ್ಕಳ್ ಕಚ್ಚಿ ಪಕ್ಷದ ನೇತೃತ್ವದಲ್ಲಿ ಹಲವು ಕ್ರೈಸ್ತ ಧರ್ಮೀಯರು ಹಿಂದೂ ಧರ್ಮಕ್ಕೆ ವಾಪಸ್ ಬಂದರು.

ಪ್ರತಿಕೃತಿ ದಹನ
ಮಹಾತ್ಮಾ ಗಾಂಧಿ ಪುಣ್ಯ ತಿಥಿ ನಿಮಿತ್ತ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಪ್ರತಿಕೃತಿ ದಹಿಸಿ ಕಾಂಗ್ರೆಸ್ ಕಾರ್ಯಕರ್ತರು ಕೋಲ್ಕತದಲ್ಲಿ ಪ್ರತಿಭಟನೆ ನಡೆಸಿದರು.

ಮಧ್ಯಪ್ರದೇಶ ಮಿತ್ರ ಮಂಡಲ್
ನವದೆಹಲಿಯಲ್ಲಿ ಆಯೋಜಿಸಿದ್ದ ಮಧ್ಯಪ್ರದೇಶ ಮಿತ್ರ ಮಂಡಲ್ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಸನ್ಮಾನಿಸಲಾಯಿತು.

ಅಂಧರೊಂದಿಗೆ ಪ್ರಧಾನಿ
ನವದೆಹಲಿಯ ಗಾಂಧಿ ಸ್ಮೃತಿಯಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂಧ ವಿದ್ಯಾರ್ಥಿಗಳನ್ನು ಮಾತನಾಡಿಸಿದ ಪ್ರಧಾನಿ ನರೇಂದ್ರ ಮೋದಿ.

ಕೈ ಬಿಟ್ಟ ಜಯಂತಿ
ಕಾಂಗ್ರೆಸ್ ತೊರೆದ ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರು ನಜ್ಜುಗುಜ್ಜು
ಕಾನ್‌ಪುರದಲ್ಲಿ ಆಸ್ಪತ್ರೆಯ ಕಟ್ಟಡವೊಂದು ಬಿದ್ದಿದೆ. ಕಟ್ಟಡದ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ನಜ್ಜುಗುಜ್ಜಾಗಿದೆ.

ಪಾಕ್ ಶೆಲ್ ದಾಳಿ
ಜಮ್ಮು ಸಮೀಪದ ಗ್ರಾಮದ ಮೇಲೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಗಾಯಗೊಂಡು ಹಲವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಪಾಕ್ ಶೆಲ್ ದಾಳಿ
ಜಮ್ಮು ಸಮೀಪದ ಗ್ರಾಮದ ಮೇಲೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಗಾಯಗೊಂಡು ಹಲವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಪಾಕ್ ಶೆಲ್ ದಾಳಿ
ಜಮ್ಮು ಸಮೀಪದ ಗ್ರಾಮದ ಮೇಲೆ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಶೆಲ್‌ನ ಭಾಗವೊಂದನ್ನು ತೋರಿಸುತ್ತಿರುವ ಮಹಿಳೆ.

ವಿಚಾರಣೆಗೆ ಹಾಜರು
ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಗೆ ಕೋಲ್ಕತಾದ ಸಿಬಿಐ ಕಚೇರಿಗೆ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಭಾ ಸದಸ್ಯ ಮುಕುಲ್ ರಾಯ್ ಹಾಜರಾದರು.

ಭಾವಿ ಪತಿಯ ಸಾವು
ಇಸ್ರೇಲ್‌ನ ಲೆಬನಾನ್ ಗಡಿಯಲ್ಲಿ ನಡೆದ ಕಾಳಗದಲ್ಲಿ ಉಗ್ರರಿಂದ ಹತ್ಯೆಗೊಳಗಾದ ಸೈನಿಕನೋರ್ವನ ಭಾವಿ ಪತ್ನಿ ತೀವ್ರ ದುಃಖತಪ್ತಳಾದಳು.

ತಿರುಗುಬಾಣ
ಪಾಕಿಸ್ತಾನದ ಶಿಯಾ ಮಸೀದಿಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. 12ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಉಗ್ರವಾದವನ್ನು ಬೆಳೆಸಿದ್ದ ಪಾಕಿಸ್ತಾನಕ್ಕೆ ಅದೇ ಉಗ್ರರೇ ಈಗ ಕಂಟಕಪ್ರಾಯರಾಗಿದ್ದಾರೆ.












Click it and Unblock the Notifications